ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಜಾಮ್‌ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

Posted On: 10 OCT 2022 11:58PM by PIB Bengaluru

ಭಾರತ್ ಮಾತಾ ಕೀ ಜೈ,

ಭಾರತ್ ಮಾತಾ ಕೀ ಜೈ,

ವೇದಿಕೆಯಲ್ಲಿ ಉಪಸ್ಥಿತರಿರುವ  ಗುಜರಾತ್‌ ಜನಪ್ರಿಯ ಮತ್ತು ಎದೆಗುಂದದ ಧೈರ್ಯಶಾಲಿ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್; 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಮತಗಳನ್ನು ಗಳಿಸಿ ಹೊಸ ದಾಖಲೆ ನಿರ್ಮಿಸಿದ ನನ್ನ ಸಂಸದೀಯ ಸಹೋದ್ಯೋಗಿ ಮತ್ತು ಗುಜರಾತ್‌ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್; ಗುಜರಾತ್ ಸರ್ಕಾರದ ಎಲ್ಲಾ ಸಚಿವರು; ಸಂಸದರು, ಶಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ಜಾಮ್‌ನಗರದ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ,

ಕಾಮ್ರೇಡ್ಸ್,

ಭರೂಚ್‌ನಿಂದ ಜಾಮ್‌ನಗರದವರೆಗೆ, ಗುಜರಾತ್‌ನ ಸಮೃದ್ಧಿ ಮತ್ತು ಅಭಿವೃದ್ಧಿಯ ಪಯಣವನ್ನು ವಿಸ್ತರಿಸುವ ಈ ಅನುಭವ ನಿಜವಾಗಿಯೂ ಅದ್ಭುತವಾಗಿದೆ. ಇಂದು ಇಲ್ಲಿ 8 ಮಹತ್ವಾಕಾಂಕ್ಷಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ನೀರು, ವಿದ್ಯುತ್ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! ಇಂದು ವಾಲ್ಮೀಕಿ ಸಮಾಜಕ್ಕಾಗಿ ವಿಶೇಷ ಸಮುದಾಯ ಭವನವನ್ನೂ ಲೋಕಾರ್ಪಣೆ ಮಾಡಲಾಗಿದೆ. ಇದು ನಮ್ಮ ಸಹೋದರ, ಸಹೋದರಿಯರಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಹಾಯ ಮಾಡಲಿದೆ.

ಸ್ನೇಹಿತರೆ,

ಇಂದು ಜಾಮ್‌ನಗರ ಹಲವು ಅದ್ಭುತಗಳನ್ನು ಮಾಡಿದೆ. ಜನರು ನೀಡಿದ ಭವ್ಯ ಸ್ವಾಗತ ಮತ್ತು  ಆಶೀರ್ವಾದದಿಂದಾಗಿ ನಾನು ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರಲು ತಡವಾಯಿತು. ಅಂತಹ ಉತ್ಸಾಹ, ಆನಂದ ಮತ್ತು ಚೈತನ್ಯವನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನನ್ನ ತಾಯಂದಿರು ಮತ್ತು ಸಹೋದರಿಯರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ನನ್ನ ಹೃದಯ ಇನ್ನಷ್ಟು ಸಂತೋಷದಿಂದ ತುಂಬಿದೆ. ವಯಸ್ಸಾದ ತಾಯಂದಿರು ತಮ್ಮ ಆಶೀರ್ವಾದವನ್ನು ಸುರಿಸುವುದಕ್ಕಿಂತ ಉತ್ತಮವಾದದ್ದು ಇನ್ನಾವುದೂ ಇಲ್ಲ. ನವರಾತ್ರಿ ಮುಗಿದಿದೆ ಮತ್ತು 2 ವರ್ಷಗಳಲ್ಲಿ ಕೊರೊನಾ ತೀವ್ರತೆಯೂ ಕ್ಷೀಣಿಸಲು ಪ್ರಾರಂಭಿಸಿದೆ. ಈ ಬಾರಿ ಗುಜರಾತ್‌ನ ಮೂಲೆ ಮೂಲೆಗಳಲ್ಲಿ ನವರಾತ್ರಿ ಆಚರಿಸಿರುವುದನ್ನು ನಾನು ನೋಡಿದ್ದೇನೆ. ಜಾಮ್‌ನಗರ ಕೂಡ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಿತು. ನವರಾತ್ರಿ ಮುಗಿದು ದಸರೆಯೂ ಮುಗಿಯುತ್ತಿದ್ದಂತೆ, ದೀಪಾವಳಿ ಹಬ್ಬಕ್ಕೆ ಸಿದ್ಥತಾ ಸಂಭ್ರಮ ಶುರುವಾಗಿದೆ. ಸುಮಾರು 2 ದಶಕಗಳ ಹಿಂದೆ ಜಾಮ್‌ನಗರ, ಸೌರಾಷ್ಟ್ರ ಮತ್ತು ಕಚ್ ಸೇರಿದಂತೆ ಇಡೀ ಗುಜರಾತ್ ಭೂಕಂಪದಿಂದ ತತ್ತರಿಸಿತ್ತು ಎಂಬುದು ನಿಮಗೂ ನೆನಪಿದೆ.  ಗುಜರಾತ್ ಮೇಲೆ ಸಾವು ಸುಳಿದಾಡುತ್ತಿರುವಂತೆ ತೋರುತ್ತಿತ್ತು. ಆ ದಿನಗಳು ಎಷ್ಟು ಭೀಕರವಾಗಿದ್ದವು ಎಂದರೆ ಗುಜರಾತ್‌ನಲ್ಲಿ ಭೂಕಂಪದ ನಂತರ ಮೊದಲ ನವರಾತ್ರಿ ಮತ್ತು ಮೊದಲ ದೀಪಾವಳಿಯನ್ನು ಯಾವುದೇ ಮನೆಯಲ್ಲೂ ಆಚರಿಸಲಿಲ್ಲ. ಭೂಕಂಪ ದುರಂತವು ಎಷ್ಟು ಹತಾಶೆ ತಂದಿದೆ ಎಂದರೆ ಗುಜರಾತ್ ಮತ್ತೆಂದೂ ಎದ್ದು ನಿಲ್ಲಲು ಸಾಧ್ಯವೇ ಇಲ್ಲ ಎಂದು ಜನರು ಭಾವಿಸಿದ್ದರು. ಆದರೆ ಇಲ್ಲಿನ ಜನರು ತಮ್ಮ ಕುಶಲತೆ, ಕಲೆಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ, ಅಂತಹ ಜನಸಂಖ್ಯೆಯು ಸ್ವಯಂಚಾಲಿತವಾಗಿ ತಮ್ಮನ್ನು ತಾವು ಮತ್ತೆ ಅಭಿವೃದ್ಧಿ ಹಾದಿಗೆ ಹೊರಳಿತು. ಆತ್ಮವಿಶ್ವಾಸ ಮತ್ತು ಅವರ ದೃಢಸಂಕಲ್ಪವು ಎಲ್ಲಾ ಹತಾಶೆಯನ್ನು ಛಿದ್ರಗೊಳಿಸಿತು. ಮತ್ತೆ ಗುಜರಾತ್ ಎದ್ದು ನಿಂತಿತು. ಮಾತ್ರವಲ್ಲದೆ, ಸ್ಥಿರವಾಗಿ  ಓಡಲು ಆರಂಭಿಸಿತು. ಇಂದು ಅದು ಇಡೀ ದೇಶಕ್ಕೆ ವೇಗ ನೀಡುವ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ನೀವು ನೋಡಿ, ಕಚ್‌ನ ಅಭಿವೃದ್ಧಿ, ಕಚ್‌ನ ಸೌಂದರ್ಯ, ಕಚ್‌ನ ಪ್ರಕೃತಿ. ಒಂದು ಕಾಲದಲ್ಲಿ ಸಾವಿನ ಕರಿನೆರಳಿನಲ್ಲಿದ್ದ ಆ ಅಭಿವೃದ್ಧಿಯನ್ನು ಕಣ್ತುಂಬಿಕೊಳ್ಳಲು ಇಡೀ ದೇಶ ಮತ್ತು ವಿಶ್ವವೇ ಕಚ್‌ಗೆ ಭೇಟಿ ನೀಡುತ್ತದೆ. ಅಲ್ಲದೆ, ಜಾಮ್‌ನಗರದ ಪಕ್ಷಿಧಾಮ ನೋಡಲು ಬರುತ್ತದೆ. ಇವತ್ತು ಜಾಮ್‌ನಗರಕ್ಕೆ ಬಂದಿದ್ದೇನೆ. ಹಾಗಾಗಿ ಜಾಮ್‌ನಗರದ ಜನರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ಸುಮಾರು 2 ತಿಂಗಳ ಹಿಂದೆ, ಭೂಕಂಪದಲ್ಲಿ ನಾವು ಕಳೆದುಕೊಂಡವರ ನೆನಪಿಗಾಗಿ ಕಚ್‌ನ ಭುಜಿಯಾ ಡುಂಗರ್‌ನಲ್ಲಿ ಸ್ಮೃತಿವನ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಅಮೆರಿಕದಲ್ಲಿ 9-11ರ ಅವಳಿ ಕಟ್ಟಡಗಳ ನೆಲಸಮದ ಸಂತ್ರಸ್ತರಿಗೆ ನಿರ್ಮಿಸಲಾದ 'ಗ್ರೌಂಡ್ ಜೀರೋ' ಅಥವಾ ಜಪಾನ್‌ನ ಹಿರೋಷಿಮಾದಲ್ಲಿ ನಿರ್ಮಿಸಲಾದ ಸ್ಮಾರಕಕ್ಕಿಂತ ಸ್ಮೃತಿವನ ಕಡಿಮೆಯೇನೂ ಇಲ್ಲ. ಗುಜರಾತ್ ಭೂಕಂಪದಲ್ಲಿ ಜೀವ ತೆತ್ತವರ ನೆನಪಿಗಾಗಿ ಈ ಸ್ಮಾರಕ ನಿರ್ಮಿಸಲಾಗಿದೆ. ಇದರಲ್ಲಿ ಜಾಮ್‌ನಗರದ ಸಂತ್ರಸ್ತರೂ ಸೇರಿದ್ದಾರೆ. ಆದ್ದರಿಂದಲೇ ತಮ್ಮ ಆತ್ಮೀಯರನ್ನು ಕಳೆದುಕೊಂಡಿರುವ ಎಲ್ಲಾ ಕುಟುಂಬಗಳು ಒಮ್ಮೆ ಸ್ಮೃತಿವನಕ್ಕೆ ಭೇಟಿ ನೀಡಿ, ನಿಮ್ಮ ಪ್ರೀತಿಪಾತ್ರರ ಹೆಸರನ್ನು ಕೆತ್ತಿರುವ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ಜಾಮ್‌ನಗರದಿಂದ ಯಾರಾದರೂ ಕಚ್‌ಗೆ ಭೇಟಿ ನೀಡಲು ಬಯಸಿದರೆ, ಭುಜ್‌ನಲ್ಲಿರುವ ಈ ಸ್ಮೃತಿವನಕ್ಕೆ ಭೇಟಿ ನೀಡಲು ಮರೆಯದಿರಿ ಎಂಬುದು ನನ್ನ ವಿನಂತಿ.

ಸಹೋದರ, ಸಹೋದರಿಯರೇ,

ಇಂದು ನಾನು ಜಾಮ್‌ನಗರದ ಪುಣ್ಯಭೂಮಿಗೆ ಬಂದಿರುವುದರಿಂದ ಜಾಮ್ ಸಾಹೇಬ್ ಮಹಾರಾಜ ದಿಗ್ವಿಜಯಸಿಂಹ ಅವರಿಗೆ ಗೌರವ ನಮನ ಸಲ್ಲಿಸಲು ಬಯಸುತ್ತೇನೆ. ಮಹಾರಾಜ ದಿಗ್ವಿಜಯಸಿಂಹರು ತಮ್ಮ ದಯೆ, ಕರುಣೆ ಮತ್ತು ಸಾರ್ವಜನಿಕ ಕಾರ್ಯಗಳ ಮೂಲಕ 2ನೇ ಮಹಾಯುದ್ಧದ ಸಮಯದಲ್ಲಿ ಪೋಲಿಷ್ ಜನರಿಗೆ ಆಶ್ರಯ ನೀಡಿ, ಕರುಣೆಯ ಮೂರ್ತಿಯಾದರು. ಅಂದಿನ ಪೋಲೆಂಡ್ ಜತೆಗಿನ ಅವರ ಬಾಂಧವ್ಯದ ಲಾಭ ಮತ್ತು ಪ್ರಯೋಜನ ಇವತ್ತಿಗೂ ಇಡೀ ಭಾರತಕ್ಕೆ ಸಿಗುತ್ತಿದೆ. ಉದಾಹರಣೆಗೆ, ಭಾರತದ ನಮ್ಮ ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಕ್ಕಿಕೊಂಡಿದ್ದರು. ಬಾಂಬ್‌ಗಳು ಮತ್ತು ಶೆಲ್‌ಗಳ ದಾಳಿಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಯಿತು. ಇದು ಬಹುದೊಡ್ಡ ಬಿಕ್ಕಟ್ಟು, ಆದರೆ ಈ ಸುದೀರ್ಘ ಸ್ನೇಹಮಯ ಸಂಬಂಧದಿಂದಾಗಿ ನಾವು ಬಿಕ್ಕಟ್ಟಿನಿಂದ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು. ಪೋಲಿಷ್ ಸರ್ಕಾರವು ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕಾರಣವೇನೆಂದರೆ, ದಿಗ್ವಿಜಯಸಿಂಹ ಜಿ ಅವರ ಸಹೃದಯ ಸ್ವಭಾವ. ನಾವು ಜಾಮ್ ಸಾಹೇಬ್ ನಗರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದೇವೆ. ಜಾಮ್‌ನಗರವನ್ನು ಅಭಿವೃದ್ಧಿಪಡಿಸುವ ಮೂಲಕ ಜಾಮ್ ಸಾಹೇಬ್ ಮಹಾರಾಜ ದಿಗ್ವಿಜಯಸಿಂಹ ಜಿ ಅವರಿಗೆ ನಿಜವಾದ ಗೌರವ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಸ್ತುತ, ಜಾಮ್ ಸಾಹೇಬ್ ಶತ್ರುಸಲ್ಯಾ ಸಿನ್ ಅವರ ಆಶೀರ್ವಾದ ನನ್ನ ಮೇಲಿದೆ. ಇತ್ತೀಚೆಗೆ, ಅವರ ಆಶೀರ್ವಾದ ಪಡೆಯಲು ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾವೆಲ್ಲರೂ ಸದಾ ಪ್ರಾರ್ಥಿಸುತ್ತೇವೆ, ನಾವು ಅವರ ಮಾರ್ಗದರ್ಶನ ಪಡೆಯುವುದನ್ನು ಮುಂದುವರಿಸುತ್ತೇವೆ. ಸ್ನೇಹಿತರೇ, ಕ್ರಿಕೆಟ್‌ನಲ್ಲಿ ಜಾಮ್‌ನಗರ ಇನ್ನೂ ಮುಂದಿದೆ. ಇಂದಿಗೂ ಜಾಮ್‌ನಗರ ಜಾಗತಿಕ ಕ್ರಿಕೆಟ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ. ಜಾಮ್‌ನಗರ ಮತ್ತು ಸೌರಾಷ್ಟ್ರದ ಆಟಗಾರರು ಕ್ರಿಕೆಟ್‌ನಲ್ಲಿ ಅಮೋಘ ಶಕ್ತಿ ಸಾಮರ್ಥ್ಯ, ತಾಕತ್ತು ತೋರಿದ್ದಾರೆ. ನಾವು ಟ್ರೋಫಿಯನ್ನು ಎತ್ತಿ ಹಿಡಿದಾಗ, ಗುಜರಾತ್‌ನ ಹೆಮ್ಮೆ ಮತ್ತು ವೈಭವ ಅದರಲ್ಲಿ ಪ್ರತಿಫಲಿಸುತ್ತದೆ. ಪ್ರತಿಭೆ ಮತ್ತು ಸೇವಾ ಮನೋಭಾವದಿಂದ ತುಂಬಿರುವ ಈ ಪುಣ್ಯ ಭೂಮಿಗೆ ನಮಸ್ಕರಿಸುವುದರಲ್ಲಿ ಸದಾ ಸಂತೋಷ ಮತ್ತು ಆನಂದವಿದೆ. ಅದರೊಂದಿಗೆ ಪಟ್ಟುಬಿಡದೆ ನಿಮಗೆ ಸೇವೆ ಸಲ್ಲಿಸುವ ನನ್ನ ವೈಯಕ್ತಿಕ ಸಂಕಲ್ಪವೂ ಬಲಗೊಳ್ಳುತ್ತಿದೆ.

ಸಹೋದರ ಸಹೋದರಿಯರೇ,

ಸ್ವಲ್ಪ ಸಮಯದ ಹಿಂದೆ, ಭೂಪೇಂದ್ರ ಭಾಯಿ ಪಂಚಶಕ್ತಿಯನ್ನು ವಿವರಿಸುತ್ತಿದ್ದರು. ಅಭಿವೃದ್ಧಿಯ ಈ ಪಂಚ ನಿರ್ಣಯಗಳಿಂದ ಗುಜರಾತ್ ತನ್ನನ್ನು ತಾನು ಬಲಪಡಿಸಿಕೊಂಡಿದೆ, ಗುಜರಾತ್ ಇಂದು ಹಿಮಾಲಯ ಪರ್ವತದ ಶಕ್ತಿಯಂತೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಜನಶಕ್ತಿ, ಜ್ಞಾನಶಕ್ತಿ, ಜಲಶಕ್ತಿ, ಊರ್ಜಶಕ್ತಿ ಮತ್ತು ರಕ್ಷಾಶಕ್ತಿ ಈ 5 ನಿರ್ಣಯಗಳ ಆಧಾರಸ್ತಂಭದ ಬಲದಿಂದ ಗುಜರಾತ್‌ನ ಈ ಭವ್ಯ ಕಟ್ಟಡವು ಹೊಸ ಎತ್ತರಕ್ಕೆ ಏರುತ್ತಿದೆ. 20-25 ವರ್ಷಗಳ ಹಿಂದೆ ನಮ್ಮ ಸ್ಥಿತಿ ಹೇಗಿತ್ತು? ಅದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿ. ಗುಜರಾತ್‌ನ ಈಗಿನ 20-25 ವರ್ಷ ವಯಸ್ಸಿನ ಮಕ್ಕಳೆಲ್ಲರೂ ಅದೃಷ್ಟವಂತರು, ಅವರು ತಮ್ಮ ಹಿರಿಯರು ಎದುರಿಸಿದ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಈ ಸಮಸ್ಯೆಗಳನ್ನು ಹೋಗಲಾಡಿಸಲು ನಾವು ತೀವ್ರ ಪ್ರಚಾರ ಮತ್ತು ಪ್ರಯತ್ನಗಳನ್ನು ಮಾಡಿದ್ದೇವೆ. ಇಲ್ಲಿಗೆ ಬರುವಾಗ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕ, ಯುವತಿಯರೇ ನಿಂತಿದ್ದನ್ನು ನಾನು ನೋಡಿದೆ. ಸುಮಾರು 20-25 ವರ್ಷಗಳ ಹಿಂದಿನ ಜಾಮ್‌ನಗರ ಮತ್ತು ಕಥಿಯಾವಾಡದ ಸ್ಥಿತಿಯ ಬಗ್ಗೆ ನೀವು ಮನೆಯಲ್ಲಿ ನಿಮ್ಮ ಹಿರಿಯರನ್ನು ಕೇಳಬಹುದು. ಹೊಲಗಳಿಗೆ ನೀರುಣಿಸುವಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಮಕ್ಕಳಿಗೆ ಬಾಯಾರಿಕೆಯಾದಾಗ, ತಾಯಿ ಬಿಂದಿಗೆ ಹೊತ್ತು 3 ಕಿಲೋ ಮೀಟರ್ ದೂರದ ಸ್ಥಳಕ್ಕೆ ನೀರು ಪಡೆಯಲು ಹೋಗಬೇಕಾದ ಅನಿವಾರ್ಯತೆ ಮತ್ತು ಸಂಕಷ್ಟ ಇತ್ತು. ಅಂತಹ ದಿನಗಳನ್ನು ನಾವು ನೋಡಿದ್ದೇವೆ. ಇಂದು ನೀವು ಅಂತಹ ನೋವುಗಳನ್ನು ಇನ್ನು ಮುಂದೆ ನೆನಪಿಸಿಕೊಳ್ಳದ ರೀತಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಮೊದಲು ಟ್ಯಾಂಕರ್‌ಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು, ಆದರೂ ಟ್ಯಾಂಕರ್ ಬರುತ್ತದೆ ಎಂಬ ಖಚಿತತೆ ಇರಲಿಲ್ಲ. ಬಂದರೂ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಸಾಕಷ್ಟು ಬಾರಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತ ನಂತರವೂ ಟ್ಯಾಂಕರ್‌ ನೀರು ಖಾಲಿಯಾಯಿತು ಎಂಬ ಉತ್ತರ ಬರುತ್ತಿತ್ತು. ಇದು ಇಡೀ ಕಥಿಯಾವಾಡದ ಪರಿಸ್ಥಿತಿಯಾಗಿತ್ತು.

ಒಂದು ಘಟನೆ ನನಗೆ ಇನ್ನೂ ನೆನಪಿದೆ. ಆ ಸಮಯದಲ್ಲಿ ನಾನು ರಾಜಕೀಯ ರಂಗಕ್ಕೆ ಪ್ರವೇಶಿಸಿರಲಿಲ್ಲ. ಪತ್ರಿಕೆಯಲ್ಲಿ ಫೋಟೊ ನೋಡಿದೆ, ಜಾಮ್‌ನಗರದಲ್ಲಿ ಕ್ಲಿಕ್ಕಿಸಿದ ಫೋಟೊ ಅದಾಗಿತ್ತು. ಆ ಫೋಟೊ ಯಾವುದರ ಬಗ್ಗೆ ಇತ್ತು? ಅಂದಿನ ಗುಜರಾತ್ ಮುಖ್ಯಮಂತ್ರಿ ಜಾಮ್‌ನಗರಕ್ಕೆ ನೀರಿನ ಟ್ಯಾಂಕ್ ಉದ್ಘಾಟನೆಗೆ ಬಂದಿದ್ದರು. ನೀರಿನ ಟ್ಯಾಂಕ್ ಉದ್ಘಾಟನೆಯ ಸುದ್ದಿಯನ್ನು ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಲಾಗಿತ್ತು. ಆದರೆ ನಾನಿಂದು ವಾಸ್ತವದಲ್ಲಿ, ಅಂದಿನ ಗುಜರಾತ್‌ ರಾಜ್ಯದ ಒಟ್ಟು ವಾರ್ಷಿಕ ಬಜೆಟ್‌ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಗುಜರಾತ್‌ನ ಪ್ರಗತಿಯನ್ನು ಯಾವುದೇ ಸಂದರ್ಭದಲ್ಲೂ ನಿಲ್ಲಿಸಲು ಬಿಡುವುದಿಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಈಗ ನಾವು ಹೆಚ್ಚಿನ ದಾಪುಗಾಲುಗಳನ್ನು ಹಾಕಬೇಕಾಗಿದೆ, ನಾವು ತಲೆ ಎತ್ತಿ ಮುಂದೆ ನಡೆಯಬೇಕಿದೆ, ಸಹೋದರರೇ.

ನಾನು ಮೊದಲ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಾಗ, ಜಾಮ್‌ನಗರ ಪ್ರದೇಶದ ಶಾಸಕರು ಏನು ಒತ್ತಾಯಿಸಿದ್ದರು ಗೊತ್ತಾ? ಈ ಶಾಸಕರು ವಿವಿಧ ಪಕ್ಷಗಳಿಂದ ಬಂದವರು. ‘ದಯವಿಟ್ಟು ಪರಿಹಾರ ಕಾರ್ಯವನ್ನು ಬೇಗ ಆರಂಭಿಸಿ’ ಎಂಬ ಬೇಡಿಕೆಯೊಂದಿಗೆ ಬರುತ್ತಿದ್ದರು. ರಸ್ತೆಗೆ ಸ್ವಲ್ಪ ಮಣ್ಣು ಹಾಕಬೇಕು. ಮಣ್ಣಿನ ರಸ್ತೆ ನಿರ್ಮಿಸಬೇಕು ಎಂದು ಶಾಸಕರು ಒತ್ತಾಯಿಸುತ್ತಿದ್ದರು. ಆದರೆ ಇಂದು ನಮ್ಮ ಶಾಸಕರು ‘ಸುಸಜ್ಜಿತ ಜಲ್ಲಿ ಕಲ್ಲಿನ ಟಾರ್ ರಸ್ತೆ’ ಅಥವಾ ‘ಚತುಷ್ಪಥ ರಸ್ತೆ’ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೈಪಂಪುಗಳನ್ನು ಕೇಳುತ್ತಿದ್ದ ಕಾಲವೊಂದಿತ್ತು. ಇಂದು ನರ್ಮದಾ ನದಿ ಸೌನಿ ಯೋಜನೆಯ ಮೂಲಕ ಇಡೀ ಗುಜರಾತಿನಾದ್ಯಂತ ನೀರು ಹರಿಯುತ್ತಿದೆ. ಬಂಧುಗಳೇ, ತಾಯಿ ನರ್ಮದೆಯನ್ನು ಪೂಜಿಸಿ ಪುಣ್ಯ ಸಂಪಾದಿಸುತ್ತಿದ್ದ ಕಾಲವೊಂದಿತ್ತು. ಆ ತಾಯಿ ನಮ್ಮಿಂದ ಸಂತಸಗೊಂಡು ಗುಜರಾತಿನ ಮೂಲೆ ಮೂಲೆಯನ್ನು ಆವರಿಸಿ ಜನರ ಮೇಲೆ ತನ್ನ ಆಶೀರ್ವಾದವನ್ನು ಸುರಿಸುತ್ತಿದ್ದಾಳೆ. ಅವಳು ಹೊಸ ಪ್ರಜ್ಞೆ, ಸಂಕಲ್ಪ ಮತ್ತು ಹೊಸ ಶಕ್ತಿ, ಸಾಮರ್ಥ್ಯವನ್ನು ತರುತ್ತಾಳೆ.

ನಾನು ರಾಜ್‌ಕೋಟ್‌ ಸಭಾಂಗಣದಲ್ಲಿ ಸೌನಿ ಯೋಜನೆ ಅನಾವರಣಗೊಳಿಸಿದಾಗ, ಪ್ರತಿಭಟನಾಕಾರರಿಗೆ ಆ ಯೋಜನೆ ಸ್ವಲ್ಪವೂ ಇಷ್ಟವಿರಲಿಲ್ಲ. ಚುನಾವಣೆಗೆ ಮುನ್ನ ಮೋದಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಸೌನಿ ಯೋಜನೆ ಕಾರ್ಯಗತಗೊಳಿಸಲು ಕಷ್ಟ ಎಂಬುದು ಅವರ  ಭಾವನೆಯಾಗಿತ್ತು. ಆಗ ನಾನು, ಕೈಪಂಪ್‌ ಯೋಜನೆ ದಾಟಿ ಏಕೆ ಯೋಚಿಸಬಾರದು? ಮಾರುತಿ ಕಾರಿನ ಒಳಗೆ ಕುಳಿತು ಪ್ರಯಾಣಿಸುವ ಜಾಗದಷ್ಟು ದೊಡ್ಡ ಪೈಪ್‌ಲೈನ್ ಅನ್ನು ನಾನು ಹಾಕುತ್ತೇನೆ" ಎಂದು ಹೇಳಿದೆ. ನಂತರ ಪೈಪ್ ಅಳವಡಿಸಿ, ಸೌನಿ ಯೋಜನೆಯಿಂದ ಜಲಾಶಯಗಳನ್ನು ತುಂಬಿಸಿ ಹೊಲಗಳಿಗೆ ನೀರುಣಿಸಲಾಗುತ್ತಿದೆ. ಈಗ ನನ್ನ ರೈತ ಬಾಂಧವರು ಹತ್ತಿ ಮತ್ತು ಶೇಂಗಾ ನಾಟಿ ಮಾಡುವ ಮೂಲಕ ಎರಡೂ ರೀತಿಯ ಲಾಭ ಪಡೆಯುತ್ತಿದ್ದಾರೆ. ಈ ಬೆಳೆಗಳಿಗೆ ಅವರು ಹಿಂದೆಂದೂ ಅಂತಹ ಮೌಲ್ಯ ಮತ್ತು ಪ್ರಯೋಜನಗಳನ್ನು ಪಡೆದಿರಲಿಲ್ಲ. ಈಗ ಲಾಲ್ಪುರಕ್ಕೆ ನೀರು ಬಂದಿದೆ. ಈಗ ಲಕ್ಷಾಂತರ ಹೆಕ್ಟೇರ್‌ ಭೂಮಿಗೆ ನೀರು ಸಿಗುತ್ತಿದೆ. ಜಾಮ್‌ನಗರ, ದ್ವಾರಕಾ, ರಾಜ್‌ಕೋಟ್, ಪೋರಬಂದರ್‌ನ ಲಕ್ಷಾಂತರ ಜನರಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸಿಗಲಿದೆ.

ಗುಜರಾತ್‌ನಲ್ಲಿ ಜಲಜೀವನ್ ಮಿಷನ್‌ ಕೆಲಸವನ್ನು ತ್ವರಿತಗೊಳಿಸಿದ್ದಕ್ಕಾಗಿ ಮತ್ತು ಗುಜರಾತ್‌ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಭೂಪೇಂದ್ರ ಭಾಯಿ ಮತ್ತು ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ನಾವು ನಮ್ಮ ತಾಯಿ ಮತ್ತು ಸಹೋದರಿಯರ ಆಶೀರ್ವಾದವನ್ನು ಪಡೆದಿದ್ದೇವೆ. ಏಕೆಂದರೆ ಮನೆಯಲ್ಲಿ ನೀರಿನ ಸಮಸ್ಯೆಗಳನ್ನು ನೋಡಿಕೊಳ್ಳುವ ಸಂಪೂರ್ಣ ಹೊರೆ ಮಹಿಳೆಯರ ಮೇಲಿದೆ. ಮನೆಗೆ ಅತಿಥಿಗಳು ಬಂದಾಗ, ನೀರಿನ ಸಮಸ್ಯೆಯಿಂದ ನನ್ನ ತಾಯಂದಿರು ಮತ್ತು ಸಹೋದರಿಯರು ಈ ದೊಡ್ಡ ಚಿಂತೆಯನ್ನು ಎದುರಿಸಬೇಕಾಗಿತ್ತು. ಈ ತಾಯಂದಿರು ಮತ್ತು ಸಹೋದರಿಯರ ತಲೆ ಮೇಲಿನ ಬಿಂದಿಗೆಯ ಹೊರೆಯನ್ನು ಯಾರು ತೆಗೆದುಹಾಕುತ್ತಾರೆ? ಆ ಜವಾಬ್ದಾರಿಯನ್ನು ಈ ಮಗನೇ ತೆಗೆದುಕೊಳ್ಳುತ್ತಾನೆ! ಇಂದು ಸಂಪೂರ್ಣವಾಗಿ ಪೈಪುಗಳ ಮೂಲಕ ನೀರು ಪೂರೈಸುತ್ತಿದ್ದೇವೆ. ಹರ್ ಘರ್ ಜಲ್ ಅಭಿಯಾನಕ್ಕೆ ಇದರಿಂದ ಉತ್ತೇಜನ ಸಿಗಲಿದೆ.

ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಅವಧಿಯಲ್ಲಿ ದೇಶದ ಬಡವರು ನಮ್ಮ ಮೊದಲ ಕಾಳಜಿಯಾಗಿದ್ದರು. ಬಡವರ ಮನೆಯಲ್ಲಿ ಅಡುಗೆ ಮುಂದುವರಿಯುವಂತೆ ಮಾಡಲು ಸಕಲ ಪ್ರಯತ್ನಿಸಿದೆವು. ಹಾಗಾಗಿ ಈ ದೇಶದ 80 ಕೋಟಿ ಬಡವರು ಒಮ್ಮೆಯೂ ಹಸಿವಿನಿಂದ ಬಳಲದಂತೆ ಉಚಿತ ಪಡಿತರ ಒದಗಿಸಿದೆವು. ಜನರು ಒಂದು ಕಾಳು ಧಾನ್ಯ ತಿನ್ನಲು ಸಿಕ್ಕರೂ ಅವರು ಆಶೀರ್ವಾದ ನೀಡುತ್ತಾರೆ. ಇಲ್ಲಿ ನಾನು ದೇಶದ 80 ಕೋಟಿ ಜನರ ಆಶೀರ್ವಾದ ಪಡೆಯುತ್ತಿದ್ದೇನೆ, ನಾನು ನಿಮ್ಮೆಲ್ಲರ ಆಶೀರ್ವಾದವನ್ನೂ ಪಡೆಯುತ್ತಿದ್ದೇನೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಡಿಸೆಂಬರ್ ವರೆಗೆ ನಡೆಯಲಿದೆ. ಆಪತ್ಕಾಲದಲ್ಲಿಯೂ ಬಡವರ ಮನೆಯಲ್ಲಿ ಅಡುಗೆ ನಿಲ್ಲಬಾರದು ಎಂಬುದು ನಮ್ಮ ಸರ್ಕಾರದ ಕಾಳಜಿಯಾಗಿದೆ.

ಎರಡನೆಯದಾಗಿ, ‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’ ಬಗ್ಗೆ ಮಾತನಾಡೋಣ. ಈಗ ಜಾಮ್‌ನಗರವನ್ನು ಬಹಳ ಚಿಕ್ಕ ಸ್ಥಳದೊಂದಿಗೆ ಸಮೀಕರಿಸಲಾಗಿದೆ. ಅದಕ್ಕೆ ‘ಛೋಟಿ ಕಾಶಿ’ ಎಂಬ ಹೆಸರೇ ಸಾಕ್ಷಿ. ಆದರೆ ಇಂದು ಜಾಮ್‌ನಗರ ವಿಶ್ವಮಾನ್ಯವಾಗಿದೆ. ವಾಸ್ತವದಲ್ಲಿ ಇಡೀ ಜಿಲ್ಲೆ ವಿಶ್ವಮಾನ್ಯವಾಗಿದೆ. ಇಂದು ದೇಶಾದ್ಯಂತದ ಜನರು ಜಾಮ್‌ನಗರ ಜಿಲ್ಲೆಯಲ್ಲಿ ತಮ್ಮ ಜೀವನೋಪಾಯ ಗಳಿಸುತ್ತಾರೆ. ತಂತ್ರಜ್ಞಾನ ಬಳಸಿಕೊಂಡು ‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’  ಅಡಿ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಅಥವಾ ಕರ್ನಾಟಕದಂತಹ ದೇಶದ ಯಾವುದೇ ಭಾಗದ ಜನರಿಗೆ ಇಲ್ಲಿ ಆಹಾರ ಖಾತ್ರಿಪಡಿಸಲಾಗುತ್ತದೆ. ಅವನ ಕಾರ್ಡ್ ತನ್ನ ಹಳ್ಳಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೂ, ಬೇರೆ ರಾಜ್ಯದಲ್ಲಿದ್ದಾಗ ಅವನು ಹಸಿವಿನಿಂದ ಇರಬೇಕಾಗಿಲ್ಲ. ಆ ಕಾರ್ಡ್‌ನೊಂದಿಗೆ ಈ ರಾಜ್ಯದಲ್ಲಿ ತನ್ನ ಆಹಾರದ ಕೋಟಾ ಪಡೆಯಲು ಸಾಧ್ಯವಾಗುತ್ತದೆ. ಜಾಮ್‌ನಗರವು ತೈಲ ಸಂಸ್ಕರಣಾಗಾರಕ್ಕೆ ಹೆಸರುವಾಸಿಯಾಗಿದೆ ಮತ್ತು ತೈಲ ಆರ್ಥಿಕತೆಯನ್ನು ಹೊಂದಿದೆ. ಇಲ್ಲಿ ಇಂಧನ ಕ್ಷೇತ್ರ ಎಷ್ಟು ದೊಡ್ಡದಾಗಿದೆ! ದೇಶದ ಶೇಕಡ 35ರಷ್ಟು ಕಚ್ಚಾ ತೈಲವನ್ನು ಜಾಮ್‌ನಗರದಲ್ಲಿ ಸಂಸ್ಕರಿಸಲಾಗುತ್ತದೆ. ಜಾಮ್‌ನಗರದ ಪ್ರತಿಯೊಬ್ಬ ವ್ಯಕ್ತಿಯು ಅದರ ಬಗ್ಗೆ ಹೆಮ್ಮೆಪಡುತ್ತಾನೆ ಎಂದು ನನಗೆ ಖಾತ್ರಿಯಿದೆ. ಜಾಮ್‌ನಗರದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ, ನರೇಂದ್ರ ಮೋದಿ ಮತ್ತು ಭೂಪೇಂದ್ರ ಅವರ ಡಬಲ್ ಎಂಜಿನ್ ಸರ್ಕಾರವು ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 20 ವರ್ಷಗಳ ಹಿಂದೆ ನಿಮ್ಮ ನಗರದಲ್ಲಿ ಸಂಚಾರ ಸ್ಥಿತಿ ಹೇಗಿತ್ತು? ಈಗ ಜಾಮ್‌ನಗರದಲ್ಲಿ ರಸ್ತೆಗಳನ್ನು ವಿಸ್ತರಿಸಲಾಗುವುದು; ಇದಕ್ಕಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು; ಮತ್ತು ಬೆಳೆಯುತ್ತಿರುವ ನಗರಕ್ಕೆ ಸಮೃದ್ಧಿ ತರಲು ಮತ್ತು ಸಾಮಾನ್ಯ ಜನರಿಗೆ ಸೌಲಭ್ಯಗಳನ್ನು ತರುವ ಉದ್ದೇಶದಿಂದ ಮೇಲ್ಸೇತುವೆಗಳು, ಮೇಲ್ಸೇತುವೆಗಳು, ಮೇಲುರಸ್ತೆಗಳು ಮತ್ತು ಫ್ಲೈಓವರ್ ಗಳ ಕೆಲಸವೂ ನಡೆಯುತ್ತಿದೆ. ಗುಜರಾತಿನ ಪಶ್ಚಿಮ ತುದಿಯ ಸಮುದ್ರ ತೀರದಲ್ಲಿ ಒಂದು ಮೂಲೆಯಲ್ಲಿ ಕುಳಿತಿದ್ದ ಜಾಮ್‌ನಗರದಂತಹ ಸ್ಥಳವು ಇಂದಿನ ಯುಗದಲ್ಲಿ ನಮ್ಮನ್ನು ಪೋಷಿಸುತ್ತಿದೆ.

ಜಾಮ್‌ನಗರವನ್ನು ಭಾರತದ ಮೂಲೆ ಮೂಲೆಗೆ ಸಂಪರ್ಕ ಕಲ್ಪಿಸಸಬೇಕಿದೆ. ಆದ್ದರಿಂದ ಅಮೃತಸರ-ಭಟಿಂಡಾ-ಜಾಮ್‌ನಗರ ಕಾರಿಡಾರ್ ಅನ್ನು 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾರಿಡಾರ್ ಇಡೀ ಜಾಮ್‌ನಗರ ಮತ್ತು ಉತ್ತರ ಭಾರತವನ್ನು ಬಲಪಡಿಸಲಿದೆ. ಇಡೀ ಉತ್ತರ ಭಾರತಕ್ಕೆ ಜಾಮ್‌ನಗರದಲ್ಲಿರುವ ಶಕ್ತಿ ಸಾಮರ್ಥ್ಯ, ಉತ್ಪಾದನೆ, ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಪರಿಚಯವಾಗುತ್ತದೆ. ಈ ಒಂದು ರೈಲ್ವೆ ಹಳಿ ಆ ಶಕ್ತಿಯನ್ನು ತರಲಿದೆ. ಇದು ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ ಅಥವಾ ಹಿಮಾಚಲದೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕಾರಿಡಾರ್ ನಿಂದಾಗಿ ಗುಜರಾತಿನ ವ್ಯಾಪಾರ ವಿಸ್ತಾರವಾಗುತ್ತದೆ ಮತ್ತು ಅದರ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಇದಲ್ಲದೆ, ತರಕಾರಿಗಳು ಮತ್ತು ಹಣ್ಣುಗಳು ಉತ್ತರ ಭಾರತವನ್ನು ಸಹ ತಲುಪುತ್ತವೆ. ಗುಜರಾತಿಗಳಿಗೆ ವಿಶೇಷ ಗುಣವಿದೆ. ಉಪಯೋಗಕ್ಕೆ ಬಾರದ ವಸ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನಾವು ಸಿದ್ಧಹಸ್ತರು. ನೀವು ಮಾವಿನ ಹಣ್ಣನ್ನು ತಿಂದ ನಂತರ ನಾವು ಅದರ ಬೀಜದಿಂದ 'ಮುಖ್ವಾಸ್' ತಯಾರಿಸುತ್ತೇವೆ. ನಾವು ಯಾವುದನ್ನೂ ವ್ಯರ್ಥ ಮಾಡಲು ಬಿಡುವುದಿಲ್ಲ. ಹರಿಪರ್‌ನಲ್ಲಿರುವ 40 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಾವು ಈ ಸ್ಥಾವರವನ್ನು ವೇಸ್ಟ್ ಲ್ಯಾಂಡ್ ಎಂದು ಹೆಸರಿಸಲಾದ ಭೂಮಿಯಲ್ಲಿ ಸ್ಥಾಪಿಸಿದ್ದೇವೆ. ಅಂದರೆ, ಬಳಸಲಾಗದ ಸ್ಥಳಗಳನ್ನು ಸಹ ಸದುಪಯೋಗ ಪಡಿಸಲಾಗಿದೆ.

ಸ್ನೇಹಿತರೆ,

ರೈತರ ಅಥವಾ ಬಡವರ ಕಲ್ಯಾಣ ಅಥವಾ ಕೈಗಾರಿಕೆಗಳ ಅಭಿವೃದ್ಧಿ ಅಥವಾ ಮೂಲಸೌಕರ್ಯಗಳನ್ನು ವಿಸ್ತರಿಸಲು, ಗುಜರಾತ್ ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಎಂಬುದು ಹೊಸ ಉದಾಹರಣೆಯಾಗಿದೆ. ಜಾಮ್‌ನಗರ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ಜಾಮ್‌ನಗರದಲ್ಲಿದೆ. ಕೊರೊನಾದಿಂದಾಗಿ ಜನರು ಡಬ್ಲ್ಯುಎಚ್ಒ ಗುರುತಿಸಲು ಪ್ರಾರಂಭಿಸಿದ್ದಾರೆ. ವಿಶ್ವ ಆರೋಗ್ಯ ಸಂಘಟನೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವು ಜಾಮ್‌ನಗರದಲ್ಲಿದೆ. ಈಗಾಗಲೇ ಜಾಮ್‌ನಗರದಲ್ಲಿ ಆಯುರ್ವೇದ ವಿಶ್ವವಿದ್ಯಾನಲಯವಿದ್ದು, ಅದಕ್ಕೊಂದು ಗರಿ ಮೂಡಿಸಿದೆ. ಇಂದು ಜಾಮ್‌ನಗರದ ಆಯುರ್ವೇದ ವಿಶ್ವವಿದ್ಯಾಲಯವು ರಾಷ್ಟ್ರೀಯ ವಿಶ್ವವಿದ್ಯಾಲಯದ ಮಾನ್ಯತೆ ಪಡೆದುಕೊಂಡಿದೆ. ನಮ್ಮ ಜಾಮ್‌ನಗರ ಖಂಡಿತವಾಗಿಯೂ 'ಛೋಟಿ ಕಾಶಿ' ಆದರೆ ಅದನ್ನು 'ಸೌಭಾಗ್ಯ ನಗರ' ಎಂದೂ ಕರೆಯುತ್ತಾರೆ. ನಮ್ಮ ಸೌಭಾಗ್ಯ ನಗರ ಅಥವಾ ಜಾಮ್‌ನಗರ ಸಿಂಧೂರ್, ಬಳೆಗಳು, ಬಿಂದಿಗಳು ಮತ್ತು ಬಂಧನಗಳಿಗೆ ಹೆಸರುವಾಸಿಯಾಗಿದೆ. ನಮ್ಮ ಸರ್ಕಾರವು ಗುಜರಾತ್‌ನ ಬಂಧನಿ ಕಲೆಯನ್ನು ಅಭಿವೃದ್ಧಿಪಡಿಸಲು ಅನೇಕ ಹೊಸ ಪ್ರೋತ್ಸಾಹಗಳನ್ನು ನೀಡಿದೆ. ಹಸ್ತಕಾಲ ಸೇತು ಯೋಜನೆಯ ಮೂಲಕ, ಜಾಮ್‌ನಗರದ ಹಿತ್ತಾಳೆ ಉದ್ಯಮವು ಪ್ರವರ್ಧಮಾನಕ್ಕೆ ಬಂದಿದೆ. ನಾನು ಪ್ರಧಾನಿಯಾದಾಗ ಜಾಮ್‌ನಗರ ಮತ್ತು ಅದರ ಹಿತ್ತಾಳೆ ಉದ್ಯಮದ ಚಿಂತಾಜನಕ ಸ್ಥಿತಿಯ ಬಗ್ಗೆ ಸುದ್ದಿ ಬಂದಿದ್ದು ನನಗೆ ಇನ್ನೂ ನೆನಪಿದೆ. ಈ ಬಗ್ಗೆ ಎಲ್ಲರೂ ನನ್ನನ್ನು ಭೇಟಿಯಾಗಲು ಬರುತ್ತಿದ್ದರು. ನಂತರ ನಾವು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಹಿತ್ತಾಳೆ ಉದ್ಯಮವನ್ನು ಆ ಚಿಂತಾಜನಕ ಸ್ಥಿತಿಯಿಂದ ಹೊರತೆಗೆದಿದ್ದೇವೆ.

ಸಹೋದರ ಸಹೋದರಿಯರೇ,

ಪಿನ್‌ನಂತಹ ಸಣ್ಣ ವಸ್ತು ಮತ್ತು ವಿಮಾನದ ವಿವಿಧ ಬಿಡಿಭಾಗಗಳನ್ನು ಸಹ ಜಾಮ್‌ನಗರ, ರಾಜ್‌ಕೋಟ್ ಅಥವಾ ಕಥಿಯಾವಾಡದ ಕೈಗಾರಿಕೆಗಳಿಂದ ತಯಾರಿಸಲಾಗುತ್ತದೆ. ಇದು ನಾವು ಇಲ್ಲಿ ಸೃಷ್ಟಿಸಿದ ಶಕ್ತಿಯಾಗಿದೆ.

ಸ್ನೇಹಿತರೆ,

ದೇಶದಲ್ಲಿ ವ್ಯಾಪಾರ ಮತ್ತು ವಹಿವಾಟು ನಡೆಸುವುದು ಈಗ ಸುಲಭವಾಗಿದೆ. ಅಡೆತಡೆಗಳನ್ನು ಕಡಿಮೆ ಮಾಡುವುದು ಮತ್ತು ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು ನನ್ನ ದೊಡ್ಡ ಉದ್ದೇಶವಾಗಿದೆ. ಸಣ್ಣ ಕೈಗಾರಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡುವುದು ನನ್ನ ಆದ್ಯತೆಯಾಗಿತ್ತು. ಈ ಹಿಂದೆ ಸರ್ಕಾರದ ಪ್ರತಿಯೊಂದು ಕಾರ್ಯಕ್ಕೂ ದೊಡ್ಡ ದೊಡ್ಡ ರಾಶಿಯ ನಮೂನೆಗಳನ್ನು ಭರ್ತಿ ಮಾಡಬೇಕಿತ್ತು. ಆದರೆ ಸರ್ಕಾರವು ಈ ಹಿಂದಿನ ತೀರಾ ಹಳೆಯದಾದ 33,000 ಅನುಸರಣಾ ಕಾಯಿದೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ತಿಳಿದು ನಿರ್ದಿಷ್ಟವಾಗಿ ಸಣ್ಣ ಉದ್ಯಮಿಗಳು ಸಂತೋಷಪಟ್ಟಿವೆ. ನಮ್ಮ ಎಂಎಸ್‌ಎಂಇ ವಲಯವು ಇದರಿಂದ ಹೆಚ್ಚು ಪ್ರಯೋಜನ ಪಡೆಯಿತು. ಇಷ್ಟೇ ಅಲ್ಲದೆ, ಹಿಂದಿನ ಸರ್ಕಾರಗಳು ಜಾರಿಗೆ ತಂದಿರುವ ಹಲವಾರು ಕಾನೂನುಗಳಿವೆ. ಉದಾಹರಣೆಗೆ, ನೀವು ಫ್ಯಾಕ್ಟರಿಯಲ್ಲಿ ಶೌಚಾಲಯ, ಬಾತ್ ರೂಂ ಹೊಂದಿದ್ದು, ಪ್ರತಿ 6 ತಿಂಗಳಿಗೊಮ್ಮೆ ನೀವು ಅದನ್ನು ವೈಟ್-ವಾಶ್ ಮಾಡದಿದ್ದರೆ, 6 ತಿಂಗಳ ಶಿಕ್ಷೆ ವಿಧಿಸಲಾಗುತ್ತಿತ್ತು. ಇಂತಹ ನಿರರ್ಥಕ ಕಾನೂನುಗಳನ್ನು ತೊಡೆದುಹಾಕಿದ್ದೇವೆ.

ಇಂತಹ ಅದೆಷ್ಟೋ ಕಾನೂನುಗಳಿದ್ದವು. ಬ್ರಿಟಿಷರ ಕಾಲದ ಕಾನೂನುಗಳನ್ನು ಅನುಸರಿಸಲಾಗುತ್ತಿತ್ತು. ನಮ್ಮ ವ್ಯಾಪಾರಿಗಳು, ವರ್ತಕರು ಮತ್ತು ದೇಶದ ಉದ್ಯಮಿಗಳನ್ನು ಜೈಲಿಗೆ ಹಾಕಲು ನಾನು ಬಯಸುವುದಿಲ್ಲ. ನಾನು ಅಂತಹ ಸುಮಾರು 2,000 ಕಾನೂನುಗಳನ್ನು ರದ್ದುಗೊಳಿಸಿದ್ದೇನೆ. ವ್ಯವಹಾರದಲ್ಲಿ ನಿಮ್ಮ ಸ್ನೇಹಿತರ ಗಮನಕ್ಕೆ ಬಂದಿರುವ ಅಂತಹ ಕಾನೂನುಗಳು ಯಾವುದಾದರೂ ಇದ್ದರೆ, ದಯವಿಟ್ಟು ನನಗೆ ತಿಳಿಸಿ. ಪ್ರತಿ ಸಣ್ಣ ಕಾರಣಕ್ಕೂ ಕಂಬಿ ಹಿಂದೆ ಹಾಕುವುದು ವಸಾಹತುಶಾಹಿ ಮನಸ್ಥಿತಿಯಾಗಿದ್ದು, ಅದನ್ನು ಹೋಗಲಾಡಿಸಲು ನಾನು ಅಭಿಯಾನ ಪ್ರಾರಂಭಿಸಿದ್ದೇನೆ, ಈ ಅಭಿಯಾನ ಮುಂದುವರಿಯಲಿದೆ. ‘ಸುಲಭವಾಗಿ ಉದ್ಯಮ ವ್ಯವಹಾರ, ವ್ಯಾಪಾರ ವಹಿವಾಟು’ ನಡೆಸಲು ನನ್ನ ಸರ್ಕಾರ ಒತ್ತು ನೀಡುವ ರೀತಿಯನ್ನು ಈ ಹಿಂದೆ ಲೆಕ್ಕಿಸಿರಲಿಲ್ಲ. ಮೊದಲು, ಒಬ್ಬ ವ್ಯಕ್ತಿಯನ್ನು ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಕಳಿಸಿ, ಸತಾಯಿಸಲಾಗುತ್ತಿತ್ತು. ಅಧಿಕಾರಿಗಳ ಜೇಬು ತುಂಬಿಸುವಂತೆ ಅವರನ್ನು ಒತ್ತಾಯಿಸಲಾಗುತ್ತಿತ್ತು. ಹಾಗಾಗಿ, ವ್ಯವಹಾರವನ್ನು ಸುಲಭಗೊಳಿಸಲು, ನಾವು ಕಾನೂನುಗಳು ಮತ್ತು ನಿಯಮಗಳನ್ನು ವ್ಯವಸ್ಥಿತವಾಗಿ ಬದಲಾಯಿಸಿದ್ದೇವೆ. ಈ ಕಾರಣದಿಂದಾಗಿ ಜಾಗತಿಕ ಉದ್ಯಮ ವ್ಯವಹಾರ ಶ್ರೇಯಾಂಕದಲ್ಲಿ ಭಆರತದ ಸ್ಥಾನ ಪ್ರಚಂಡ ಜಿಗಿತ ಕಂಡುಕೊಂಡಿದೆ. 2014ರಲ್ಲಿ ನಾನು ಪ್ರಧಾನಿಯಾದಾಗ ಮತ್ತು ನೀವು ನನ್ನನ್ನು ಪ್ರಧಾನ ಮಂತ್ರಿಯಾಗಿ ಸೇವೆ ಮಾಡಲು ಕಳುಹಿಸಿದಾಗ, ಭಾರತವು ಸುಲಭವಾಗಿ ವ್ಯಾಪಾರ ವಹಿವಾಟು ನಡೆಸುವ ಪರಿಸರ ವ್ಯವಸ್ಥೆಯಲ್ಲಿ ಭಾರತ 142ನೇ ಸ್ಥಾನದಲ್ಲಿತ್ತು. 5-6 ವರ್ಷಗಳ ಕಠಿಣ ಪರಿಶ್ರಮದ ನಂತರ ನಾವು 63ನೇ ಸ್ಥಾನಕ್ಕೆ ಜಿಗಿದಿದ್ದೇವೆ. ನಾವು ಪಟ್ಟುಹಿಡಿದರೆ, 50ರ ಒಳಗಿನ ಸ್ಥಾನಕ್ಕೆ ಏರಬಹುದು. ಅಂತಹ ದೊಡ್ಡ ಸುಧಾರಣೆಯು ಕಾಗದಗಳಲ್ಲಿ ಮಾತ್ರವಲ್ಲ, ಆದರೆ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ನೆಲ ಮಟ್ಟದಲ್ಲಿ ಅದರ ಲಾಭ ಪಡೆಯಲು ನಾವು ಕೆಲಸ ಮಾಡುತ್ತಿದ್ದೇವೆ!

ಇಡೀ ವಿಶ್ವಕ್ಕೆ ಹೋಲಿಸಿ ಭಾರತದ ಸ್ಥಿತಿಯನ್ನು ನೋಡಿ. ದಿನಪತ್ರಿಕೆಗಳಲ್ಲಿ ಜಗತ್ತಿನ ಸ್ಥಿತಿಗತಿಗಳನ್ನು ಓದುತ್ತಾ ಬೆಳಗಿನ ಜಾವ ಹಾಳಾಗುತ್ತದೆ. ವಿಶ್ವ ಬ್ಯಾಂಕ್, ಐಎಂಎಫ್, ಪ್ರಮುಖ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವಾದ್ಯಂ ಜನರು ಆರ್ಥಿಕ ಪರಿಸ್ಥಿತಿಯ ಬಗ್ಗೆ ಬರೆಯುತ್ತಾರೆ. ಕಳೆದ 50 ವರ್ಷಗಳಲ್ಲಿ ಇಂತಹ ಹಣದುಬ್ಬರವನ್ನು ಇಂಗ್ಲೆಂಡ್ ಕಂಡಿರಲಿಲ್ಲ. ಅದೇ ರೀತಿ, ಅಮೆರಿಕವು ಕಳೆದ 45 ವರ್ಷಗಳಲ್ಲಿ ಅಂತಹ ಹಣದುಬ್ಬರ ಎದುರಿಸಿರಲಿಲ್ಲ. ಬಡ್ಡಿದರಗಳು ಹೆಚ್ಚುತ್ತಿರುವಾಗ ಆರ್ಥಿಕ ಬೆಳವಣಿಗೆ ದರ ಕುಸಿದಿವೆ. ವಿಶ್ವದೆಲ್ಲೆಡೆ ಆರ್ಥಿಕ ರಂಗ ಕುಗ್ಗುತ್ತಿದೆ. ಆದರೆ ಎಲ್ಲದರ ನಡುವೆಯೂ ಭಾರತ ಮಾತ್ರ ನಿರ್ಭೀತ ರೀತಿಯಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಆರ್ಥಿಕತೆಯಾಗಿದೆ. 2014ರ ಮೊದಲು ಭಾರತವು ವಿಶ್ವದ 10ನೇ ಬಹು ದೊಡ್ಡ ಆರ್ಥಿಕತೆಯಾಗಿತ್ತು, ಆದರೆ ಈಗ ಇಷ್ಟು ಕಡಿಮೆ ಅವಧಿಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಇದು ವಿಶ್ವದ ಮೊದಲ 5 ಆರ್ಥಿಕತೆಗಳಲ್ಲಿ ಒಂದಾಗಿದೆ. ನಾವು ನಮ್ಮ ಶ್ರೇಣಿಯನ್ನು 6ರಿಂದ 5ನೇ ಸ್ಥಾನಕ್ಕೆ ಸುಧಾರಿಸಿದಾಗ, ಇಡೀ ದೇಶದಲ್ಲಿ ಉತ್ಸಾಹ, ಆನಂದ ತುಂಬಿತ್ತು. ಇದಕ್ಕೆ ಕಾರಣವೇನು? ಮೋದಿ ಪ್ರಧಾನಿ ಎಂಬ ಕಾರಣಕ್ಕೆ ಅಲ್ಲ. ಏಕೆಂದರೆ 250 ವರ್ಷಗಳ ಕಾಲ ನಮ್ಮನ್ನು ಆಳಿದ ದೇಶ ಮೊದಲು 5ನೇ ಸ್ಥಾನದಲ್ಲಿತ್ತು. ಈಗ ನಾವು ಅವರನ್ನು ಹಿಂದಿಕ್ಕಿ ನನ್ನ ದೇಶ ಮುನ್ನಡೆಯುತ್ತಿದೆ. ಸರ್ಕಾರ ಮಾತ್ರ ಎಲ್ಲಾ ಪ್ರಶಂಸೆಗಳನ್ನು ಪಡೆಯುವುದಿಲ್ಲ. ಎಲ್ಲ ಶ್ರೇಯಸ್ಸು ನನ್ನ ಕಾರ್ಮಿಕ ಬಂಧುಗಳಿಗೆ, ರೈತ ಬಂಧುಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ, ವ್ಯಾಪಾರಸ್ಥರಿಗೆ ಸಲ್ಲುತ್ತದೆ. ಅವರಿಂದಲೇ ಈ ದೇಶ ಪ್ರಗತಿಯತ್ತ ಸಾಗುತ್ತಿದೆ, ಈ ಕಾರಣಕ್ಕಾಗಿ ನಾನು ಅವರೆಲ್ಲರಿಗೂ ವಂದಿಸುತ್ತೇನೆ.

ಸ್ನೇಹಿತರೆ,

ಒಂದು ವಾರದ ಹಿಂದೆ ಗುಜರಾತ್ ಸರ್ಕಾರ ಹೊಸ ಕೈಗಾರಿಕಾ ನೀತಿ ಅನಾವರಣಗೊಳಿಸಿದೆ, ಆ ನೀತಿಯನ್ನು ಎಲ್ಲರೂ ಮೆಚ್ಚಿದ್ದಾರೆ. ಗುಜರಾತ್ ಅಭಿವೃದ್ಧಿಯನ್ನು ಯಾರೂ ತಡೆಯಲಾಗದಂತಹ ಕೈಗಾರಿಕಾ ನೀತಿ ಜಾರಿಗೆ ತಂದ ಭೂಪೇಂದ್ರ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ. ಹೊಸ ಕೈಗಾರಿಕಾ ನೀತಿಯು ಹೊಸ ಸ್ಟಾರ್ಟಪ್‌ಗಳು ಮತ್ತು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುವ ಅನೇಕ ಅನುಕೂಲಗಳನ್ನು ಕಲ್ಪಿಸಿದೆ. ಇದರಿಂದ ಗುಜರಾತ್‌ನ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗಲಿದೆ. ಈ ಹೊಸ ಕೈಗಾರಿಕಾ ನೀತಿಯ ಲಾಭವನ್ನು ಗುಜರಾತ್‌ನ ಯುವಕರು ಪಡೆಯಬೇಕೆಂದು ನಾನು ಬಯಸುತ್ತೇನೆ, ಅವರ ಕೈ ಹಿಡಿಯಲು ನಾನು ಸಿದ್ಧನಿದ್ದೇನೆ.

ಜಾಮ್‌ನಗರದ ಬಂದರು ಪ್ರದೇಶ ಮತ್ತು ಕರಾವಳಿ ಭಾಗ ಜೀವ ವೈವಿಧ್ಯತೆಯಿಂದ ಕೂಡಿದೆ. ನಾವು ಇಲ್ಲಿ ಬೃಹತ್ ಜೀವವೈವಿಧ್ಯತೆಯನ್ನು ಕಾಣುತ್ತೇವೆ. ಈಗ ಭಾರತವು ‘ಪ್ರಾಜೆಕ್ಟ್ ಡಾಲ್ಫಿನ್’ ಆರಂಭಿಸಿದೆ. ‘ಪ್ರಾಜೆಕ್ಟ್ ಚೀತಾ’ವನ್ನು ದೇಶ ಈಗಾಗಲೇ ಪ್ರಶಂಸಿಸಿದೆ. ಈಗ ನಾವು ಡಾಲ್ಫಿನ್‌ಗಳ ಗಮನ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಜಾಮ್‌ನಗರದಲ್ಲಿ ಸಾಕಷ್ಟು ಡಾಲ್ಫಿನ್‌ಗಳಿವೆ. ಆದ್ದರಿಂದ ನಾವು ಈಗ ಅವುಗಳನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ಜಾಮ್‌ನಗರ, ದ್ವಾರಕಾ, ಬೆಟ್ ದ್ವಾರಕಾ ಮತ್ತು ಈ ಸಂಪೂರ್ಣ ಕರಾವಳಿ ಭಾಗವನ್ನು ಬೃಹತ್ ಪರಿಸರ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು. ಸಹೋದರ ಸಹೋದರಿಯರೇ, ನಾನು ಭೂಪೇಂದ್ರ ಭಾಯಿ ಅವರನ್ನು ವಿನಮ್ರ ಮತ್ತು ನಿರ್ಭೀತ ನಾಯಕ ಎಂದು ಬಣ್ಣಿಸಿದ್ದೇನೆ, ಗುಜರಾತ್ ಈಗಾಗಲೇ ಅದಕ್ಕೆ ಸಾಕ್ಷಿಯಾಗಿದೆ. ಅವರ ನೇತೃತ್ವದಲ್ಲಿ ಅಣೆಕಟ್ಟು ನಿರ್ಮಾಣ ಕೆಲಸವನ್ನು ನೋಡಿದ್ದೇವೆ. ಅದು ಸದ್ದಿಲ್ಲದೆ ತ್ವರಿತವಾಗಿ ಪೂರ್ಣವಾಗಿದೆ ಎಂಬುದು ಅದರಲ್ಲಿ ಭಾಗಿಯಾದವರಿಗೆ ಮಾತ್ರ ಗೊತ್ತು. ಒಬ್ಬ ಪ್ರಾಮಾಣಿಕ ವ್ಯಕ್ತಿ ನಾಯಕತ್ವವನ್ನು ವಹಿಸಿಕೊಂಡಾಗ ಉಳಿದವರೆಲ್ಲರೂ ಅದನ್ನು ಅನುಸರಿಸುತ್ತಾರೆ. ಇದು ಬಲವಾದ ಇಚ್ಛಾಶಕ್ತಿಯ ಒಟ್ಟಾರೆ ಫಲಿತಾಂಶವಾಗಿದೆ. ಅಷ್ಟೇ ಅಲ್ಲ, ಭೂಪೇಂದ್ರ ಭಾಯಿ ಅವರು ಗುಜರಾತ್‌ನ ಸಂಪೂರ್ಣ ಕರಾವಳಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆಯೂ ಇಲ್ಲಿ ಅತ್ಯಂತ ಬಲಿಷ್ಠವಾಗಿದೆ. ಗುಜರಾತ್ ಕಳೆದ 20 ವರ್ಷಗಳಲ್ಲಿ ಶಾಂತಿ ಕಂಡಿದೆ. ಪರಿಣಾಮವಾಗಿ, ಅಭಿವೃದ್ಧಿಯ ಬಾಗಿಲುಗಳು ತೆರೆದಿವೆ. ಏಕತೆಯ ಸಂಕಲ್ಪದೊಂದಿಗೆ ಗುಜರಾತ್ ಎಲ್ಲರ ಸಹಕಾರದೊಂದಿಗೆ ಮುನ್ನಡೆಯುತ್ತಿದೆ. ಹಿಂದೆ ಆಗಾಗ ಗಲಭೆಗಳು ನಡೆಯುತ್ತಿದ್ದವು, ಜಾಮ್‌ನಗರವೂ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಇಂದು ನಾವು ಅದೆಲ್ಲದರಿಂದ ಮುಕ್ತರಾಗಿದ್ದೇವೆ. ಇಂದು ನರೇಂದ್ರ ಮೋದಿ-ಭೂಪೇಂದ್ರರ ಡಬಲ್ ಇಂಜಿನ್ ಸರ್ಕಾರವು ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಪ್ರಚೋದನೆ ಮತ್ತು ಪ್ರೇರಣೆ ನೀಡುತ್ತಿದೆ. ನಾವು ಈ ವೇಗವನ್ನು ಮುಂದೆಯೂ ಕಾಯ್ದುಕೊಳ್ಳಬೇಕಾಗಿದೆ. ಈ ಅಭಿವೃದ್ಧಿ ಯೋಜನೆಗಳು ಜಾಮ್‌ನಗರ ಮತ್ತು ಸೌರಾಷ್ಟ್ರದ ಆಧಾರಸ್ತಂಭಗಳನ್ನು ರೂಪಿಸುತ್ತವೆ. ಯುವಕರು ಮತ್ತು ಹಿರಿಯರ ಜೀವನದಲ್ಲಿ ಶಾಂತಿ, ನೆಮ್ಮದಿ ತರಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ನಾನು ನಂಬುತ್ತೇನೆ.

ಸಹೋದರ ಸಹೋದರಿಯರೇ,

ನಾನು ಜಾಮ್‌ನಗರವನ್ನು ಅಭಿನಂದಿಸುತ್ತೇನೆ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಇಡೀ ರಸ್ತೆದಲ್ಲಿ ತಾಯಂದಿರು ಮತ್ತು ಸಹೋದರಿಯರು ನನ್ನ ಮೇಲೆ ತಮ್ಮ ಆಶೀರ್ವಾದ ಸುರಿಸುತ್ತಿದ್ದರು, ಅವರ ಹಾವಭಾವದಿಂದ ನಾನು ನಿಜಕ್ಕೂ ಪುಳಕಿತನಾಗಿದ್ದೇನೆ. ಈ ಎಲ್ಲಾ ಆಶೀರ್ವಾದಗಳಿಗಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇನೆ, ಚಿರಋಣಿಯಾಗಿದ್ದೇನೆ. ಈಗ ನಿಮ್ಮ ಎರಡೂ ಮುಷ್ಟಿಗಳನ್ನು ಮೇಲಕ್ಕೆ ಎತ್ತಿ, ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಹಕ್ಕು ನಿರಾಕರಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದವಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

ಸ್ನೇಹತರೆ,

*******

(Release ID: 1867175)