ಪ್ರಧಾನ ಮಂತ್ರಿಯವರ ಕಛೇರಿ

ಜಿಇಎಂ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವವರನ್ನು ಶ್ಲಾಘಿಸಿದ ಪ್ರಧಾನ ಪ್ರಧಾನಮಂತ್ರಿಗಳು


ಜಿಇಎಂ ಪ್ಲಾಟ್ ಫಾರ್ಮ್ 1 ಲಕ್ಷ ಕೋಟಿ ರೂ.ಗಳ ಒಟ್ಟು ಸರಕು ಮೌಲ್ಯವನ್ನು ದಾಟಿದೆ

Posted On: 29 NOV 2022 9:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಿಇಎಂ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮಾರಾಟಗಾರರನ್ನು ಶ್ಲಾಘಿಸಿದ್ದಾರೆ. 

ಜಿಇಎಂ ಪ್ಲಾಟ್ ಫಾರ್ಮ್ 2022-2023 ರ ವಿತ್ತೀಯ ವರ್ಷದಲ್ಲಿ, 2022 ರ ನವೆಂಬರ್ 29 ರವರೆಗೆ 1 ಲಕ್ಷ ಕೋಟಿ ರೂ.ಗಳ ಒಟ್ಟು ಸರಕು ಮೌಲ್ಯವನ್ನು ದಾಟುತ್ತದೆ.
 
ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ಉತ್ತರವಾಗಿ, ಪ್ರಧಾನಮಂತ್ರಿಯವರು ಮರು-ಟ್ವೀಟ್ ಹೀಗೆ ಮಾಡಿದ್ದಾರೆ:
"ಅದ್ಭುತ ಸುದ್ದಿ! ಭಾರತದ ಉದ್ಯಮಶೀಲತೆಯ ಉತ್ಸಾಹವನ್ನು ಪ್ರದರ್ಶಿಸುವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ವಿಷಯಕ್ಕೆ ಬಂದಾಗ @GeM_India ಗೇಮ್ ಚೇಂಜರ್ ಆಗಿದೆ. ಈ ವೇದಿಕೆಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ. ಇತರರು ಕೂಡಾ ಇದನ್ನು ಅನುಸರಿಸುವಂತೆ ಒತ್ತಾಯಿಸುತ್ತೇನೆ," ಎಂದು ಮರು-ಟ್ವೀಟ್ ಮಾಡಿದ್ದಾರೆ.

***** 



(Release ID: 1880121) Visitor Counter : 121