ಪ್ರಧಾನ ಮಂತ್ರಿಯವರ ಕಛೇರಿ
ಸ್ವಾತಂತ್ರ್ಯ ಹೋರಾಟಗಾರ್ತಿ ಅಪ್ರತಿಮ ವೀರಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಪ್ರಧಾನಿ ಅವರನ್ನು ಸ್ಮರಿಸಿದರು.
प्रविष्टि तिथि:
19 NOV 2022 8:58AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಂತಹ ವೀರಮಹಿಳೆಯ ಧೈರ್ಯ ಮತ್ತು ನಮ್ಮ ದೇಶಕ್ಕೆ ನೀಡಿದ ಸ್ಮರಣೀಯ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ;
"ರಾಣಿ ಲಕ್ಷ್ಮೀಬಾಯಿ ಜಯಂತಿಯ ಈ ದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ಝಾನ್ಸಿ ರಾಣಿ ಅವರ ಧೈರ್ಯ, ಸಾಹಸ ಮತ್ತು ಹೋರಾಟ ನಮ್ಮ ದೇಶಕ್ಕೆ ಅವರು ನೀಡಿರುವ ಸ್ಮರಣಾರ್ಹ ಕೊಡುಗೆ ಎಂದಿಗೂ ನೆನಪಿನಲ್ಲುಳಿಯುವಂತಹುದು. ವಸಾಹತುಶಾಹಿ ಆಳ್ವಿಕೆಯ ದೃಢವಾದ ವಿರೋಧಕ್ಕೆ ರಾಣಿ ಲಕ್ಷ್ಮೀಬಾಯಿ ಅವರು ಸ್ಫೂರ್ತಿಯ ಮೂಲವಾಗಿದ್ದಾರೆ. ಕಳೆದ ವರ್ಷದ ಅವರ ಜಯಂತಿಯ ಈ ದಿನದಂದು ನಾನು ಝಾನ್ಸಿಗೆ ಭೇಟಿ ನೀಡಿದ್ದು, ಅಲ್ಲಿನ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸುತ್ತಾ ಅಲ್ಲಿನ ಅನುಭವಗಳನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ."
*****
(रिलीज़ आईडी: 1877327)
आगंतुक पटल : 257
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam