ಪ್ರಧಾನ ಮಂತ್ರಿಯವರ ಕಛೇರಿ
ಹೃದಯನಾಥ್ ಮಂಗೇಶ್ಕರ್ ಅವರ ಟ್ವೀಟ್ ಗೆ ಧನ್ಯವಾದ ಅರ್ಪಿಸಿದ ಪ್ರಧಾನಿ
प्रविष्टि तिथि:
29 SEP 2022 9:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ಚೌಕ್ ಉದ್ಘಾಟನೆಯ ಸಂದರ್ಭದಲ್ಲಿ ದಿವಂಗತ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ಮಾಡಿದ ಟ್ವೀಟ್ ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಲತಾ ದೀದಿ ಅವರು ಭಗವಾನ್ ಶ್ರೀ ರಾಮನ ಕಟ್ಟಾ ಭಕ್ತೆಯಾಗಿದ್ದರು ಮತ್ತು ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಅವರ ಹೆಸರಿನಲ್ಲಿ ಒಂದು ಚೌಕ ಇರುವುದು ಸೂಕ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಹೃದಯನಾಥ್ ಮಂಗೇಶ್ಕರ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ.
"ಲತಾ ದೀದಿ ಭಗವಾನ್ ಶ್ರೀ ರಾಮನ ಕಟ್ಟಾ ಭಕ್ತೆಯಾಗಿದ್ದರು ಮತ್ತು ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಅವರ ಹೆಸರಿನಲ್ಲಿ ಒಂದು ಚೌಕ ಇರುವುದು ಸೂಕ್ತವಾಗಿದೆ.”
*****
(रिलीज़ आईडी: 1863630)
आगंतुक पटल : 139
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam