ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉಣ್ಣೆಯ ಟೋಪಿ ಹೆಣಿಗೆ ಅಭಿಯಾನಕ್ಕಾಗಿ ವಾಯುಪಡೆ ಪತ್ನಿಯರ ಕಲ್ಯಾಣ ಸಂಘವನ್ನು ಶ್ಲಾಘಿಸಿದ ಪ್ರಧಾನಿ 

Posted On: 15 OCT 2022 10:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾಯುಪಡೆಯ ಪತ್ನಿಯರ ಕಲ್ಯಾಣ ಸಂಘದ (ಎಎಫ್‌ಡಬ್ಲ್ಯುಡಬ್ಲ್ಯುಎ) ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ದೇಶಾದ್ಯಂತ ನೆಲೆಸಿರುವ ಸಂಘದ ಸದಸ್ಯರು ಉಣ್ಣೆಯ ಟೋಪಿ ಹೆಣಿಗೆ ಬೃಹತ್ ಅಭಿಯಾನವನ್ನು ಕೈಗೊಂಡಿದ್ದು, ಸಮಾಜದ ಬಡವರಿಗೆ ವಿತರಿಸುವ ಗುರಿಯನ್ನು ಹೊಂದಿದೆ. ಒಟ್ಟು 41541 ಟೋಪಿಗಳನ್ನು ಸದಸ್ಯರು ಹೆಣೆದಿದ್ದಾರೆ.

ಭಾರತೀಯ ವಾಯುಪಡೆಯ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನಿಯವರು

"ಶ್ಲಾಘನೀಯ ಪ್ರಯತ್ನ" ಎಂದು ಟ್ವೀಟ್ ಮಾಡಿದ್ದಾರೆ.

*****


(Release ID: 1868446) Visitor Counter : 91