ಪ್ರಧಾನ ಮಂತ್ರಿಯವರ ಕಛೇರಿ
ತೆಲುಗು ಸೂಪರ್‌ಸ್ಟಾರ್ ಕೃಷ್ಣ ಅವರ ನಿಧನಕ್ಕೆ ಪ್ರಧಾನಮಂತ್ರಿಗಳ ಸಂತಾಪ
ಪ್ರಕಟಣಾ ದಿನಾಂಕ:
15 NOV 2022 1:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೆಲುಗು ಸೂಪರ್‌ಸ್ಟಾರ್ ಕೃಷ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ನಿಧನವು ಚಲನಚಿತ್ರ ಮತ್ತು ಮನರಂಜನಾ ಜಗತ್ತಿಗೆ ಅತಿದೊಡ್ಡ ನಷ್ಟವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಹೀಗೆ ಹೇಳಿದ್ದಾರೆ:
"ಕೃಷ್ಣ ಅವರು ತಮ್ಮ ಅದ್ಭುತ ನಟನೆ ಮತ್ತು ಸ್ನೇಹಪೂರ್ವ ವ್ಯಕ್ತಿತ್ವದ ಮೂಲಕ ಜನರ ಹೃದಯಗಳನ್ನು ಗೆದ್ದ ಹೆಸರಾಂತ ಸೂಪರ್‌ಸ್ಟಾರ್. ಅವರ ನಿಧನವು ಚಿತ್ರರಂಗ ಮತ್ತು ಮನರಂಜನಾ ಜಗತ್ತಿಗೆ ದೊಡ್ಡ ನಷ್ಟವಾಗಿದೆ. ಈ ವಿಷಾದದ ಸಮಯದಲ್ಲಿ ಮಹೇಶ್ ಬಾಬು @urstrulyMahesh ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಓಂ ಶಾಂತಿ."
***
(ಪ್ರಕಟಣೆ ಐ.ಡಿ.: 1876112)
ವಿಸಿಟರ್ ಕೌಂಟರ್ : 192
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam