ಪ್ರಧಾನ ಮಂತ್ರಿಯವರ ಕಛೇರಿ

ಎಕ್ಸಾಂ ವಾರಿಯರ್ಸ್ ಪುಸ್ತಕದಿಂದ 'ನಿಮ್ಮ ಪರೀಕ್ಷೆ, ನಿಮ್ಮ ವಿಧಾನಗಳು-ನಿಮ್ಮ ಸ್ವಂತ ಶೈಲಿ ಆಯ್ಕೆ ಮಾಡಿಕೊಳ್ಳಿ' ಎಂಬ ಶೀರ್ಷಿಕೆಯ ತುಣುಕುಗಳನ್ನು ಹಂಚಿಕೊಂಡ ಪ್ರಧಾನಿ


ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸುತ್ತಾರೆ ಎಂಬುದನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

Posted On: 16 JAN 2023 2:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಯೋಧರ ಪುಸ್ತಕದಿಂದ 'ನಿಮ್ಮ ಪರೀಕ್ಷೆ, ನಿಮ್ಮ ವಿಧಾನಗಳು-ನಿಮ್ಮ ಸ್ವಂತ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ' ಎಂಬ ಶೀರ್ಷಿಕೆಯ ತುಣುಕುಗಳನ್ನು ಹಂಚಿಕೊಂಡಿದ್ದಾರೆ ಮತ್ತು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಲಾಗುತ್ತಿದೆ ಎಂಬುದನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಕರೆ ನೀಡಿದ್ದಾರೆ.

ಪ್ರಧಾನಿ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ;

"#ExamWarriors ಪುಸ್ತಕದಲ್ಲಿ, ಒಂದು ಮಂತ್ರವಿದೆ ಅದೆಂದರೆ 'ನಿಮ್ಮ ಪರೀಕ್ಷೆ, ನಿಮ್ಮ ವಿಧಾನಗಳು - ನಿಮ್ಮ ಸ್ವಂತ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ' ಎಂಬುದಾಗಿದೆ. 

#ParikshaPeCharcha ಸಮೀಪಿಸುತ್ತಿರುವಂತೆಯೇ, ನೀವು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸುತ್ತೀರಿ ಎಂಬುದನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ. ಇದು ಖಂಡಿತವಾಗಿಯೂ ನಮ್ಮ ಪರೀಕ್ಷಾ ಯೋಧರನ್ನು ಉತ್ತೇಜಿಸುತ್ತದೆ’’.

*****

 



(Release ID: 1891582) Visitor Counter : 150