ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನದ ಪ್ರಯುಕ್ತ ನಮ್ಮ ದಿವ್ಯಾಂಗ ಸಹೋದರಿಯರು, ಸಹೋದರರ ಸ್ಥೈರ್ಯ ಹಾಗೂ ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿಗಳು
प्रविष्टि तिथि:
03 DEC 2022 9:28AM by PIB Bengaluru
ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನದ ಪ್ರಯುಕ್ತ ನಮ್ಮ ದಿವ್ಯಾಂಗ ಸಹೋದರಿಯರು, ಸಹೋದರರ ಸ್ಥೈರ್ಯ ಹಾಗೂ ಸಾಧನೆಗಳನ್ನು ಕೊಂಡಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನದ ಹಿನ್ನೆಲೆಯಲ್ಲಿ ನಾನು ನಮ್ಮ ಸಹೋದರಿಯರು, ಸಹೋದರರ ಸ್ಥೈರ್ಯ ಹಾಗೂ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇನೆ. ದಿವ್ಯಾಂಗರು ಉತ್ತಮ ಬದುಕು ನಡೆಸಲು ಪೂರಕವಾಗುವಂತೆ ನಮ್ಮ ಸರ್ಕಾರ ಹಲವು ಕಾರ್ಯಕ್ರಮ, ಯೋಜನೆಗಳ ಮೂಲಕ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿದೆ. ಹಾಗೆಯೇ ನಮ್ಮ ಸರ್ಕಾರವು ಹಲವು ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲೂ ದಿವ್ಯಾಂಗರಿಗೆ ಸಮಾನ ಅವಕಾಶ ಕಲ್ಪಿಸಲು ಹಾಗೂ ಮುಂದಿನ ಪೀಳಿಗೆಯವರಿಗೆ ಪೂರಕವಾದ ಮೂಲಸೌಕರ್ಯ ಸೃಷ್ಟಿಸುವ ಕಾರ್ಯಕ್ಕೂ ಆದ್ಯತೆ ನೀಡಿದೆ. ಇದೇ ಸಂದರ್ಭದಲ್ಲಿ ವಿಶಿಷ್ಟಚೇತನರ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ತಳಮಟ್ಟದಲ್ಲಿ ಶ್ರಮಿಸುತ್ತಿರುವ ಎಲ್ಲರ ಪ್ರಯತ್ನವನ್ನು ಸ್ಮರಿಸುತ್ತೇನೆ,ʼʼ ಎಂದು ಹೇಳಿದ್ದಾರೆ.
***
(रिलीज़ आईडी: 1880678)
आगंतुक पटल : 209
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam