ಪ್ರಧಾನ ಮಂತ್ರಿಯವರ ಕಛೇರಿ
ಉತ್ಪಾದನಾ ಜಗತ್ತಿನಲ್ಲಿ ಭಾರತ ದಾಪುಗಾಲು ಹಾಕುವುದನ್ನು ಮುಂದುವರಿಸಿದೆ: ಪ್ರಧಾನಮಂತ್ರಿ
ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ ಏಪ್ರಿಲ್-ಅಕ್ಟೋಬರ್ ನಲ್ಲಿ ಫೋನ್ ರಫ್ತು ದುಪ್ಪಟ್ಟಾಗಿದೆ
ಪ್ರಕಟಣಾ ದಿನಾಂಕ:
29 NOV 2022 6:08PM by PIB Bengaluru
ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಫೋನ್ ರಫ್ತಿನ ಪ್ರಮಾಣ ದುಪ್ಪಟ್ಟಿಗೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 7 ತಿಂಗಳಲ್ಲಿ ಮೊಬೈಲ್ ಫೋನ್ ರಫ್ತು 5 ಶತಕೋಟಿ ಡಾಲರ್ ಗಡಿ ದಾಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತ ಹೊಂದಿದ್ದ 2.2 ಬಿಲಿಯನ್ ಡಾಲರ್ ಗೆ ಹೋಲಿಸಿದಾಗ ಇದು ದುಪ್ಪಟ್ಟಾಗಿದೆ.
ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರ ಟ್ವೀಟ್ ಗೆ ಪ್ರಧಾನಮಂತ್ರಿಯವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
"ಭಾರತವು ಉತ್ಪಾದನಾ ಜಗತ್ತಿನಲ್ಲಿ ನಿರಂತರ ದಾಪುಗಾಲು ಹಾಕುತ್ತಲೇ ಇದೆ."
*****
(ಪ್ರಕಟಣೆ ಐ.ಡಿ.: 1880117)
ವಿಸಿಟರ್ ಕೌಂಟರ್ : 193
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam