ಹಣಕಾಸು ಸಚಿವಾಲಯ

ಕೇಂದ್ರ ಬಜೆಟ್ 2023-24ರ ಮುಖ್ಯಾಂಶಗಳು

Posted On: 01 FEB 2023 1:35PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು ಸಂಸತ್ತಿನಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಬಜೆಟ್ ನ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಭಾಗ ಎ

•    ಸುಮಾರು ಒಂಬತ್ತು ವರ್ಷಗಳಲ್ಲಿ ತಲಾ ಆದಾಯವು ದ್ವಿಗುಣಗೊಂಡು  1.97 ಲಕ್ಷ ರೂ.ಗೆ ತಲುಪಿದೆ.

•    ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದ 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಏರಿದೆ.

•    ಇಪಿಎಫ್ಒ ಸದಸ್ಯತ್ವ ದ್ವಿಗುಣಗೊಂಡು 27 ಕೋಟಿಗೆ ತಲುಪಿದೆ.

•    2022 ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ.ಗಳ 7,400 ಕೋಟಿ ಡಿಜಿಟಲ್ ಪಾವತಿಗಳು ನಡೆದಿವೆ.

•    ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 11.7 ಕೋಟಿ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

•    ಉಜ್ವಲ ಯೋಜನೆಯಡಿ 9.6 ಕೋಟಿ ಎಲ್.ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ.

•    102 ಕೋಟಿ ಜನರಿಗೆ 220 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

•    47.8 ಕೋಟಿ ಪಿಎಂ ಜನ್ ಧನ್ ಬ್ಯಾಂಕ್ ಖಾತೆಗಳು.

•    ಪಿಎಂ ಸುರಕ್ಷಾ ಬಿಮಾ ಮತ್ತು ಪಿಎಂ ಜೀವನ್ ಜ್ಯೋತಿ ಯೋಜನೆ ಅಡಿಯಲ್ಲಿ 44.6 ಕೋಟಿ ಜನರಿಗೆ ವಿಮಾ ರಕ್ಷಣೆ.

•    ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 11.4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ರೂ. ವರ್ಗಾವಣೆ

•    ‘ಸಪ್ತರ್ಷಿ’  ಈ ಬಜೆಟ್ ನ ಏಳು ಆದ್ಯತೆಗಳಿದ್ದು, ಅವು ಸಮಗ್ರ ಅಭಿವೃದ್ಧಿ, ಕೊನೆಯ ಮೈಲಿಗೂ ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯವನ್ನು ಅನಾವರಣಗೊಳಿಸುವುದು, ಹಸಿರು ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯ ವಾಗಿದೆ.

•    ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗ ಮುಕ್ತ, ಗುಣಮಟ್ಟದ ನಾಟಿ ಸಾಮಗ್ರಿಗಳ ಲಭ್ಯತೆಯನ್ನು ಹೆಚ್ಚಿಸಲು 2200 ಕೋಟಿ ರೂ.ಗಳ ವೆಚ್ಚದಲ್ಲಿ ಆತ್ಮನಿರ್ಭರ ಸ್ವಚ್ಛ ಸಸ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

•    2014 ರಿಂದ ಸ್ಥಾಪಿಸಲಾಗಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು.

o    ಮುಂದಿನ ಮೂರು ವರ್ಷಗಳಲ್ಲಿ 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಕೇಂದ್ರ ನೇಮಕ ಮಾಡಲಿದೆ.

o    ಪ್ರಧಾನಮಂತ್ರಿ ವಸತಿ ಯೋಜನೆಯ ವೆಚ್ಚವನ್ನು  ಶೇ.66ರಷ್ಟು ಹೆಚ್ಚಿಸಿ 79,000 ಕೋಟಿ ರೂ.ಗೆ ಏರಿಸಲಾಗಿದೆ.

o    ರೈಲ್ವೆಗೆ 2.40 ಲಕ್ಷ ಕೋಟಿ ರೂ.ಗಳ ಬಂಡವಾಳ ವಿನಿಯೋಗವನ್ನು ಒದಗಿಸಲಾಗಿದೆ, ಇದು ಇದುವರೆಗಿನ ಅತ್ಯಧಿಕ ವೆಚ್ಚವಾಗಿದೆ ಮತ್ತು 2013-14ರಲ್ಲಿ ಮಾಡಿದ ವೆಚ್ಚಕ್ಕಿಂತ ಒಂಬತ್ತು ಪಟ್ಟು ಹೆಚ್ಚಾಗಿದೆ.

o    ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್) ಅನ್ನು ಆದ್ಯತೆಯ ವಲಯದ ಸಾಲದ ಕೊರತೆಯ ಬಳಕೆಯ ಮೂಲಕ ಸ್ಥಾಪಿಸಲಾಗುವುದು, ಇದನ್ನು ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ನಗರ ಮೂಲಸೌಕರ್ಯಗಳನ್ನು ರಚಿಸಲು ಸಾರ್ವಜನಿಕ ಸಂಸ್ಥೆಗಳು ಬಳಸುತ್ತವೆ.

•    ಆನ್ ಲೈನ್ ನಲ್ಲಿ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಎಂಎಸ್.ಎಂಇಗಳು, ದೊಡ್ಡ ವ್ಯಾಪಾರ ಮತ್ತು ಚಾರಿಟಬಲ್ ಟ್ರಸ್ಟ್ ಗಳ ಬಳಕೆಗಾಗಿ ಎಂಟಿಟಿ ಡಿಜಿಲಾಕರ್ ಅನ್ನು ಸ್ಥಾಪಿಸಲಾಗುವುದು.

•    ಹೊಸ ಶ್ರೇಣಿಯ ಅವಕಾಶಗಳು, ವ್ಯವಹಾರ ಮಾದರಿಗಳು ಮತ್ತು ಉದ್ಯೋಗ ಸಾಮರ್ಥ್ಯವನ್ನು ಅರಿತುಕೊಳ್ಳಲು 5 ಜಿ ಸೇವೆಗಳ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಗೆ 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

•    ಒಟ್ಟು 10,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ (ಸಾವಯವ ಜೈವಿಕ-ಕೃಷಿ ಸಂಪನ್ಮೂಲ ಧನ) ಯೋಜನೆಯಡಿ 500 ಹೊಸ 'ತ್ಯಾಜ್ಯದಿಂದ ಸಂಪತ್ತು' ಘಟಕಗಳನ್ನು ಸ್ಥಾಪಿಸಲಾಗುವುದು. ನೈಸರ್ಗಿಕ ಮತ್ತು ಜೈವಿಕ ಅನಿಲವನ್ನು ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೆ ಶೇಕಡಾ 5 ರಷ್ಟು ಸಂಕುಚಿತ ಜೈವಿಕ ಅನಿಲವನ್ನು ಪರಿಚಯಿಸಲಾಗುವುದು. 

•    ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಕೇಂದ್ರವು ಅನುಕೂಲ ಮಾಡಿಕೊಡಲಿದೆ. ಇದಕ್ಕಾಗಿ, 10,000 ಜೈವಿಕ-ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಇದು ರಾಷ್ಟ್ರಮಟ್ಟದ ವಿತರಿಸಿದ ಸೂಕ್ಷ್ಮ ರಸಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಜಾಲವನ್ನು ಸೃಷ್ಟಿಸುತ್ತದೆ.

•    ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೋಡಿಂಗ್, ಎಐ, ರೊಬೊಟಿಕ್ಸ್, ಮೆಕ್ಯಾಟ್ರಾನಿಕ್ಸ್, ಐಒಟಿ, 3ಡಿ ಪ್ರಿಂಟಿಂಗ್, ಡ್ರೋನ್ ಗಳು ಮತ್ತು ಮೃದು ಕೌಶಲದಂತಹ ಇಂಡಸ್ಟ್ರಿ 4.0 ಗಾಗಿ ಹೊಸ ಯುಗದ ಕೋರ್ಸ್ ಗಳನ್ನು ಒಳಗೊಂಡು ಲಕ್ಷಾಂತರ ಯುವಕರಿಗೆ ಕೌಶಲ್ಯ ನೀಡಲು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 4.0 ಅನ್ನು ಪ್ರಾರಂಭಿಸಲಾಗುವುದು.

•    ಅಂತಾರಾಷ್ಟ್ರೀಯ  ಅವಕಾಶಗಳಿಗಾಗಿ ಯುವಕರನ್ನು ಕೌಶಲ್ಯಗೊಳಿಸಲು ವಿವಿಧ ರಾಜ್ಯಗಳಲ್ಲಿ 30 ಕೌಶಲ್ಯ ಭಾರತ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು

•    9 ಸಾವಿರ ಕೋಟಿ ರೂ. ಪೂರಣದೊಂದಿಗೆ ಎಂ.ಎಸ್.ಎಂ.ಇ.ಗಳಿಗೆ ಪರಿಷ್ಕೃತ ಸಾಲ ಖಾತರಿ ಯೋಜನೆ 2023 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಯೋಜನೆಯು 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಮೇಲಾಧಾರ ರಹಿತ ಖಾತರಿ ಸಾಲವನ್ನು ಶಕ್ತಗೊಳಿಸುತ್ತದೆ ಮತ್ತು ಸಾಲದ ವೆಚ್ಚವನ್ನು ಸುಮಾರು 1 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.

•    ಕಂಪನಿಗಳ ಕಾಯ್ದೆಯಡಿ ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಲಾದ ವಿವಿಧ ನಮೂನೆಗಳನ್ನು ಕೇಂದ್ರೀಕೃತವಾಗಿ ನಿರ್ವಹಿಸುವ ಮೂಲಕ ಕಂಪನಿಗಳಿಗೆ ತ್ವರಿತ ಪ್ರತಿಕ್ರಿಯೆಗಾಗಿ ಕೇಂದ್ರೀಯ ಪ್ರಕ್ರಿಯಾ ಕೇಂದ್ರವನ್ನು ಸ್ಥಾಪಿಸಲಾಗುವುದು.

•    ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.

•    2025-26ರ ವೇಳೆಗೆ ವಿತ್ತೀಯ ಕೊರತೆ ಶೇ.4.5ಕ್ಕಿಂತ ಕಡಿಮೆ ಇರಲಿದೆ.

•    ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ-ನವೋದ್ಯಮಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು.

•    ಭಾರತವನ್ನು 'ಶ್ರೀ ಅನ್ನ'ದ ಜಾಗತಿಕ ಕೇಂದ್ರವನ್ನಾಗಿ ಮಾಡಲು, ಹೈದರಾಬಾದ್ ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರೂಢಿಗಳು, ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳುವ ಉತ್ಕೃಷ್ಟತೆಯ ಕೇಂದ್ರವಾಗಿ ಉತ್ತೇಜಿಸಲಾಗುವುದು.

•    ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ 20 ಲಕ್ಷ ಕೋಟಿ ರೂ.ಗಳ ಕೃಷಿ ಸಾಲದ ಗುರಿ

•    ಮೀನುಗಾರರು, ಮೀನು ಮಾರಾಟಗಾರರು ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು, ಮೌಲ್ಯ ಸರಪಳಿ ದಕ್ಷತೆಯನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು 6,000 ಕೋಟಿ ರೂ.ಗಳ ಗುರಿಯೊಂದಿಗೆ ಪಿಎಂ ಮತ್ಸ್ಯ ಸಂಪದ ಯೋಜನೆಯ ಹೊಸ ಉಪ ಯೋಜನೆಯನ್ನು ಪ್ರಾರಂಭಿಸಲಾಗುವುದು.

•    ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ ಮೂಲವಾಗಿ, ಮುಕ್ತ ಮಾನದಂಡವಾಗಿ ಮತ್ತು ಅಂತರ್ಗತ ರೈತ ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸಲು ಮತ್ತು ಕೃಷಿ-ತಂತ್ರಜ್ಞಾನ ಉದ್ಯಮ ಮತ್ತು ನವೋದ್ಯಮಗಳ ಬೆಳವಣಿಗೆಗೆ ಬೆಂಬಲವನ್ನು ಸಕ್ರಿಯಗೊಳಿಸಲು ಸಾರ್ವಜನಿಕ ಒಳಿತಾಗಿ ನಿರ್ಮಿಸಲಾಗುವುದು. 

•    2,516 ಕೋಟಿ ರೂ.ಗಳ ಹೂಡಿಕೆಯೊಂದಿಗೆ 63,000 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ (ಪಿಎಸಿಎಸ್) ಗಣಕೀಕರಣವನ್ನು ಪ್ರಾರಂಭಿಸಲಾಯಿತು.

•    ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸೂಕ್ತ ಸಮಯದಲ್ಲಿ ಮಾರಾಟದ ಮೂಲಕ ಲಾಭದಾಯಕ ಬೆಲೆಗಳನ್ನು ಪಡೆಯಲು ಸಹಾಯ ಮಾಡಲು ಬೃಹತ್ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸಲಾಗುವುದು.

•    ಸಿಕಲ್ ಕೋಶ ರಕ್ತಹೀನತೆ ನಿರ್ಮೂಲನೆ ಅಭಿಯಾನವನ್ನು ಪ್ರಾರಂಭಿಸಲಾಗುವುದು.

•    ಸಹಯೋಗದ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಆಯ್ದ ಐಸಿಎಂಆರ್ ಪ್ರಯೋಗಾಲಯಗಳ ಮೂಲಕ ಜಂಟಿ ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಯನ್ನು ಉತ್ತೇಜಿಸಲಾಗುವುದು.

•    ಔಷಧ ಕ್ಷೇತ್ರದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

•    ಸತತ ಮೂರನೇ ವರ್ಷ ಶೇ.33 ರಷ್ಟು ಹೆಚ್ಚಳ, ಬೆಳವಣಿಗೆಯ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿ, ಕ್ರೌಡ್-ಇನ್ ಖಾಸಗಿ ಹೂಡಿಕೆ ಮತ್ತು ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ರಕ್ಷಣೆ ಒದಗಿಸಲು 10 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ.

•    ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಹಣಪೂರಣ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯಗಳಂತಹ ಬಹು ಆಯಾಮಗಳಲ್ಲಿ ಅಗತ್ಯ ಸರ್ಕಾರಿ ಸೇವೆಗಳ ಶುದ್ಧೀಕರಣಕ್ಕಾಗಿ 500 ವಿಭಾಗಗಳನ್ನು ಒಳಗೊಂಡ ಮಹತ್ವಾಕಾಂಕ್ಷೆಯ ಬ್ಲಾಕ್ ಗಳ ಕಾರ್ಯಕ್ರಮವನ್ನು ಪ್ರಾರಂಭ.

•    ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಅಭಿಯಾನ ಅನುಷ್ಠಾನಕ್ಕೆ 15,000 ಕೋಟಿ ರೂ.

•    ಬಂದರುಗಳು, ಕಲ್ಲಿದ್ದಲು, ಉಕ್ಕು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ವಲಯಗಳಿಗೆ ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕಕ್ಕಾಗಿ ನೂರು ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳಿಗೆ ಖಾಸಗಿ ಮೂಲಗಳಿಂದ 15,000 ಕೋಟಿ ರೂ.ಗಳು ಸೇರಿದಂತೆ 75,000 ಕೋಟಿ ರೂ. ಹೂಡಿಕೆ.

•    ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು ಹೊಸ ಮೂಲಸೌಕರ್ಯ ಹಣಕಾಸು ಸಚಿವಾಲಯ ಸ್ಥಾಪನೆ.

•    ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಶಿಕ್ಷಕರ ತರಬೇತಿಗಾಗಿ ಉತ್ಕೃಷ್ಟತೆಯ ರೋಮಾಂಚಕ ಸಂಸ್ಥೆಗಳಾಗಿ ಅಭಿವೃದ್ಧಿ.

•    ಭೌಗೋಳಿಕತೆಗಳು, ಭಾಷೆಗಳು, ಪ್ರಕಾರಗಳು ಮತ್ತು ಹಂತಗಳಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆ ಮತ್ತು ಸಾಧನ ಅಜ್ಞಾತ ಪ್ರವೇಶಕ್ಕೆ ಅನುಕೂಲವಾಗುವಂತೆ ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ

•    ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸಲು ಮತ್ತು ಕುಡಿಯುವ ನೀರಿಗಾಗಿ ಮೇಲ್ಮೈ ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹಂಚಿಕೆ

•    ಡಿಜಿಟಲ್ ಶಾಸನ ವಸ್ತು ಸಂಗ್ರಹಾಲಯದಲ್ಲಿ 'ಭಾರತ ಹಂಚಿಕೆಯ ಶಾಸನಗಳ ಭಂಡಾರ' - ಭಾರತ್ ಶೇರ್ಡ್ ರಿಪೋಸಿಟರಿ ಆಫ್ ಇನ್ ಸ್ಕ್ರಿಪ್ಷನ್ಸ್' ಸ್ಥಾಪಿಸಲಾಗುವುದು, ಮೊದಲ ಹಂತದಲ್ಲಿ ಒಂದು ಲಕ್ಷ ಪ್ರಾಚೀನ ಶಾಸನಗಳನ್ನು ಡಿಜಿಟಲೀಕರಿಸಲಾಗುವುದು.

•    ಕೇಂದ್ರದ 'ಪರಿಣಾಮಕಾರಿ ಬಂಡವಾಳ ವೆಚ್ಚ' 13.7 ಲಕ್ಷ ಕೋಟಿ ರೂ.

•    ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪೂರಕ ನೀತಿ ಕ್ರಮಗಳಿಗಾಗಿ ಅವುಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲವನ್ನು ಇನ್ನೂ ಒಂದು ವರ್ಷ ಮುಂದುವರಿಸಲಿದೆ.

•    ನಮ್ಮ ನಗರಗಳನ್ನು 'ನಾಳೆಯ ಸುಸ್ಥಿರ ನಗರಗಳಾಗಿ' ಪರಿವರ್ತಿಸಲು ನಗರ ಯೋಜನಾ ಸುಧಾರಣೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ನಗರಗಳಿಗೆ ಪ್ರೋತ್ಸಾಹ.

•    ಎಲ್ಲಾ ನಗರಗಳು ಮತ್ತು ಪಟ್ಟಣಗಳು ಸೆಪ್ಟಿಕ್ ಟ್ಯಾಂಕ್ ಗಳು ಮತ್ತು ಒಳಚರಂಡಿಗಳನ್ನು ಶೇಕಡಾ 100 ರಷ್ಟು ಯಾಂತ್ರಿಕವಾಗಿ ಸ್ವಚ್ಛಗೊಳಿಸಲು ಅನುವು ಮಾಡಿಕೊಡುವ ಮೂಲಕ ಮ್ಯಾನ್ ಹೋಲ್ ನಿಂದ ಯಂತ್ರ-ರಂಧ್ರ ವಿಧಾನಕ್ಕೆ ಪರಿವರ್ತನೆ.

•    ಐಜಿಒಟಿ ಕರ್ಮಯೋಗಿ ಎಂಬ ಸಮಗ್ರ ಆನ್ ಲೈನ್ ತರಬೇತಿ ವೇದಿಕೆಯನ್ನು ಲಕ್ಷಾಂತರ ಸರ್ಕಾರಿ ನೌಕರರಿಗೆ ತಮ್ಮ ಕೌಶಲ್ಯಗಳನ್ನು ನವೀಕರಿಸಲು ಮತ್ತು ಜನ-ಕೇಂದ್ರಿತ ವಿಧಾನವನ್ನು ಸುಗಮಗೊಳಿಸಲು ನಿರಂತರ ಕಲಿಕೆಯ ಅವಕಾಶಗಳನ್ನು ಒದಗಿಸಲು ಪ್ರಾರಂಭ.

•    ಸುಗಮ ವ್ಯಾಪಾರವನ್ನು ಹೆಚ್ಚಿಸಲು 39,000 ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಲಾಗಿದ್ದು, 3,400 ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

•    ವಿಶ್ವಾಸ ಆಧಾರಿತ ಆಡಳಿತವನ್ನು ಮತ್ತಷ್ಟು ಹೆಚ್ಚಿಸಲು 42 ಕೇಂದ್ರ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಜನ ವಿಶ್ವಾಸ್ ಮಸೂದೆಯನ್ನು ಪರಿಚಯಿಸಲಾಗಿದೆ.
· "ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವರ್ಕ್ ಫಾರ್ ಇಂಡಿಯಾ" (ಭಾರತಕ್ಕಾಗಿ ಕೃತಕ ಬುದ್ಧಿ ಮತ್ತೆ ಕಾರ್ಯ ಮಾಡಿ) ಎಂಬ ದೂರದೃಷ್ಟಿಯನ್ನು ಸಾಕಾರಗೊಳಿಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಗಾಗಿ ಮೂರು ಉತ್ಕೃಷ್ಟ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ನಾವೀನ್ಯತೆ ಮತ್ತು ಸಂಶೋಧನೆಯನ್ನು ಹೊರಹೊಮ್ಮಿಸಲು ರಾಷ್ಟ್ರೀಯ ದತ್ತಾಂಶ ಆಡಳಿತ ನೀತಿಯನ್ನು ತರಲಾಗುವುದು.

ಡಿಜಿಲಾಕರ್ ಸೇವೆ ಮತ್ತು ಆಧಾರ್ ಅನ್ನು ಅಡಿಪಾಯ ಗುರುತಾಗಿ ಬಳಸಿಕೊಂಡು ವ್ಯಕ್ತಿಗಳ ಗುರುತು ಮತ್ತು ವಿಳಾಸದ ಸಮನ್ವಯ ಮತ್ತು ನವೀಕರಣಕ್ಕಾಗಿ ಒನ್ ಸ್ಟಾಪ್ ಪರಿಹಾರವನ್ನು ಸ್ಥಾಪಿಸಲಾಗುವುದು.

·  ಸುಗಮ ವ್ಯಾಪಾರಕ್ಕಾಗಿ ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಪ್ಯಾನ್ ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುತ್ತದೆ.

ಕೋವಿಡ್ ಅವಧಿಯಲ್ಲಿ ಎಂಎಸ್ಎಂಇಗಳು ಒಪ್ಪಂದಗಳನ್ನು ಕಾರ್ಯಗತಗೊಳಿಸಲು ವಿಫಲವಾಗಿದ್ದರೆ ಬಿಡ್ ಅಥವಾ ಕಾರ್ಯಕ್ಷಮತೆಯ ಭದ್ರತೆಗೆ ಸಂಬಂಧಿಸಿದ ಮುಟ್ಟುಗೋಲು ಹಾಕಿಕೊಂಡ ಮೊತ್ತದ 95 ಪ್ರತಿಶತವನ್ನು ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಎಂಎಸ್ಎಂಇಗಳಿಗೆ ಹಿಂದಿರುಗಿಸುತ್ತವೆ.

ಸ್ಪರ್ಧಾತ್ಮಕ ಅಭಿವೃದ್ಧಿ ಅಗತ್ಯಗಳಿಗಾಗಿ ವಿರಳ ಸಂಪನ್ಮೂಲಗಳನ್ನು ಉತ್ತಮವಾಗಿ ಹಂಚಿಕೆ ಮಾಡಲು ಫಲಿತಾಂಶ ಆಧಾರಿತ ಹಣಕಾಸು.

ಸಮರ್ಥ ನ್ಯಾಯ ದಾನಕ್ಕಾಗಿ 7,000 ಕೋಟಿ ರೂ.ಗಳ ವೆಚ್ಚದೊಂದಿಗೆ ಇ-ನ್ಯಾಯಾಲಯಗಳ ಯೋಜನೆಯ 3 ನೇ ಹಂತ ಪ್ರಾರಂಭ.


•    ಎಲ್ಜಿಡಿ ಸೀಡ್ಸ್  ಮತ್ತು ಯಂತ್ರಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಲ್ಯಾಬ್ ಗ್ರೋನ್ಡೈಮಂಡ್ಸ್ (ಎಲ್ಜಿಡಿ) ವಲಯಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿ ಅನುದಾನ.

•    ಆರ್ಥಿಕತೆಯನ್ನು ಕಡಿಮೆ ಇಂಗಾಲದ ತೀವ್ರತೆಗೆ ಪರಿವರ್ತಿಸಲು ಮತ್ತು ಪಳೆಯುಳಿಕೆ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಹಸಿರು ಹೈಡ್ರೋಜನ್ ಅಭಿಯಾನ ಅಡಿಯಲ್ಲಿ ವಾರ್ಷಿಕ 5 ಎಂಎಂಟಿ ಉತ್ಪಾದನೆಯನ್ನು 2030ರ ವೇಳೆಗೆ ಗುರಿಯಾಗಿಸಲಾಗುವುದು.

•    ಇಂಧನ ಭದ್ರತೆ, ಇಂಧನ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಉದ್ದೇಶಗಳಿಗೆ 35,000 ಕೋಟಿ ರೂ. ಹಂಚಿಕೆ

•    ಆರ್ಥಿಕತೆಯನ್ನು ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳ ಉತ್ತೇಜನ.

•    ನವೀಕರಿಸಬಹುದಾದ ಇಂಧನ ಗ್ರಿಡ್ ಏಕೀಕರಣ ಮತ್ತು ಲಡಾಖ್ ನಿಂದ ಸ್ಥಳಾಂತರಿಸಲು 20,700 ಕೋಟಿ ರೂ. ಹಂಚಿಕೆ

•    ಪರ್ಯಾಯ ರಸಗೊಬ್ಬರಗಳು ಮತ್ತು ರಸ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು "ಭೂಮಾತೆಯ ಪುನರ್ ಸ್ಥಾಪನೆ, ಜಾಗೃತಿ, ಪೋಷಣೆ ಮತ್ತು ಸುಧಾರಣೆಗಾಗಿ ಪಿಎಂ-ಪ್ರಣಾಮ್" (ಪಿಎಂ-ಪ್ರಣಾಂ) ಅನ್ನು ಪ್ರಾರಂಭಿಸಲಾಗುವುದು.

ಎಂಜಿಎನ್ಆರ್.ಇ.ಜಿಎಸ್, ಕಾಂಪಾ ನಿಧಿ ಮತ್ತು ಇತರ ಮೂಲಗಳ ನಡುವಿನ ಸಂಯೋಜನೆಯ ಮೂಲಕ ಕರಾವಳಿ ಯುದ್ದಕ್ಕೂ ಮತ್ತು ಕ್ಷಾರಯುಕ್ತ ಭೂಮಿಯಲ್ಲಿ ಮ್ಯಾಂಗ್ರೋವ್ ನೆಡಲು 'ಕಡಲತೀರದ ವಾಸಸ್ಥಾನಗಳು ಮತ್ತು ಸ್ಪಷ್ಟ ಆದಾಯಕ್ಕಾಗಿ ಮ್ಯಾಂಗ್ರೋವ್ ಉಪಕ್ರಮ' ವನ್ನು ಎಂಐಎಸ್.ಎಚ್.ಟಿಐ ಕೈಗೊಳ್ಳುವುದು.

ಪರಿಸರ ಸುಸ್ಥಿರ ಮತ್ತು ಸ್ಪಂದನಾತ್ಮಕ ಕ್ರಮಗಳಿಗಾಗಿ ಹೆಚ್ಚುವರಿ ಸಂಪನ್ಮೂಲಗಳನ್ನು ಉತ್ತೇಜಿಸಲು ಮತ್ತು ಕ್ರೋಡೀಕರಿಸಲು ಪರಿಸರ (ಸಂರಕ್ಷಣಾ) ಕಾಯ್ದೆಯಡಿ ಹಸಿರು ಸಾಲ ಕಾರ್ಯಕ್ರಮವನ್ನು ಅಧಿಸೂಚಿಸಬೇಕು.

ಜೌಗು ಪ್ರದೇಶಗಳ ಗರಿಷ್ಠ ಬಳಕೆಯನ್ನು ಉತ್ತೇಜಿಸಲು, ಜೀವವೈವಿಧ್ಯತೆಯನ್ನು ಹೆಚ್ಚಿಸಲು, ಇಂಗಾಲದ ಸಂಗ್ರಹವನ್ನು ಹೆಚ್ಚಿಸಲು, ಪರಿಸರ ಪ್ರವಾಸೋದ್ಯಮ ಅವಕಾಶಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯ ಸೃಷ್ಟಿಸಲು ಮುಂದಿನ ಮೂರು ವರ್ಷಗಳಲ್ಲಿ ಅಮೃತ್ ಧರೋಹರ್ ಯೋಜನೆಯನ್ನು ಜಾರಿಗೆ ತರಲಾಗುವುದು.

· ಬೇಡಿಕೆ ಆಧಾರಿತ ಔಪಚಾರಿಕ ಕೌಶಲ್ಯವನ್ನು ಸಕ್ರಿಯಗೊಳಿಸಲು, ಎಂಎಸ್ಎಂಇಗಳು ಸೇರಿದಂತೆ ಉದ್ಯೋಗದಾತರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಉದ್ಯಮಶೀಲತಾ ಯೋಜನೆಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ಏಕೀಕೃತ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಗುವುದು.

ಮೂರು ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಪೆಂಡ್ ಬೆಂಬಲವನ್ನು ಒದಗಿಸಲು ಭಾರತದಾದ್ಯಂತ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಉತ್ತೇಜನ ಯೋಜನೆಯಡಿ ನೇರ ಸವಲತ್ತು ವರ್ಗಾವಣೆಯನ್ನು ಅನುಷ್ಠಾನಗೊಳಿಸಲಾಗುವುದು.

ಚಾಲೆಂಜ್ ಮೋಡ್ ಮೂಲಕ ಕನಿಷ್ಠ 50 ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲಾಗುವುದು; ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಸಂಪೂರ್ಣ ಪ್ಯಾಕೇಜ್ ಆಗಿ ಅಭಿವೃದ್ಧಿಪಡಿಸಲಾಗುವುದು.

'ದೇಖೋ ಅಪ್ನಾ ದೇಶ್- ನಮ್ಮ ದೇಶ ನೋಡಿ' ಉಪಕ್ರಮದ ಉದ್ದೇಶಗಳನ್ನು ಸಾಧಿಸಲು ವಲಯ ನಿರ್ದಿಷ್ಟ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿಯನ್ನು ಸಂಯೋಜಿಸಲಾಗುವುದು.

ರೋಮಾಂಚಕ ಗ್ರಾಮಗಳ ಕಾರ್ಯಕ್ರಮದ ಮೂಲಕ ಗಡಿ ಗ್ರಾಮಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು.

ರಾಜ್ಯಗಳು  ತಮ್ಮದೇ ಆದ ಮತ್ತು ಇತರ ಎಲ್ಲಾ ರಾಜ್ಯಗಳ ಒಡಿಒಪಿಗಳು (ಒಂದು ಜಿಲ್ಲೆ, ಒಂದು ಉತ್ಪನ್ನ), ಜಿಐ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯುನಿಟಿ ಮಾಲ್ ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು.

ಸಾಲದ ದಕ್ಷ ಹರಿವನ್ನು ಸುಗಮಗೊಳಿಸಲು, ಹಣಪೂರಣ ಉತ್ತೇಜಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಹಣಕಾಸು ಮತ್ತು ಪೂರಕ ಮಾಹಿತಿಯ ಕೇಂದ್ರ ಭಂಡಾರವಾಗಿ ಕಾರ್ಯನಿರ್ವಹಿಸಲು ರಾಷ್ಟ್ರೀಯ ಹಣಕಾಸು ಮಾಹಿತಿ ನೋಂದಣಿಯನ್ನು ಸ್ಥಾಪಿಸಲಾಗುವುದು. ಈ ಸಾಲ ಸಾರ್ವಜನಿಕ ಮೂಲಸೌಕರ್ಯವನ್ನು ನಿಯಂತ್ರಿಸಲು ಆರ್.ಬಿಐನೊಂದಿಗೆ ಸಮಾಲೋಚಿಸಿ ಹೊಸ ಶಾಸನಾತ್ಮಕ ಚೌಕಟ್ಟನ್ನು ವಿನ್ಯಾಸಗೊಳಿಸಲಾಗುವುದು.

· ಹಣಕಾಸು ವಲಯದ ನಿಯಂತ್ರಕರು ಸಾರ್ವಜನಿಕ ಮತ್ತು ನಿಯಂತ್ರಿತ ಘಟಕಗಳೊಂದಿಗೆ ಸಮಾಲೋಚಿಸಿ ಅಸ್ತಿತ್ವದಲ್ಲಿರುವ ನಿಬಂಧನೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುತ್ತಾರೆ. ವಿವಿಧ ನಿಬಂಧನೆಗಳ ಅಡಿಯಲ್ಲಿ ಅರ್ಜಿಗಳನ್ನು ನಿರ್ಧರಿಸಲು ಕಾಲ ಮಿತಿಗಳನ್ನು ಸಹ ನಿಗದಿಪಡಿಸಲಾಗುವುದು.

ಗಿಫ್ಟ್ ಐಎಫ್.ಎಸ್.ಸಿಯಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸಲು, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು.

ದ್ವಂದ್ವ ನಿಯಂತ್ರಣವನ್ನು ತಪ್ಪಿಸಲು ಎಸ್ಇಝಡ್ ಕಾಯ್ದೆಯಡಿ ಐಎಫ್ಎಸ್ಸಿಎಗೆ ಅಧಿಕಾರಗಳನ್ನು ಹಂಚುವುದು.

ಐಎಫ್ಎಸ್ಸಿಎ, ಎಸ್ಇಝಡ್ ಅಧಿಕಾರಿಗಳು, ಜಿಎಸ್ಟಿಎನ್, ಆರ್.ಬಿ.ಐ, ಸೆಬಿ ಮತ್ತು ಐಆರ್.ಡಿ.ಎಐನಿಂದ ನೋಂದಣಿ ಮತ್ತು ಅನುಮೋದನೆಗಾಗಿ ಏಕ ಗವಾಕ್ಷಿ ಐಟಿ ವ್ಯವಸ್ಥೆಯನ್ನು ಸ್ಥಾಪಿಸುವುದು.

ವಿದೇಶಿ ಬ್ಯಾಂಕಿನ ಐಎಫ್ಎಸ್ಸಿ ಬ್ಯಾಂಕಿಂಗ್ ಘಟಕಗಳಿಂದ ಸ್ವಾಧೀನ ಹಣಕಾಸು ಒದಗಿಸಲು ಅನುಮತಿ.

· ವ್ಯಾಪಾರ ಮರು ಹಣಕಾಸುಗಾಗಿ ಎಕ್ಸಿಮ್ ಬ್ಯಾಂಕಿನ ಅಂಗಸಂಸ್ಥೆಯನ್ನು ಸ್ಥಾಪಿಸುವುದು.

ಮಧ್ಯಸ್ಥಿಕೆ, ಪೂರಕ ಸೇವೆಗಳಿಗೆ ಶಾಸನಬದ್ಧ ನಿಬಂಧನೆಗಳಿಗಾಗಿ ಐಎಫ್ಎಸ್.ಸಿ.ಎ ಕಾಯ್ದೆಗೆ ತಿದ್ದುಪಡಿ ತರುವುದು ಮತ್ತು ಎಸ್ಇಝಡ್ ಕಾಯ್ದೆಯಡಿ ದ್ವಿ ನಿಯಂತ್ರಣವನ್ನು ತಪ್ಪಿಸುವುದು

ಕಡಲಾಚೆಯ ಉತ್ಪನ್ನ ಸಾಧನಗಳನ್ನು ಮಾನ್ಯ ಒಪ್ಪಂದಗಳಾಗಿ ಗುರುತಿಸುವುದು.

ಬ್ಯಾಂಕ್ ಆಡಳಿತವನ್ನು ಸುಧಾರಿಸಲು ಮತ್ತು ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ.

ಡಿಜಿಟಲ್ ಮುಂದುವರಿಕೆ ಪರಿಹಾರಗಳನ್ನು ಹುಡುಕುತ್ತಿರುವ ದೇಶಗಳಿಗೆ ಗಿಫ್ಟ್ ಐಎಫ್ಎಸ್ಸಿಯಲ್ಲಿ ತಮ್ಮ ಡೇಟಾ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಅನುಕೂಲ ಕಲ್ಪಿಸಲಾಗುವುದು.

· ರಾಷ್ಟ್ರೀಯ ಭದ್ರತಾ ಮಾರುಕಟ್ಟೆ ಸಂಸ್ಥೆಯಲ್ಲಿ ಶಿಕ್ಷಣಕ್ಕಾಗಿ ಮಾನದಂಡಗಳು ಮತ್ತು ಗುಣಮಟ್ಟಗಳನ್ನು ಅಭಿವೃದ್ಧಿಪಡಿಸಲು, ನಿಯಂತ್ರಿಸಲು, ನಿರ್ವಹಿಸಲು ಮತ್ತು ಜಾರಿಗೊಳಿಸಲು ಮತ್ತು ಪದವಿಗಳು, ಡಿಪ್ಲೊಮಾಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲು ಸೆಬಿಗೆ ಅಧಿಕಾರ ನೀಡಲಾಗುವುದು.

ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರದಿಂದ ಕ್ಲೈಮ್ ಮಾಡದ ಷೇರುಗಳು ಮತ್ತು ಪಾವತಿಸದ ಲಾಭಾಂಶವನ್ನು ಸುಲಭವಾಗಿ ಮರುಪಡೆಯಲು ಹೂಡಿಕೆದಾರರಿಗೆ ಅನುವು ಮಾಡಿಕೊಡಲು ಸಮಗ್ರ ಐಟಿ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು.

ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಅನ್ನು ಪ್ರಾರಂಭಿಸಲಾಗುವುದು. ಇದು 2 ವರ್ಷಗಳ ಅವಧಿಗೆ (ಮಾರ್ಚ್ 2025 ರವರೆಗೆ) ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ 2 ಲಕ್ಷ ರೂ.ಗಳವರೆಗೆ ಠೇವಣಿ ಸೌಲಭ್ಯವನ್ನು ಶೇಕಡಾ 7.5 ರಷ್ಟು ಸ್ಥಿರ ಬಡ್ಡಿದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ ನೀಡುತ್ತದೆ.

· ಮಾಸಿಕ ಆದಾಯ ಖಾತೆ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಒಂದೇ ಖಾತೆಗೆ 4.5 ಲಕ್ಷ ರೂ.ಗಳಿಂದ 9 ಲಕ್ಷ ರೂ.ಗೆ ಮತ್ತು ಜಂಟಿ ಖಾತೆಗೆ 9 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.

ರಾಜ್ಯಗಳಿಗೆ ಸಂಪೂರ್ಣ ಐವತ್ತು ವರ್ಷಗಳ ಬಡ್ಡಿರಹಿತ ಸಾಲವನ್ನು 2023-24 ರೊಳಗೆ ಬಂಡವಾಳ ವೆಚ್ಚಕ್ಕಾಗಿ ಖರ್ಚು ಮಾಡಲಾಗುವುದು. ಸಾಲದ ಒಂದು ಭಾಗವು ರಾಜ್ಯಗಳು ನೈಜ ಬಂಡವಾಳ ವೆಚ್ಚವನ್ನು ಹೆಚ್ಚಿಸುವುದರ ಮೇಲೆ ಷರತ್ತುಬದ್ಧವಾಗಿರುತ್ತದೆ ಮತ್ತು ವಿನಿಯೋಗದ ಭಾಗಗಳನ್ನು ನಿರ್ದಿಷ್ಟ ಸಾಲಗಳನ್ನು ಕೈಗೊಳ್ಳುವ ರಾಜ್ಯಗಳಿಗೆ ಸಂಪರ್ಕ ಮಾಡಲಾಗುತ್ತದೆ.

ಜಿಎಸ್.ಡಿಪಿಯ ಶೇ.3.5ರ ವಿತ್ತೀಯ ಕೊರತೆಯನ್ನು ರಾಜ್ಯಗಳಿಗೆ ಅನುಮತಿಸಲಾಗಿದೆ, ಅದರಲ್ಲಿ ಶೇ.0.5ರಷ್ಟು ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿದೆ.
ಪರಿಷ್ಕೃತ ಅಂದಾಜು 2022-23:

•    ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 24.3 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲಿ ನಿವ್ವಳ ತೆರಿಗೆ ರಸೀದಿಗಳು 20.9 ಲಕ್ಷ ಕೋಟಿ ರೂ. ಆಗಿದೆ.

•    ಒಟ್ಟು ವೆಚ್ಚ 41.9 ಲಕ್ಷ ಕೋಟಿ ರೂ., ಇದರಲ್ಲಿ ಬಂಡವಾಳ ವೆಚ್ಚ ಸುಮಾರು 7.3 ಲಕ್ಷ ಕೋಟಿ ರೂ.

•    ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 6.4 ರಷ್ಟಿದೆ, ಇದು ಬಜೆಟ್ ಅಂದಾಜಿಗೆ ಅನುಗುಣವಾಗಿದೆ.

•    ಬಜೆಟ್ ಅಂದಾಜು 2023-24:

o    ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳನ್ನು 27.2 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ ಮತ್ತು ಒಟ್ಟು ವೆಚ್ಚವನ್ನು 45 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

o    ನಿವ್ವಳ ತೆರಿಗೆ ಸ್ವೀಕೃತಿಗಳನ್ನು 23.3 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

o    ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 5.9 ರಷ್ಟಿದೆ ಎಂದು ಅಂದಾಜಿಸಲಾಗಿದೆ.

o    2023-24ರಲ್ಲಿ ವಿತ್ತೀಯ ಕೊರತೆಯನ್ನು ಸರಿದೂಗಿಸಲು, ಡೇಟೆಡ್ ಸೆಕ್ಯುರಿಟಿಗಳಿಂದ ನಿವ್ವಳ ಮಾರುಕಟ್ಟೆ ಸಾಲವನ್ನು 11.8 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

o    ಒಟ್ಟು ಮಾರುಕಟ್ಟೆ ಸಾಲವನ್ನು 15.4 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.

 
ಭಾಗ – ಬಿ

     ನೇರ ತೆರಿಗೆಗಳು


•    ನೇರ ತೆರಿಗೆ ಪ್ರಸ್ತಾಪಗಳು ತೆರಿಗೆಯ ನಿರಂತರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಅನುಸರಣೆ ಹೊರೆಯನ್ನು ತಗ್ಗಿಸಲು ವಿವಿಧ ನಿಬಂಧನೆಗಳನ್ನು  ಮತ್ತಷ್ಟು ಸರಳೀಕರಿಸುವುದು ಮತ್ತು ತರ್ಕಬದ್ಧಗೊಳಿಸುವುದು, ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸುವುದು ಮತ್ತು ನಾಗರಿಕರಿಗೆ ತೆರಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿವೆ. 

•    ಅನುಸರಣೆಯನ್ನು ಸುಲಭ ಮತ್ತು ಸುಗಮಗೊಳಿಸುವ ಮೂಲಕ ತೆರಿಗೆ ಪಾವತಿದಾರರ ಸೇವೆಗಳನ್ನು ಸುಧಾರಿಸಲು ಆದಾಯ ತೆರಿಗೆ ಇಲಾಖೆಯ ನಿರಂತರ ಪ್ರಯತ್ನ.

•    ತೆರಿಗೆ ಪಾವತಿದಾರರ ಸೇವೆಗಳನ್ನು ಮತ್ತಷ್ಟು ಸುಧಾರಿಸಲು, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಮುಂದಿನ ಪೀಳಿಗೆಯ ಸಾಮಾನ್ಯ ಐಟಿ ರಿಟರ್ನ್ ಫಾರ್ಮ್ ಅನ್ನು ಹೊರತರುವ ಪ್ರಸ್ತಾಪ, ಜೊತೆಗೆ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಬಲಪಡಿಸಲು ಯೋಜನೆಗಳು.

•    ಹೊಸ ತೆರಿಗೆ ವ್ಯವಸ್ಥೆಯಲ್ಲಿ ವೈಯಕ್ತಿಕ ಆದಾಯ ತೆರಿಗೆಯ  ರಿಯಾಯಿತಿ ಮಿತಿಯನ್ನು ಪ್ರಸ್ತುತ 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಹೀಗಾಗಿ, ಹೊಸ ತೆರಿಗೆ ವ್ಯವಸ್ಥೆಯಲ್ಲಿ, 7 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳು ಯಾವುದೇ ತೆರಿಗೆ ಪಾವತಿಸುವುದಿಲ್ಲ.

•    ಆರು ಆದಾಯ ಸ್ಲ್ಯಾಬ್ ಗಳೊಂದಿಗೆ 2020ರಲ್ಲಿ ಪರಿಚಯಿಸಲಾದ ಹೊಸ ವೈಯಕ್ತಿಕ ಆದಾಯ ತೆರಿಗೆ ಆಡಳಿತದಲ್ಲಿ ತೆರಿಗೆ ರಚನೆಯು ಸ್ಲ್ಯಾಬ್ ಗಳ ಸಂಖ್ಯೆಯನ್ನು ಐದಕ್ಕೆ ಇಳಿಸುವ ಮೂಲಕ  ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಿಸುವ ಮೂಲಕ ಬದಲಾಗಲಿದೆ. ಹೊಸ ಆಡಳಿತದಲ್ಲಿ ಎಲ್ಲಾ ತೆರಿಗೆ ಪಾವತಿದಾರರಿಗೆ ಪ್ರಮುಖ ಪರಿಹಾರವನ್ನು ಒದಗಿಸುವ ಬದಲಾವಣೆಯಾಗಿದೆ.

•    ಹೊಸ ತೆರಿಗೆ

 

ಒಟ್ಟು ಆದಾಯ (ರೂ)

 ದರ (ಶೇ.)

3,00,000ವರೆಗೆ 

ಏನೂ ಇಲ್ಲ

3,00,001 ರಿಂದ 6,00,000ವರೆಗೆ

5

 6,00,001 ರಿಂದ 9,00,000 ವರೆಗೆ

10

9,00,001 ರಿಂದ 12,00,000 ವರೆಗೆ

15

12,00,001 ರಿಂದ 15,00,000 ವರೆಗೆ

20

15,00,000 ಮೇಲ್ಪಟ್ಟು

30

  
  
•    ಹೊಸ ತೆರಿಗೆ ವ್ಯವಸ್ಥೆಯಲ್ಲಿ ಸಂಬಳ ಪಡೆಯುವ ವ್ಯಕ್ತಿಗೆ 50,000 ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಕುಟುಂಬ ಪಿಂಚಣಿಯಿಂದ 15,000 ರೂ.ಗಳವರೆಗೆ ಕಡಿತದ ಪ್ರಯೋಜನವನ್ನು ವಿಸ್ತರಿಸುವ ಪ್ರಸ್ತಾಪ.

•    ಹೊಸ ತೆರಿಗೆ ವ್ಯವಸ್ಥೆಯಲ್ಲಿ ಗರಿಷ್ಠ ಉಪಕರ ದರವನ್ನು ಶೇಕಡಾ 37 ರಿಂದ 25 ಕ್ಕೆ ಇಳಿಸಲಾಗುವುದು. ಇದು ಗರಿಷ್ಠ ವೈಯಕ್ತಿಕ ಆದಾಯ ತೆರಿಗೆ ದರವನ್ನು ಶೇಕಡಾ 39 ಕ್ಕೆ ಇಳಿಸಲು ಕಾರಣವಾಗುತ್ತದೆ.

•    ಸರ್ಕಾರೇತರ ಸಂಬಳ ಪಡೆಯುವ ನೌಕರರ ನಿವೃತ್ತಿಯ  ಮೇಲಿನ ರಜೆ ನಗದೀಕರಣದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

•    ಹೊಸ ಆದಾಯ ತೆರಿಗೆ ಆಡಳಿತವನ್ನು ಡೀಫಾಲ್ಟ್ ತೆರಿಗೆ ಆಡಳಿತವನ್ನಾಗಿ ಮಾಡಲಾಗುವುದು. ಆದಾಗ್ಯೂ, ನಾಗರಿಕರು ಹಳೆಯ ತೆರಿಗೆ ಆಡಳಿತದ ಪ್ರಯೋಜನವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

•    ಪ್ರಸ್ತಾವಿತ ಊಹಾತ್ಮಕ ತೆರಿಗೆಯ ಪ್ರಯೋಜನವನ್ನು ಪಡೆಯಲು ಸೂಕ್ಷ್ಮ ಉದ್ಯಮಗಳು ಮತ್ತು ಕೆಲವು ವೃತ್ತಿಪರರಿಗೆ ವರ್ಧಿತ ಮಿತಿಗಳು. ವರ್ಷದಲ್ಲಿ ನಗದು ರೂಪದಲ್ಲಿ ಸ್ವೀಕರಿಸಿದ ಮೊತ್ತ ಅಥವಾ ಒಟ್ಟು ಮೊತ್ತವು ಒಟ್ಟು ರಸೀದಿಗಳು / ವಹಿವಾಟಿನ ಐದು ಪ್ರತಿಶತವನ್ನು ಮೀರದಿದ್ದರೆ ಮಾತ್ರ ಅನ್ವಯಿಸಲು ಮಿತಿ ಹೆಚ್ಚಳ.

•    ಎಂಎಸ್ಎಂಇಗಳಿಗೆ ಸಕಾಲದಲ್ಲಿ ಪಾವತಿಗಳನ್ನು ಸ್ವೀಕರಿಸುವಲ್ಲಿ ಬೆಂಬಲಿಸುವ ಸಲುವಾಗಿ ಪಾವತಿ ಮಾಡಿದಾಗ ಮಾತ್ರ ಎಂಎಸ್ಎಂಇಗಳಿಗೆ ಮಾಡಿದ ಪಾವತಿಗಳ ವೆಚ್ಚದ ಕಡಿತವನ್ನು ಅನುಮತಿಸಲಾಗುತ್ತದೆ.

•    31.3.2024 ರವರೆಗೆ ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸುವ ಹೊಸ ಸಹಕಾರಿ ಸಂಸ್ಥೆಗಳು  ಪ್ರಸ್ತುತ ಹೊಸ ಉತ್ಪಾದನಾ ಕಂಪನಿಗಳಿಗೆ ಲಭ್ಯವಿರುವ ಶೇಕಡಾ 15 ರಷ್ಟು ಕಡಿಮೆ ತೆರಿಗೆ ದರದ ಪ್ರಯೋಜನವನ್ನು ಪಡೆಯುತ್ತವೆ.

•    ಸಕ್ಕರೆ ಸಹಕಾರ ಸಂಘಗಳಿಗೆ 2016-17ನೇ ಸಾಲಿಗೆ ಮುಂಚಿತವಾದ ಅವಧಿಗೆ ಕಬ್ಬು ಬೆಳೆಗಾರರಿಗೆ ಮಾಡಿದ ಪಾವತಿಯನ್ನು ವೆಚ್ಚವಾಗಿ ಕ್ಲೈಮ್ ಮಾಡಲು ಅವಕಾಶವನ್ನು ಒದಗಿಸಲಾಗಿದೆ. ಇದು ಅವರಿಗೆ ಸುಮಾರು 10,000 ಕೋಟಿ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

•    ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (ಪಿಎಸಿಎಸ್) ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು (ಪಿಸಿಎಆರ್.ಡಿ.ಬಿಗಳು) ನಗದು ಠೇವಣಿ ಮತ್ತು ಸಾಲಗಳಿಗೆ ಪ್ರತಿ ಸದಸ್ಯರಿಗೆ 2 ಲಕ್ಷ ರೂ.ಗಳ ಹೆಚ್ಚಿನ ಮಿತಿಯನ್ನು ಒದಗಿಸುವುದು.

•    ಸಹಕಾರ ಸಂಘಗಳಿಗೆ ನಗದು ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ಗೆ 3 ಕೋಟಿ ರೂ.ಗಳ ಹೆಚ್ಚಿನ ಮಿತಿಯನ್ನು ಒದಗಿಸಲಾಗುವುದು.

•    ನವೋದ್ಯಮಗಳಿಗೆ ಆದಾಯ ತೆರಿಗೆ ಪ್ರಯೋಜನಗಳನ್ನು ಸಂಯೋಜಿಸುವ ದಿನಾಂಕವನ್ನು  31.03.23 ರಿಂದ 31.3.24 ಕ್ಕೆ ವಿಸ್ತರಿಸಲಾಗುವುದು.

•    ನವೋದ್ಯಮಗಳ ಷೇರುದಾರರನ್ನು ಬದಲಾಯಿಸಿದ ನಷ್ಟವನ್ನು ಸ್ಥಾಪನೆಯಾದ ಏಳು ವರ್ಷದಿಂದ ಹತ್ತು ವರ್ಷಗಳಿಗೆ ಮುಂದೆ ತೆಗೆದುಕೊಂಡು ಹೋಗುವ ಪ್ರಸ್ತಾಪ.

•    ಸೆಕ್ಷನ್ 54 ಮತ್ತು 54 ಎಫ್ ಅಡಿಯಲ್ಲಿ ವಸತಿ ಗೃಹಗಳಲ್ಲಿನ ಹೂಡಿಕೆಯ ಮೇಲಿನ ಬಂಡವಾಳ ಲಾಭದಿಂದ ಕಡಿತವನ್ನು ತೆರಿಗೆ ರಿಯಾಯಿತಿಗಳು ಮತ್ತು ವಿನಾಯಿತಿಗಳ ಉತ್ತಮ ಗುರಿಗಾಗಿ 10 ಕೋಟಿ ರೂ.ಗೆ ಮಿತಿಗೊಳಿಸಲಾಗುವುದು.

•    ಅತಿ ಹೆಚ್ಚಿನ ಮೌಲ್ಯದ ವಿಮಾ ಪಾಲಿಸಿಗಳ ಆದಾಯದಿಂದ ಆದಾಯ ತೆರಿಗೆ ವಿನಾಯಿತಿಯನ್ನು ಮಿತಿಗೊಳಿಸುವ  ಪ್ರಸ್ತಾಪ.  2023 ರ ಏಪ್ರಿಲ್ 1 ರಂದು ಅಥವಾ ನಂತರ ನೀಡಲಾದ ಜೀವ ವಿಮಾ ಪಾಲಿಸಿಗಳಿಗೆ (ಯುಲಿಪ್ ಹೊರತುಪಡಿಸಿ) ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಒಟ್ಟು ಪ್ರೀಮಿಯಂ 5 ಲಕ್ಷ ರೂ.ವರೆಗಿನ ಪಾಲಿಸಿಗಳಿಂದ ಮಾತ್ರ ಆದಾಯಕ್ಕೆ ವಿನಾಯಿತಿ ನೀಡಲಾಗುವುದು.

•    ವಸತಿ, ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳ ಅಭಿವೃದ್ಧಿ, ಮತ್ತು ಚಟುವಟಿಕೆ ಅಥವಾ ವಿಷಯವನ್ನು ನಿಯಂತ್ರಿಸುವ ಅಥವಾ ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಕೇಂದ್ರ ಅಥವಾ ರಾಜ್ಯದ ಶಾಸನಗಳಿಂದ ಸ್ಥಾಪಿಸಲಾದ ಪ್ರಾಧಿಕಾರಗಳು, ಮಂಡಳಿಗಳು ಮತ್ತು ಆಯೋಗಗಳ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.

•    ಟಿಡಿಎಸ್.ಗೆ ಕನಿಷ್ಠ ಮಿತಿ 10,000 ರೂ.ಗಳನ್ನು ತೆಗೆದುಹಾಕಬೇಕು ಮತ್ತು ಆನ್ಲೈನ್ ಗೇಮಿಂಗ್ ಗೆ ಸಂಬಂಧಿಸಿದ ತೆರಿಗೆಯನ್ನು ಸ್ಪಷ್ಟಪಡಿಸಬೇಕು. ಹಿಂತೆಗೆದುಕೊಳ್ಳುವ ಸಮಯದಲ್ಲಿ ಅಥವಾ ಹಣಕಾಸು ವರ್ಷದ ಕೊನೆಯಲ್ಲಿ ನಿವ್ವಳ ಗೆಲುವಿನ ಮೊತ್ತದ ಮೇಲೆ ಟಿಡಿಎಸ್ ಮತ್ತು ತೆರಿಗೆ ವಿಧಿಸುವ ಪ್ರಸ್ತಾಪ.

•    ಚಿನ್ನವನ್ನು ವಿದ್ಯುನ್ಮಾನ ಚಿನ್ನದ ರಸೀದಿಯನ್ನಾಗಿ ಪರಿವರ್ತಿಸುವುದು ಮತ್ತು ಇದಕ್ಕೆ ವಿರುದ್ಧವಾಗಿ ಬಂಡವಾಳ ಲಾಭ (ಕ್ಯಾಪಿಟಲ್ ಗೈನ್)ವೆಂದು ಪರಿಗಣಿಸಲಾಗುವುದಿಲ್ಲ.

•    ಪ್ಯಾನ್ ಅಲ್ಲದ ಪ್ರಕರಣಗಳಲ್ಲಿ ಇಪಿಎಫ್ ಹಿಂಪಡೆಯುವಿಕೆಯ ತೆರಿಗೆಗೆ ಒಳಪಡುವ ಭಾಗದ ಮೇಲೆ ಟಿಡಿಎಸ್ ದರವನ್ನು ಶೇಕಡಾ 30 ರಿಂದ 20 ಕ್ಕೆ ಇಳಿಸಲಾಗುವುದು.

•    ಮಾರುಕಟ್ಟೆ ಸಂಪರ್ಕಿತ ಡಿಬೆಂಚರ್ ಗಳಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸಲಾಗುವುದು.

•    ಆಯುಕ್ತರ ಮಟ್ಟದಲ್ಲಿ ಅಪೀಲುಗಳ ಬಾಕಿಯನ್ನು ಕಡಿಮೆ ಮಾಡುವ ಸಲುವಾಗಿ ಸಣ್ಣ ಮೇಲ್ಮನವಿಗಳ ವಿಲೇವಾರಿಗಾಗಿ ಸುಮಾರು 100 ಜಂಟಿ ಆಯುಕ್ತರ ನಿಯೋಜನೆ.

•    ಈ ವರ್ಷ ಈಗಾಗಲೇ ಸ್ವೀಕರಿಸಿದ ರಿಟರ್ನ್ ಗಳ ಪರಿಶೀಲನೆಗಾಗಿ ಮೇಲ್ಮನವಿ ಪ್ರಕರಣಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚಿದ ಆಯ್ಕೆ.

•    ಐಎಫ್ಎಸ್ಸಿ, ಗಿಫ್ಟ್ ಸಿಟಿಗೆ ಸ್ಥಳಾಂತರಗೊಳ್ಳುವ ನಿಧಿಗಳಿಗೆ ತೆರಿಗೆ ಪ್ರಯೋಜನಗಳ ಅವಧಿಯನ್ನು  31.03.2025 ರವರೆಗೆ ವಿಸ್ತರಿಸಲಾಗಿದೆ.

•    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಎ ಅಡಿಯಲ್ಲಿ ಲಿಕ್ವಿಡೇಟರ್ ಗಳನ್ನು ಕೈಬಿಡುವ ಕೆಲವು ಕೃತ್ಯಗಳನ್ನು  2023 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅಪರಾಧಮುಕ್ತಗೊಳಿಸಲಾಗುವುದು.

•    ಐಡಿಬಿಐ ಬ್ಯಾಂಕ್ ಸೇರಿದಂತೆ ವ್ಯೂಹಾತ್ಮಕ ಬಂಡವಾಳ ಹಿಂತೆಗೆತದ ನಷ್ಟವನ್ನು ಮುಂದುವರಿಸಲಾಗುವುದು.

•    ಅಗ್ನಿವೀರ್ ನಿಧಿಗೆ ಇಇಇ ಸ್ಥಾನಮಾನ ನೀಡಲಾಗುವುದು. ಅಗ್ನಿಪಥ್ ಯೋಜನೆ, 2022 ರಲ್ಲಿ ದಾಖಲಾದ ಅಗ್ನಿವೀರರುಳು ಅಗ್ನಿವೀರ್ ಕಾಪು ನಿಧಿಯಿಂದ ಪಡೆದ ಪಾವತಿಯನ್ನು ತೆರಿಗೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ. ಅಗ್ನಿವೀರ್ ಅವರ ಸೇವಾ ನಿಧಿ ಖಾತೆಗೆ ಅವರು ಅಥವಾ ಕೇಂದ್ರ ಸರ್ಕಾರ ನೀಡಿದ ಕೊಡುಗೆಯ ಮೇಲೆ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ಕಡಿತವನ್ನು ಅನುಮತಿಸಲು ಪ್ರಸ್ತಾಪಿಸಲಾಗಿದೆ.

ಪರೋಕ್ಷ ತೆರಿಗೆಗಳು

•    ಜವಳಿ ಮತ್ತು ಕೃಷಿ ಹೊರತುಪಡಿಸಿ ಸರಕುಗಳ ಮೇಲಿನ ಮೂಲ ಸೀಮಾ ಸುಂಕ ದರಗಳ ಸಂಖ್ಯೆಯನ್ನು 21 ರಿಂದ 13 ಕ್ಕೆ ಇಳಿಸಲಾಗಿದೆ.

•    ಆಟಿಕೆಗಳು, ಬೈಸಿಕಲ್ ಗಳು, ವಾಹನಗಳು ಮತ್ತು ನಾಫ್ತಾ ಸೇರಿದಂತೆ ಕೆಲವು ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಗಳು, ಸೆಸ್ ಗಳು ಮತ್ತು ಹೆಚ್ಚುವರಿ ಶುಲ್ಕಗಳಲ್ಲಿ ಸಣ್ಣ ಬದಲಾವಣೆಗಳು.

•    ಮಿಶ್ರಿತ ಸಂಕುಚಿತ ನೈಸರ್ಗಿಕ ಅನಿಲದಲ್ಲಿರುವ ಜಿಎಸ್ಟಿ ಪಾವತಿಸಿದ ಸಂಕುಚಿತ ಜೈವಿಕ ಅನಿಲದ ಮೇಲೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ.

•    ವಿದ್ಯುತ್ ಚಾಲಿತ ವಾಹನದ (ಇವಿ) ಬ್ಯಾಟರಿಯಲ್ಲಿ ಬಳಸಲು ಲಿಥಿಯಂ-ಐಯಾನ್ ಸೆಲ್ ತಯಾರಿಕೆಗಾಗಿ ನಿರ್ದಿಷ್ಟ ಬಂಡವಾಳ ಸರಕುಗಳು / ಯಂತ್ರೋಪಕರಣಗಳ ಮೇಲಿನ ಕಸ್ಟಮ್ಸ್  ಸುಂಕವನ್ನು 31.03.2024 ರವರೆಗೆ ವಿಸ್ತರಿಸಲಾಗಿದೆ

•    ಪರೀಕ್ಷೆಗಳು ಮತ್ತು/ ಅಥವಾ ಪ್ರಮಾಣೀಕರಣದ ಉದ್ದೇಶಕ್ಕಾಗಿ, ಷರತ್ತುಗಳಿಗೆ ಒಳಪಟ್ಟು, ಅಧಿಸೂಚಿತ ಪರೀಕ್ಷಾ ಏಜೆನ್ಸಿಗಳು ಆಮದು ಮಾಡಿಕೊಳ್ಳುವಾಗ ವಾಹನಗಳು, ನಿರ್ದಿಷ್ಟ ಆಟೋಮೊಬೈಲ್ ಭಾಗಗಳು / ಘಟಕಗಳು, ಉಪ-ವ್ಯವಸ್ಥೆಗಳು ಮತ್ತು ಟೈರ್ ಗಳ ಮೇಲೆ ಸೀಮಾ ಸುಂಕ ವಿನಾಯಿತಿ ನೀಡಲಾಗಿದೆ.

•    ಸೆಲ್ಯುಲಾರ್ ಮೊಬೈಲ್ ಫೋನ್ ನ ಕ್ಯಾಮೆರಾ ಮಾಡ್ಯೂಲ್ ತಯಾರಿಕೆಯಲ್ಲಿ ಬಳಸಲು ಕ್ಯಾಮೆರಾ ಲೆನ್ಸ್ ಮತ್ತು ಅದರ ಆದಾನ / ಭಾಗಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ ಮತ್ತು ಬ್ಯಾಟರಿಗಳಿಗೆ ಲಿಥಿಯಂ-ಐಯಾನ್ ಸೆಲ್ ಗಳ ಮೇಲಿನ ಸುಂಕ ರಿಯಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿದೆ.

•    ಟಿವಿ ಪ್ಯಾನೆಲ್ ಗಳ ಓಪನ್ ಸೆಲ್ ಗಳ ಭಾಗಗಳ ಮೇಲಿನ ಮೂಲ ಸೀಮಾ  ಸುಂಕವನ್ನು ಶೇಕಡಾ 2.5 ಕ್ಕೆ ಇಳಿಸಲಾಗಿದೆ.

•    ಎಲೆಕ್ಟ್ರಿಕ್ ಅಡುಗೆಮನೆ ಚಿಮಣಿಯ ಮೇಲಿನ ಮೂಲ ಸೀಮಾ  ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 15 ಕ್ಕೆ ಹೆಚ್ಚಿಸಲಾಗಿದೆ.

•    ಎಲೆಕ್ಟ್ರಿಕ್ ಅಡುಗೆ ಮನೆ ಚಿಮಣಿಗಳ ತಯಾರಿಕೆಗೆ ಶಾಖ ಕಾಯಿಲ್ ಮೇಲಿನ ಮೂಲ ಸೀಮಾ  ಸುಂಕವನ್ನು ಶೇಕಡಾ 20 ರಿಂದ 15 ಕ್ಕೆ ಇಳಿಸಲಾಗಿದೆ.

•    ರಾಸಾಯನಿಕ ಉದ್ಯಮದಲ್ಲಿ ಬಳಸುವ ಡಿನಾಟರ್ಡ್ ಈಥೈಲ್ ಆಲ್ಕೋಹಾಲ್ ಅನ್ನು ಮೂಲ ಸೀಮಾ ಸುಂಕದಿಂದ ವಿನಾಯಿತಿ ನೀಡಲಾಗಿದೆ.

•    ಆಸಿಡ್ ಗ್ರೇಡ್ ಫ್ಲೋರ್ಸ್ಪಾರ್ (ಶೇಕಡಾ 97 ಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಫ್ಲೋರೈಡ್ ಹೊಂದಿರುವ) ಮೇಲಿನ ಮೂಲ ಸೀಮಾ ಸುಂಕವನ್ನು ಶೇಕಡಾ 5 ರಿಂದ 2.5 ಕ್ಕೆ ಇಳಿಸಲಾಗಿದೆ.

•    ಎಪಿಕೋಲೋರ್ಹೈಡ್ರಿನ್ ತಯಾರಿಕೆಯಲ್ಲಿ ಬಳಸಲು ಕಚ್ಚಾ ಗ್ಲಿಸರಿನ್ ಮೇಲಿನ ಮೂಲ ಸೀಮಾ ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 2.5 ಕ್ಕೆ ಇಳಿಸಲಾಗಿದೆ.

•    ಸೀಗಡಿ ಆಹಾರದ ದೇಶೀಯ ತಯಾರಿಕೆಗೆ ಪ್ರಮುಖ ಆದಾನದ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.

•    ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳ ತಯಾರಿಕೆಯಲ್ಲಿ ಬಳಸುವ ಸೀಡ್ ಗಳ ಮೇಲಿನ ಮೂಲ ಸೀಮಾ ಸುಂಕವನ್ನು ಕಡಿಮೆ ಮಾಡಲಾಗಿದೆ.

•    ದೋರ್ ಮತ್ತು ಚಿನ್ನ ಮತ್ತು ಪ್ಲಾಟಿನಂ ಗಟ್ಟಿಗಳಿಂದ ತಯಾರಿಸಿದ ವಸ್ತುಗಳ ಮೇಲಿನ ಸುಂಕವನ್ನು  ಹೆಚ್ಚಿಸಲಾಗಿದೆ.

•    ಬೆಳ್ಳಿ ದೋರ್, ಬಾರ್ ಮತ್ತು ವಸ್ತುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿದೆ.

•    ಸಿಆರ್.ಜಿ.ಒ ಉಕ್ಕು, ಕಬ್ಬಿಣದ ಸ್ಕ್ರ್ಯಾಪ್ ಮತ್ತು ನಿಕ್ಕಲ್ ಕ್ಯಾಥೋಡ್ ತಯಾರಿಕೆಗೆ ಕಚ್ಚಾ ವಸ್ತುಗಳ ಮೇಲಿನ ಮೂಲ ಸೀಮಾ ಸುಂಕ ವಿನಾಯಿತಿ ಮುಂದುವರಿಕೆ.

•    ತಾಮ್ರದ ಸ್ಕ್ರ್ಯಾಪ್ ಮೇಲೆ ಶೇಕಡಾ 2.5 ರಷ್ಟು ರಿಯಾಯಿತಿ ಬಿಸಿಡಿಯನ್ನು ಮುಂದುವರಿಸಲಾಗಿದೆ.

•    ಸಂಯೋಜಿತ ರಬ್ಬರ್ ಮೇಲಿನ ಮೂಲ ಸೀಮಾ ಸುಂಕ  ದರವನ್ನು ಪ್ರತಿ ಕೆ.ಜಿ.ಗೆ ಶೇ.10 ಅಥವಾ 30 ರಿಂದ ಶೇ.25 ಕ್ಕೆ ಹೆಚ್ಚಿಸಲಾಗಿದೆ.

•    ನಿರ್ದಿಷ್ಟ ಸಿಗರೇಟುಗಳ ಮೇಲಿನ ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕವನ್ನು (ಎನ್ ಸಿಸಿಡಿ)  ಸುಮಾರು 16 ಪ್ರತಿಶತದಷ್ಟು ಪರಿಷ್ಕರಿಸಲಾಗಿದೆ.

ಸೀಮಾಸುಂಕ ಕಾನೂನುಗಳಲ್ಲಿ ಶಾಸನಾತ್ಮಕ ಬದಲಾವಣೆ ಪ್ರಸ್ತಾಪ.

•    ಕಸ್ಟಮ್ಸ್ ಕಾಯ್ದೆ, 1962 ಕ್ಕೆ ತಿದ್ದುಪಡಿ ತಂದು  ಸೆಟಲ್ಮೆಂಟ್ ಕಮಿಷನ್ ಅಂತಿಮ ಆದೇಶವನ್ನು ಹೊರಡಿಸಲು ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಂಬತ್ತು ತಿಂಗಳ ಕಾಲಮಿತಿಯನ್ನು ನಿರ್ದಿಷ್ಟಪಡಿಸಲಾಗುವುದು.

•    ಆಂಟಿ ಡಂಪಿಂಗ್ ಡ್ಯೂಟಿ (ಎಡಿಡಿ), ಕೌಂಟರ್ ವೇಯ್ಲಿಂಗ್ ಡ್ಯೂಟಿ (ಸಿವಿಡಿ) ಮತ್ತು ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ನಿಬಂಧನೆಗಳ ಉದ್ದೇಶ ಮತ್ತು ವ್ಯಾಪ್ತಿಯನ್ನು ಸ್ಪಷ್ಟಪಡಿಸಲು ಸೀಮಾ ಸುಂಕ ಕಾಯ್ದೆಗೆ ತಿದ್ದುಪಡಿ ತರಲಾಗುವುದು.

•    ಸಿಜಿಎಸ್ಟಿ ಕಾಯ್ದೆಗೆ ತಿದ್ದುಪಡಿ

•    ಜಿಎಸ್ಟಿ ಅಡಿಯಲ್ಲಿ ಕಾನೂನು ಕ್ರಮವನ್ನು ಪ್ರಾರಂಭಿಸಲು ತೆರಿಗೆ ಮೊತ್ತದ ಕನಿಷ್ಠ ಮಿತಿಯನ್ನು ಒಂದು ಕೋಟಿಯಿಂದ ಎರಡು ಕೋಟಿಗೆ ಹೆಚ್ಚಿಸುವುದು;

•    ತೆರಿಗೆ ಮೊತ್ತದ  ಪ್ರಸ್ತುತ 50 ರಿಂದ 150 ಪ್ರತಿಶತ ವ್ಯಾಪ್ತಿಯಿಂದ 25 ರಿಂದ 100 ಪ್ರತಿಶತದವರೆಗೆ ಕಂಪೌಂಡಿಂಗ್ ಮೊತ್ತವನ್ನು ಕಡಿಮೆ ಮಾಡುವುದು;

•    ಕೆಲವು ಅಪರಾಧಗಳನ್ನು ಅಪರಾಧಮುಕ್ತಗೊಳಿಸುವುದು;

•    ಸಂಬಂಧಿತ ರಿಟರ್ನ್ / ಸ್ಟೇಟ್ಮೆಂಟ್ ಸಲ್ಲಿಸುವ ದಿನಾಂಕದಿಂದ ಗರಿಷ್ಠ ಮೂರು ವರ್ಷಗಳ ಅವಧಿಗೆ ರಿಟರ್ನ್ಸ್ / ಸ್ಟೇಟ್ಮೆಂಟ್ ಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವುದು; ಮತ್ತು

•    ನೋಂದಾಯಿಸದ ಪೂರೈಕೆದಾರರು ಮತ್ತು ಸಂಯೋಜಿತ ತೆರಿಗೆದಾರರು ಇ-ಕಾಮರ್ಸ್ ಆಪರೇಟರ್ ಗಳ (ಇಸಿಒ) ಮೂಲಕ ಸರಕುಗಳ ಅಂತಾ-ರಾಜ್ಯ ಪೂರೈಕೆಯನ್ನು ಮಾಡಲು ಅನುವು ಮಾಡಿಕೊಡುವುದು.

***
 (Release ID: 1895576) Visitor Counter : 3369