ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ದೆಹಲಿಯ ಕಲ್ಕಾಜಿ ಬಳಿ “ಇನ್-ಸಿತು ಕೊಳಚೆ ಪುನರ್ವಸತಿ ಯೋಜನೆ”ಯಡಿ ಹೊಸದಾಗಿ ನಿರ್ಮಿಸಿರುವ 3024 ಪ್ಲಾಟ್ ಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಭೂಮಿಹೀನ ಶಿಬಿರದಲ್ಲಿ ಅರ್ಹ ಜ್ಹುಗ್ಗಿ ಜ್ಹೋಪ್ರಿ ನಿವಾಸಿಗಳಿಗೆ ಪ್ಲಾಟ್ ಗಳ ಕೀಲಿ ಕೈ ಹಸ್ತಾಂತರ

“ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದೊಂದಿಗೆ ಪ್ರತಿಯೊಬ್ಬರ ಉನ್ನತಿಗಾಗಿ ದೇಶ ಮುನ್ನಡೆಯುತ್ತಿದೆ”

“ನಮ್ಮ ಸರ್ಕಾರ ಬಡವರಿಗೆ ಸೇರಿದ್ದು. ನೀತಿ ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಗಳಿಗೆ ಬಡವರು ಕೇಂದ್ರವಾಗಿರುತ್ತಾರೆ”

“ಜೀವನದಲ್ಲಿ ಭದ್ರತೆ ಇದ್ದಾಗ ಬಡವರು ಬಡತನದಿಂದ ಹೊರಬರಲು ಶ್ರಮಿಸುತ್ತಾರೆ”

“ನಿಮ್ಮ ಜೀವನದಲ್ಲಿ ಬದಲಾವಣೆ ತರಲು ನಾವು ಬದಕುತ್ತೇವೆ”

“ಪಿಎಂ-ಉದಯ್ ಯೋಜನೆಯಡಿ ದೆಹಲಿಯ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿರುವ ಮನೆಗಳನ್ನು ನಾವು ಸಕ್ರಮಗೊಳಿಸುತ್ತೇವೆ” 

“ದೇಶದ ರಾಜಧಾನಿಯ ಸ್ಥಾನಮಾನಕ್ಕೆ ಅನುಗುಣವಾಗಿ ದೆಹಲಿಯನ್ನು ಎಲ್ಲಾ ಸೌಕರ್ಯಗಳೊಂದಿಗೆ ಸಂಪೂರ್ಣವಾಗಿ ಭವ್ಯ ನಗರವನ್ನಾಗಿ ಮಾಡುವುದು ಸರ್ಕಾರದ ಗುರಿ”

ದೆಹಲಿಯ ಬಡ ಮತ್ತು ಮಧ್ಯಮವರ್ಗದವರು ಮಹತ್ವಾಕಾಂಕ್ಷೆ ಮತ್ತು ಪ್ರತಿಭೆ ಹೊಂದಿರುವವರು”

Posted On: 02 NOV 2022 6:13PM by PIB Bengaluru

‘ಇನ್-ಸಿತು ಕೊಳಚೆ ಪುನರ್ವಸತಿ ಯೋಜನೆ’ಯಡಿ ದೆಹಲಿಯ ಕಲ್ಕಾಜಿಯಲ್ಲಿ ಕೊಳಚೆ ಪ್ರದೇಶದವರಿಗಾಗಿ ಹೊಸದಾಗಿ ನಿರ್ಮಿಸಿರುವ 3024 ಪ್ಲಾಟ್ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು ಮತ್ತು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಭೂಮಿಹೀನ ಶಿಬಿರದಲ್ಲಿ ಅರ್ಹ ಫಲಾನುಭವಿಗಳಿಗೆ ಕೀಲಿ ಕೈಗಳನ್ನು ಹಸ್ತಾಂತರಿಸಿದರು. 

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೆಹಲಿಯ ಜ್ಹುಗ್ಗಿಯಲ್ಲಿ ವಾಸಿಸುತ್ತಿರುವ ನೂರಾರು ಬಡ ಕುಟುಂಬಗಳಿಗೆ ಇಂದು ಹೊಸ ಆರಂಭದ ದೊಡ್ಡ ದಿನವಾಗಿದೆ. ಮೊದಲ ಹಂತದಲ್ಲಿ ಕಲ್ಕಾಜಿ ಪ್ರದೇಶವೊಂದರಲ್ಲೇ 3000 ಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಆದಷ್ಟು ಬೇಗ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಹೊಸ ಮನೆಗಳಿಗೆ ಪ್ರವೇಶಿಸಲಿದ್ದಾರೆ. “ದೆಹಲಿಯನ್ನು ಆದರ್ಶ ನಗರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಇಂತಹ ಪ್ರಯತ್ನಗಳಿಂದ ದೊಡ್ಡ ಪಾತ್ರವನ್ನು ನಿರ್ವಹಿಸಲಿದೆ” ಎಂದು ಹೇಳಿದರು. ದೆಹಲಿಯಂತಹ ನಗರದಲ್ಲಿ ಕನಸುಗಳನ್ನು ಸಾಕಾರಗೊಳಿಸಲಾಗಿದೆ ಮತ್ತು ಅಭಿವೃದ್ದಿಗೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ ಅವರು, ಇಂತಹ ಅಭಿವೃದ‍್ಧಿಗೆ ಅಡಿಪಾಯ ಹಾಕಲು ಮತ್ತು ಕನಸುಗಳನ್ನು ಸಾಕಾರಗೊಳಿಸಲು ಬಡವರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಕಾರಣ. “ವಿಪರ್ಯಾಸವೆಂದರೆ” “ಈ ಬಡವರು ಶೋಚನೀಯ ಪರಿಸ್ಥಿತಿಯಲ್ಲಿ ಬದುಕುವಂತೆ ಮಾಡಲಾಗಿತ್ತು. ಒಂದೇ ನಗರದಲ್ಲಿ ಇಂತಹ ಅಸಮತೋಲನ ಇದ್ದಾಗ ಸಮಗ್ರ ಅಭಿವೃದ್ಧಿ ಕುರಿತು ನಾವು ಹೇಗೆ ಯೋಚಿಸಬಹುದು?. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಾವು ದೊಡ್ಡ ಅಂತರವನ್ನು ತುಂಬಬೇಕಾಗಿದೆ. ಅದಕ್ಕಾಗಿ ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದೊಂದಿಗೆ ಪ್ರತಿಯೊಬ್ಬರ ಉನ್ನತಿಗಾಗಿ ದೇಶ ಮುನ್ನಡೆಯುತ್ತಿದೆ ಎಂದು ಹೇಳಿದರು.

ದಶಕಗಳ ಕಾಲದಿಂದ ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ಬಡತನ ಎಂಬುದು ಬಡವರ ವಿಷಯ ಎನ್ನುವ ಮನಸ್ಥಿತಿಯಲ್ಲಿತ್ತು. ಆದರೆ ಇಂದು ಸರ್ಕಾರ ಬಡವರದ್ದಾಗಿದೆ ಹಾಗೂ ಬಡವರನ್ನು ಹಾಗೆಯೇ ಬಿಡುವುದು ಈ ಸರ್ಕಾರದ ಸ್ವಭಾವದಲ್ಲಿಲ್ಲ. “ನಮ್ಮ ಸರ್ಕಾರ ಬಡವರಿಗೆ ಸೇರಿದ್ದು. ನೀತಿ ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಗಳಿಗೆ ಬಡವರು ಕೇಂದ್ರವಾಗಿರುತ್ತಾರೆ. ನಗರ ಪ್ರದೇಶಗಳ ಬಡವರ ವಿಷಯಗಳನ್ನು ಸಮಾನ ಮಹತ್ವದಿಂದ ನೋಡುತ್ತಿದ್ದೇವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 

ದೆಹಲಿಯಲ್ಲಿ 50 ಲಕ್ಷ ಮಂದಿಗೆ ಬ್ಯಾಂಕ್ ಖಾತೆ ಕೂಡ ಇರಲಿಲ್ಲ. ಅವರು ಬ್ಯಾಂಕಿಂಗ್ ವ್ಯವಸ್ಥೆಯ ಯಾವುದೇ ಪ್ರಯೋಜನದಿಂದ ವಂಚಿತರಾಗಿದ್ದರು. “ಇವರು ದೆಹಲಿಯಲ್ಲೇ ಇದ್ದರೂ ದೆಹಲಿ ಅವರಿಗಿಂತ ದೂರ ಇತ್ತು. ಈ ಪರಿಸ್ಥಿತಿಯನ್ನು ಸರ್ಕಾರ ಬದಲಿಸಿದೆ ಮತ್ತು ಹಣಕಾಸು ಒಳಗೊಳ್ಳುವ ಅಭಿಯಾನದ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆಯುವಂತೆ ನೋಡಿಕೊಳ್ಳಲಾಗಿದೆ. ಇದರ ಫಲಿತಾಂಶದಿಂದ ಬೀದಿ ಬದಿ ವ್ಯಾಪಾರಿಗಳು ಒಳಗೊಂಡಂತೆ ದೆಹಲಿ ಜನರಿಗೆ ನೇರ ಲಾಭ ದೊರೆಯುವಂತಾಗಿದೆ. ಅವರು ಯುಪಿಐ ನ ವ್ಯಾಪಕ ಬಳಕೆ ಕುರಿತೂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸ್ವನಿಧಿ ಯೋಜನೆಯಡಿ 50 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಹಣಕಾಸು ನೆರವು ಪಡೆದಿದ್ದಾರೆ ಎಂದರು.  

“ಒಂದು ರಾಷ್ಟ್ರ – ಒಂದು ಪಡಿತರ ಚೀಟಿ” ಮೂಲಕ ದೆಹಲಿಯ ಬಡಜನತೆ ‘ಸುಗಮ ಜೀವನ’ ನಡೆಸುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ಸಂದರ್ಭದಲ್ಲಿ ಬಡ ಜನತೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆದಿರುವುದು ಸಾಬೀತಾಗಿದೆ. ಕಳೆದ ಎರಡು ವರ್ಷಗಳಿಂದ ಅರ್ಹ ಲಕ್ಷಾಂತರ ದುರ್ಬಲ ವರ್ಗವರಿಗೆ ಕೇಂದ್ರ ಸರ್ಕಾರ ಉಚಿತ ಪಡಿತರ ಸೌಲಭ್ಯ ವಿತರಿಸಿದೆ.  ದೆಹಲಿಯೊಂದರಲ್ಲೇ 2.5 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಈ ಉದ್ದೇಶಕ್ಕಾಗಿ ಖರ್ಚು ಮಾಡಿದೆ ಎಂದು ಮಾಹಿತಿ ನೀಡಿದರು. ದೆಹಲಿಯ 40 ಲಕ್ಷಕ್ಕೂ ಹೆಚ್ಚು ಬಡ ಜನರು ವಿಮಾ ರಕ್ಷಣೆ ಪಡೆದುಕೊಂಡಿದ್ದಾರೆ. ಜನೌಷಧಿ ಯೋಜನೆಯಿಂದ ವೈದ್ಯಕೀಯ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ. “ಜೀವನದಲ್ಲಿ ಇಂತಹ ರಕ್ಷಣೆ ದೊರೆತರೆ ಬಡವರು ವಿಶ್ರಮಿಸದೇ ಕಠಿಣವಾಗಿ ದುಡಿಯುತ್ತಾರೆ. ಬಡತನವನ್ನು ಅವರೇ ತೊಡೆದುಹಾಕುತ್ತಾರೆ” ಎಂದು ಹೇಳಿದರು. ಇದೆಲ್ಲವನ್ನು ಹೆಚ್ಚಿನ ಅಬ್ಬರವಿಲ್ಲದೇ ಮತ್ತು ವಿಸ್ತಾರವಾದ ಜಾಹೀರಾತುಗಳಿಲ್ಲದೇ ಮಾಡಲಾಗಿದೆ. “ನಾವು ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಇದನ್ನು ಮಾಡಿದ್ದೇವೆ” ಎಂದು ಹೇಳಿದರು.

ದೆಹಲಿಯ ಅನಧಿಕೃತ ಬಡಾವಣೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ತಮ್ಮ ಮನೆಗಳಿಗೆ ಸೂಕ್ತ ಮಾನ್ಯತೆ ಇಲ್ಲದೇ ಇರುವ ಬಗ್ಗೆ ಈ ಜನ ಆತಂಕಗೊಂಡಿದ್ದಾರೆ. “ದೆಹಲಿ ಜನರ ಕಳವಳವನ್ನು ತಗ್ಗಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.

ಪಿಎಂ-ಉದಯ್ ಯೋಜನೆಯಡಿ ದೆಹಲಿಯ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿರುವ ಮನೆಗಳನ್ನು ನಾವು ಸಕ್ರಮಗೊಳಿಸುತ್ತೇವೆ. ಈಗಲೂ ಸಹಸ್ರಾರು ಮಂದಿ ಈ ಯೋಜನೆಯಿಂದ ಲಾಭ ಪಡೆದುಕೊಂಡಿದ್ದಾರೆ. ಬಡವರು ಮತ್ತು ಮಧ‍್ಯಮವರ್ಗದವರಿಗೆ ತಮ್ಮದೇ ಸ್ವಂತ ಮನೆಗಳನ್ನು ಹೊಂದಲು ಇವರಿಗೆ 700 ಕೋಟಿ ರೂಪಾಯಿ ಮೊತ್ತವನ್ನು ಬಡ್ಡಿ ಸಬ್ಸಿಡಿ ರೂಪದಲ್ಲಿ ಪಾವತಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ನಮ್ಮ ಸರ್ಕಾರ ದೆಹಲಿ ನಾಗರಿಕರ ಆಕಾಂಕ್ಷೆಗಳನ್ನು ಈಡೇರಿಸಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ದೇಶದ ರಾಜಧಾನಿ ಎಂಬ ಮಾನ್ಯತೆಯೊಂದಿಗೆ ದೆಹಲಿಯ ಜನರಿಗೆ ಕೇಂದ್ರ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ದೆಹಲಿಯನ್ನು ವೈಭವದ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ದೆಹಲಿಯ ಕೆಂಪು ಕೋಟೆ ಮೇಲೆ ಮಾಡಿದ “ಮಹತ್ವಾಂಕ್ಷಿ ಸಮಾಜ” ಕುರಿತ ತಮ್ಮ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು,

ದೆಹಲಿಯ ಬಡ ಮತ್ತು ಮಧ್ಯಮವರ್ಗದವರು ಮಹತ್ವಾಕಾಂಕ್ಷಿ ಮತ್ತು ಪ್ರತಿಭೆ ಹೊಂದಿರುವವರು” ಎಂದರು.

ದೆಹಲಿಯ ಎನ್.ಸಿ.ಆರ್ ವಲಯದ ಅಭಿವೃದ್ಧಿ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, 2014 ರಲ್ಲಿ 190 ಕಿಲೋಮೀಟರ್ ಇದ್ದ ಮೆಟ್ರೋ ಮಾರ್ಗ 400 ಕಿಲೋಮೀಟರ್ ಗೆ ವಿಸ್ತರಣೆಯಾಗಿದೆ. ಕಳೆದ 8 ವರ್ಷಗಳಲ್ಲಿ 135 ಮೆಟ್ರೋ ನಿಲ್ದಾಣಗಳನ್ನು ಮೆಟ್ರೋ ಸಂಪರ್ಕ ಜಾಲಕ್ಕೆ ಸೇರ್ಪಡೆ ಮಾಡಿದ್ದು, ಇದರಿಂದ ಸಮಯ ಮತ್ತು ಹಣ ಉಳಿಯುತ್ತಿದೆ ಎಂದರು. ದೆಹಲಿಯಲ್ಲಿ ಸಂಚಾರಿ ಒತ್ತಡ ನಿವಾರಿಸಲು ಭಾರತ ಸರ್ಕಾರ ರಸ್ತೆಗಳ ವಿಸ್ತರಣೆಗಾಗಿ 50 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ದ್ವಾರಕಾ ಎಕ್ಸ್ ಪ್ರೆಸ್ ಹೆದ್ದಾರಿ, ನಗರ ವಿಸ್ತರಣಾ ರಸ್ತೆ, ಕಂಟ್ರೋಲ್ ಹೆದ್ದಾರಿಯಲ್ಲಿ ಸಾಗುವ ಭಾಗ್ಪೇಟ್ ನಿಂದ ಅಕ್ಷರಧಾಮ ನಡುವಿನ 6 ಪಥದ ಮಾರ್ಗ ಹಾಗೂ ಗುರುಗ್ರಾಮ್ – ಸಹ್ನ ರಸ್ತೆಯ ಎತ್ತರಿಸಿದ ಕಾರಿಡಾರ್ ಗಳನ್ನು ಈ ಸಂದರ್ಭದಲ್ಲಿ ಉದಾಹರಣೆಯಾಗಿ ನೀಡಿದರು.

ಸಧ‍್ಯೋಭವಿಷ್ಯದಲ್ಲಿ ದೆಹಲಿ ಎನ್.ಸಿ.ಆರ್ ನಲ್ಲಿ ತ್ವರಿತ ರೈಲು ಸೇವೆ ದೊರೆಯಲಿದೆ. ದೆಹಲಿಯ ರೈಲ್ವೆ ನಿಲ್ದಾಣವನ್ನು ವೈಭವದಿಂದ ನಿರ್ಮಿಸುವ ಮತ್ತು ದ್ವಾರಕಾದಲ್ಲಿ 80 ಎಕರೆ ಪ್ರದೇಶದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತ್ ವಂದನಾ ಪಾರ್ಕ್ ಅಭಿವೃದ್ಧಿಪಡಿಸುವುದಾಗಿ ಹೇಳಿದರು. “ದೆಹಲಿಯಲ್ಲಿ ಸುಮಾರು 700 ದೊಡ್ಡ ಉದ್ಯಾನವನಗಳನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ -ಡಿಡಿಎ ನಿರ್ವಹಣೆ ಮಾಡುತ್ತಿದೆ. ವಾಜಿ಼ರಾಬಾದ್ ಬ್ಯಾರೇಜ್ ನಿಂದ ಒಕ್ಲಾ ಬ್ಯಾರೇಜ್ ವರೆಗಿನ 22 ಕಿಲೋಮೀಟರ್ ಪ್ರದೇಶದಲ್ಲಿ ಡಿಡಿಎ ಹಲವಾರು ಉದ್ಯಾನವನಗಳನ್ನು ನಿರ್ಮಿಸಿದೆ ಎಂದು ಹೇಳಿದರು.

ಹೊಸ ಮನೆಗಳ ಫಲಾನುಭವಿಗಳು ವಿದ್ಯುತ್ ಉಳಿಸಲು ಎಲ್.ಇ.ಡಿ ಬಲ್ಪ್ ಗಳನ್ನು ಬಳಸಬೇಕು, ನೀರು ವ್ಯರ್ಥವಾಗದಂತೆ ನೋಡಿಕೊಳ್ಳಲು ಮತ್ತು ಇಡೀ ಬಡಾವಣೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡಲು ಆದ್ಯತೆ ನೀಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂದು ಕೇಂದ್ರ ಸರ್ಕಾರ ಕೋಟ್ಯಂತರ ಜನರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತಿದ್ದು, ಕೊಳವೆ ಮೂಲಕ ನೀರು ಪೂರೈಕೆ, ವಿದ್ಯುತ್ ಸಂಪರ್ಕ ದೊರಕಿಸಿಕೊಡುವ ಜೊತೆಗೆ ಉಜ್ವಲಾ ಅಡುಗೆ ಅನಿಲ ಸಿಲಿಂಡರ್ ಗಳನ್ನು ವಿತರಿಸುತ್ತಿದೆ ಮತ್ತು ಕೊಳಗೇರಿಗಳು ಕೊಳಕಿಗೆ ಸಂಬಂಧಿಸಿವೆ ಎಂಬ ಹಳೆಯ ತಪ್ಪು ಕಲ್ಪನೆಯನ್ನು ನಾವು ಮುರಿಯಬೇಕಾಗಿದೆ. ದೆಹಲಿ ಮತ್ತು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪ್ರಮುಖ ಪಾತ್ರವನ್ನು ಮುಂದುವರೆಸುತ್ತಾರೆ ಎಂಬುದು ತಮಗೆ ಖಚಿತವಾಗಿದೆ. ಭಾರತದ ಅಭಿವೃದ‍್ಧಿ ಮತ್ತು ದೆಹಲಿಯ ಯಾನದಲ್ಲಿ ಪ್ರತಿಯೊಬ್ಬ ನಾಗರಿಕರು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೊಡುಗೆ ನೀಡುತ್ತಾರೆ” ಎಂಬ ವಿಶ‍್ವಾಸದೊಂದಿಗೆ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಕೊನೆಗೊಳಿಸಿದರು.

ದೆಹಲಿ ಉಪರಾಜ್ಯಪಾಲ ಶ್ರೀ ಶ‍್ರೀ ವಿನಯ್ ಕುಮಾರ್ ಸೆಕ್ಸೇನಾ, ಕೇಂದ್ರ ವಸತಿ ಮತ್ತು ನಗರ ವ್ಯಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಕೌಶಾಲ್ ಕಿಶೋರ್, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಸಂಸದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 ಹಿನ್ನೆಲೆ

ಸರ್ವರಿಗೂ ಸೂರು ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ ದೆಹಲಿ ಅಭಿವೃದ್ಧಿಪ್ರಾಧಿಕಾರ [ಡಿಡಿಎ]ದಲ್ಲಿ ಇನ್-ಸಿತು ಕೊಳಚೆ ಪುನರ್ವಸತಿ ಯೋಜನೆಯಡಿ 376 ಜ್ಹುಗ್ಗಿ ಜೋಪ್ರಿ ಕ್ಲಸ್ಟರ್ ನಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪುನರ್ವಸತಿ ಯೋಜನೆಯಡಿ ಜ್ಹುಗ್ಗಿ ಜ್ಹೋಪ್ರಿ ಕ್ಲಸ್ಟರ್ ಗಳ ನಿವಾಸಿಗಳಿಗೆ ಸೂಕ್ತ ಸೌಲಭ್ಯ ಮತ್ತು ಉತ್ತಮ ಸೌಕರ್ಯ, ಆರೋಗ್ಯಕರ ಪರಿಸರ ಒದಗಿಸುವ ಉದ್ದೇಶ ಹೊಂದಲಾಗಿದೆ.  

ಕಲ್ಕಾಜಿ ವಿಸ್ತರಣೆ, ಜೈಲ್ರವಾಲಾ ಬಾಗ್ ಮತ್ತು ಕಥ್ಪುತ್ಲಿ ಬಡಾವಣೆಯಲ್ಲಿ ಇಂತಹ ಮೂರು ಯೋಜನೆಗಳನ್ನು ಡಿಡಿಎ ಕೈಗೆತ್ತಿಕೊಂಡಿದೆ. ಕಲ್ಕಾಜಿ ವಿಸ್ತರಣಾ ಯೋಜನೆಯಡಿ ಇನ್-ಸಿತು ಪುರ್ವಸತಿ ಕೊಳಚೆ ಪ್ರದೇಶದ ಕ್ಲಸ್ಟರ್ ಗಳಲ್ಲಿ ಭೂಮಿಹೀನ ಶಿಬರಿ, ನವ್ ಜೀವನ್ ಶಿಬಿರ ಮತ್ತು ಜವಾಹರ್ ಶಿಬಿರ ಯೋಜನೆಗಳು ಕಲ್ಕಾಜಿಯಲ್ಲಿದ್ದು, ವಿವಿಧ ಹಂತಗಳ ಮಾದರಿಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 3024 ಇಡಬ್ಲ್ಯೂಎಸ್ ಪ್ಲಾಟ್ ಗಳನ್ನು ಖಾಲಿ ಇರುವ ವಾಣಿಜ್ಯ ಕೇಂದ್ರ ನಿವೇಶನದಲ್ಲಿ ನಿರ್ಮಿಸಲಾಗಿದೆ. ಭೂಮಿಹೀನ ಶಿಬಿರದಲ್ಲಿ ಜ್ಹುಗ್ಗಿ ಜ್ಹೋಫ್ರಿ ನಿವೇಶನದಲ್ಲಿ ಹೊಸದಾಗಿ ನಿರ್ಮಿಸಿರುವ ಇಡಬ್ಲ್ಯೂಎಸ್ ಪ್ಲಾಟ್ ಗಳನ್ನು ಭೂಮಿಹೀನ ಶಿಬಿರದ ಅರ್ಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ತೆರವುಗೊಳಿಸಲಾಗಿದೆ. ಮುಂದಾಗಿಯೇ ತೆರವುಮಾಡಿರುವ ಭೂಮಿಹೀನ ಶಿಬಿರದ ಸ್ಥಳವನ್ನು ನವ್ ಜೀವನ್ ಶಿಬಿರ ಮತ್ತು ಜವಾಹರ್ ಶಿಬಿರದ ಜನರ ಪುನರ್ವಸತಿಗಾಗಿ ಎರಡನೇ ಹಂತದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮೊದಲ ಹಂತವನ್ನು ಪೂರ್ಣಗೊಳಿಸಲಾಗಿದೆ ಮತ್ತು 3024 ಪ್ಲಾಟ್ ಗಳು ವಾಸಕ್ಕೆ ಸಿದ್ಧವಾಗಿವೆ. ಈ ಪ್ಲಾಟ್ ಗಳನ್ನು 345 ಕೊಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ವೆಟ್ರಿಫೈಡ್ ನೆಲದ ಟೈಲ್ಸ್ ಗಳು, ಸೆರಾಮಿಕ್ ಟೈಲ್ಸ್, ಅಡುಗೆ ಮನೆಗೆ ಉದಯ್ ಪುರ್ ಗ್ರೀನ್ ಮಾರ್ಬಲ್ ಒಳಗೊಂಡಂತೆ ಸುಸಜ್ಜಿತವಾಗಿ ನಾಗರಿಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಮುದಾಯ ಉದ್ಯಾನವನ, ವಿದ್ಯುತ್ ಉಪ ಕೇಂದ್ರಗಳು, ಒಳಚರಂಡಿ ಸಂಸ್ಕರಣಾ ಘಟಕ, ಎರಡು ಹಂತದ ನೀರಿನ ಪೈಪ್ ಲೈನ್ ಗಳು, ಲಿಪ್ಟ್ ಗಳು, ಶುದ್ಧ ನೀರು ಪೂರೈಕೆಗಾಗಿ ನೆಲದಡಿ ಜಲಸಂಗ್ರಹಾಲಯ ಮತ್ತಿತರ ಸಮುದಾಯ ಸೌಕರ್ಯಗಳನ್ನು ಇದು ಹೊಂದಿದೆ. ಮಾಲೀಕತ್ವದ ಹಕ್ಕಿನೊಂದಿಗೆ ಪ್ಲಾಟ್ ಗಳನ್ನು ಮಂಜೂರು ಮಾಡಲಾಗಿದೆ ಮತ್ತು ನಿವಾಸಿಗಳಿಗೆ ಭದ್ರತೆಯ ಭಾವನೆ ಮೂಡಿಸಲಾಗಿದೆ.

***(Release ID: 1873455) Visitor Counter : 148