ಪ್ರಧಾನ ಮಂತ್ರಿಯವರ ಕಛೇರಿ
ನವೆಂಬರ್ 2 ರಂದು ‘ಇನ್ವೆಸ್ಟ್ ಕರ್ನಾಟಕ 2022’ ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ
Posted On:
01 NOV 2022 6:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 2ರಂದು ಬೆಳಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಜಾಗತಿಕ ಹೂಡಿಕೆದಾರರ ಸಮಾವೇಶವಾದ ಇನ್ವೆಸ್ಟ್ ಕರ್ನಾಟಕ 2022ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸುವ ಮತ್ತು ಮುಂದಿನ ದಶಕದಲ್ಲಿಅಭಿವೃದ್ಧಿ ಕಾರ್ಯಸೂಚಿಯನ್ನು ಸ್ಥಾಪಿಸುವ ಗುರಿಯನ್ನು ಈ ಸಮಾವೇಶ ಹೊಂದಿದೆ. ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ 80 ಕ್ಕೂ ಹೆಚ್ಚು ಭಾಷಣಕಾರರ ಗೋಷ್ಠಿಗಳು ನಡೆಯಲಿವೆ. ಕುಮಾರ್ ಮಂಗಲಂ ಬಿರ್ಲಾ, ಸಜ್ಜನ್ ಜಿಂದಾಲ್, ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಉದ್ಯಮದ ಕೆಲವು ಪ್ರಮುಖ ನಾಯಕರು ಭಾಷಣಕಾರರಲ್ಲಿ ಸೇರಿದ್ದಾರೆ. ಇದರೊಂದಿಗೆ, 300ಕ್ಕೂ ಹೆಚ್ಚು ಪ್ರದರ್ಶಕರೊಂದಿಗೆ ಹಲವಾರು ವ್ಯಾಪಾರ ಪ್ರದರ್ಶನಗಳು ಮತ್ತು ದೇಶೀಯ ಅಧಿವೇಶನಗಳು ಸಮಾನಾಂತರವಾಗಿ ನಡೆಯಲಿವೆ.
ದೇಶದ ಅಧಿವೇಶನಗಳನ್ನು ಪ್ರತಿಯೊಂದು ಪಾಲುದಾರ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ನೆದಲ್ರ್ಯಾಂಡ್ಸ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಪ್ರೇಲಿಯಾ ಆಯೋಜಿಸಲಿದ್ದು, ಆಯಾ ದೇಶಗಳಿಂದ ಉನ್ನತ ಮಟ್ಟದ ಸಚಿವರ ಮತ್ತು ಕೈಗಾರಿಕಾ ನಿಯೋಗಗಳನ್ನು ತರಲಿವೆ. ಈ ಕಾರ್ಯಕ್ರಮದ ಜಾಗತಿಕ ಪ್ರಮಾಣವು ಕರ್ನಾಟಕಕ್ಕೆ ತನ್ನ ಸಂಸ್ಕೃತಿಯನ್ನು ವಿಶ್ವಕ್ಕೆ ತೋರಿಸುವ ಅವಕಾಶವನ್ನು ನೀಡುತ್ತದೆ.
*****
(Release ID: 1872874)
Visitor Counter : 164
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam