ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಹಸ್ಯ ಸ್ಥಳದಿಂದ ಯೂಟ್ಯೂಬ್‌ನಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದವರ ಮೇಲೆ ದಾಳಿ ನಡೆಸಿದ ಭಾರತ ಸರ್ಕಾರ
ಸುಳ್ಳು ಸುದ್ದಿ ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಬಹಿರಂಗಪಡಿಸಿದ ಪಿಐಬಿ ಫ್ಯಾಕ್ಟ್ ಚೆಕ್ ಘಟಕ
ಪಿಐಬಿ ಫ್ಯಾಕ್ಟ್ ಚೆಕ್ ಘಟಕದಿಂದ ಲಕ್ಷಗಟ್ಟಲೆ ವೀಕ್ಷಣೆ ಹೊಂದಿದ ಭಾರತದ ಸುಪ್ರೀಂಕೋರ್ಟ್, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಭಾರತದ ಪ್ರಧಾನ ಮಂತ್ರಿಗಳ ಬಗ್ಗೆ ನಕಲಿ ವೀಡಿಯೊಗಳ ಅಸಲಿತನ ಬಯಲು
ಭಾರತದ ಚುನಾವಣಾ ಆಯೋಗ, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೂ ತಪ್ಪು ಮಾಹಿತಿ
ಸುಮಾರು 33 ಲಕ್ಷ ಚಂದಾದಾರರನ್ನು ಹೊಂದಿರುವ, 30 ಕೋಟಿಗೂ ಅಧಿಕ ವೀಕ್ಷಣೆಗಳಿರುವ ಯೂಟ್ಯೂಬ್ ಚಾಲನ್ ಗಳ ಸತ್ಯಾಸತ್ಯತೆ ಪರಿಶೀಲಿಸಿದ ಪಿಐಬಿ
Posted On:
20 DEC 2022 12:02PM by PIB Bengaluru
ಸುಮಾರು 40ಕ್ಕೂ ಅಧಿಕ ಸತ್ಯಾಂಶ ಪರಿಶೀಲನೆ (ಫ್ಯಾಕ್ಟ್ ಚಕ್) ಸರಣಿಯಲ್ಲಿ, ಪಿಐಬಿ ಫ್ಯಾಕ್ಟ್ ಚೆಕ್ ಘಟಕ (ಎಫ್ ಸಿಯು) ಭಾರತದಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ಭೇದಿಸಿದೆ. ಈ ಯೂಟ್ಯೂಬ್ ಚಾನೆಲ್‌ಗಳು ಸುಮಾರು 33 ಲಕ್ಷ ಚಂದಾದಾರರನ್ನು ಹೊಂದಿದ್ದವು ಮತ್ತು 30 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಆ ವೀಡಿಯೊಗಳನ್ನು ಬಹುತೇಕ ಸುಳ್ಳಿನಿಂದ ಕೂಡಿರುವುದು ಕಂಡುಬಂದಿದೆ.
ಇದೇ ಮೊದಲ ಬಾರಿಗೆ ಪಿಐಬಿ, ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಮಾಧ್ಯಮದಲ್ಲಿನ ವೈಯಕ್ತಿಕ ಪೋಸ್ಟ್‌ಗಳನ್ನು ಒಳಗೊಂಡ ಸಂಪೂರ್ಣ ಯೂಟ್ಯೂಬ್ ಚಾನೆಲ್‌ಗಳನ್ನು ಬಹಿರಂಗಪಡಿಸಿದೆ. ಪಿಐಬಿಯಿಂದ ಪರಿಶೀಲಿಸಲಾದ ಯೂಟ್ಯೂಬ್ ಚಾನಲ್‌ಗಳ ವಿವರಗಳು ಕೆಳಕಂಡಂತಿವೆ:
Sl. No.
|
ಯೂಟ್ಯೂಬ್ ಚಾನಲ್ ಹೆಸರು
|
ಚಂದಾದಾರರು
|
ವೀಕ್ಷಣೆ
|
-
|
News Headlines
|
9.67 lakh
|
31,75,32,290
|
-
|
Sarkari Update
|
22.6 lakh
|
8,83,594
|
-
|
आज तक LIVE
|
65.6 thousand
|
1,25,04,177
|
ಈ ಯೂಟ್ಯೂಬ್ ಚಾನೆಲ್‌ಗಳು ಭಾರತದ ಘನತೆವೆತ್ತ ಸುಪ್ರೀಂಕೋರ್ಟ್, ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರಿ ಯೋಜನೆಗಳು, ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂಗಳು), ಕೃಷಿ ಸಾಲ ಮನ್ನಾ ಇತ್ಯಾದಿಗಳ ಬಗ್ಗೆ ಸುಳ್ಳು ಮತ್ತು ಸಂವೇದನಾರಹಿತ ಸುದ್ದಿಗಳನ್ನು ಇತರ ನಕಲಿ ಸುದ್ದಿಗಳಲ್ಲಿ ಹರಡುತ್ತವೆ. ಉದಾಹರಣೆಗೆ ಮುಂದಿನ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸಲಾಗುವುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಂತಹ ನಕಲಿ ಸುದ್ದಿಗಳನ್ನು ಒಳಗೊಂಡಿದೆ; ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವ ಜನರಿಗೆ ಸರ್ಕಾರ ಹಣವನ್ನು ನೀಡುವುದು; ಇವಿಎಂಗಳ ನಿಷೇಧ ಇತ್ಯಾದಿ.
ಯೂಟ್ಯೂಬ್ ಚಾನೆಲ್‌ಗಳು ಟಿವಿ ಚಾನೆಲ್‌ಗಳ ಲೋಗೊಗಳೊಂದಿಗೆ ನಕಲಿ ಮತ್ತು ಸಂವೇದನಾಶೀಲ ಆಸಕ್ತಿ ಹುಟ್ಟಿಸುವ ಅಂಶಗಳನ್ನು ಬಳಸುತ್ತಿರುವುದನ್ನು ಗಮನಿಸಲಾಗಿದೆ ಮತ್ತು ಸುದ್ದಿಯು ಅಧಿಕೃತವಾಗಿದೆ ಎಂದು ವೀಕ್ಷಕರನ್ನು ತಪ್ಪುದಾರಿಗೆಳೆಯಲು ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಲಾಗಿದೆ. ಈ ಚಾನಲ್‌ಗಳು ತಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವುದು ಮತ್ತು ಯೂಟ್ಯೂಬ್ ನಲ್ಲಿ ತಪ್ಪು ಮಾಹಿತಿಯಿಂದ ಹಣಗಳಿಸುತ್ತಿರುವುದು ಕಂಡುಬಂದಿದೆ.
ಕಳೆದ ಒಂದು ವರ್ಷದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೂರಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ ನಂತರ ಪಿಐಬಿ ಫ್ಯಾಕ್ಟ್ ಚೆಕ್ ಘಟಕ ತೆಗೆದುಕೊಂಡ ಕ್ರಮ ಇದಾಗಿದೆ.
ಸ್ಕ್ರೀನ್‌ಶಾಟ್‌ಗಳು
****
(Release ID: 1885053)
Visitor Counter : 218
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam