ಪ್ರಧಾನ ಮಂತ್ರಿಯವರ ಕಛೇರಿ
ನಮೋ ಆ್ಯಪ್ ನಲ್ಲಿ 2022ರ ಸೆಪ್ಟೆಂಬರ್ 25ರ ಮನ್ ಕಿ ಬಾತ್' ಆಧಾರಿತ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಜನರಿಗೆ ಪ್ರಧಾನಿ ಮನವಿ
Posted On:
28 SEP 2022 8:53AM by PIB Bengaluru
ನಮೋ ಆ್ಯಪ್ ನಲ್ಲಿ 2022ರ ಸೆಪ್ಟೆಂಬರ್ 25ರ 'ಮನ್ ಕಿ ಬಾತ್' ಆಧಾರಿತ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜನತೆಗೆ ಮನವಿ ಮಾಡಿದ್ದಾರೆ. ಈ ತಿಂಗಳ ಮನ್ ಕಿ ಬಾತ್ ವನ್ಯಜೀವಿಗಳಿಂದ ಪರಿಸರದವರೆಗೆ ಮತ್ತು ಸಂಸ್ಕೃತಿಯಿಂದ ಭಾರತದ ಶ್ರೀಮಂತ ಇತಿಹಾಸದವರೆಗಿನ ವಿಷಯಗಳನ್ನು ಒಳಗೊಂಡಿತ್ತು ಎಂದು ಶ್ರೀ ಮೋದಿ ಹೇಳಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ;
"ಇತ್ತೀಚಿನ #MannKiBaat ಕಾರ್ಯಕ್ರಮದಲ್ಲಿ, ವನ್ಯಜೀವಿಗಳಿಂದ ಪರಿಸರದವರೆಗೆ ಮತ್ತು ಸಂಸ್ಕೃತಿಯಿಂದ ಭಾರತದ ಶ್ರೀಮಂತ ಇತಿಹಾಸದವರೆಗಿನ ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ನಮೋ ಆ್ಯಪ್ ನಲ್ಲಿ ಒಂದು ಆಸಕ್ತಿದಾಯಕ ರಸಪ್ರಶ್ನೆ ಇದೆ, ಅದರಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.” ಎಂದು ಹೇಳಿದ್ದಾರೆ.
*******
(Release ID: 1862916)
Visitor Counter : 170
Read this release in:
Tamil
,
Telugu
,
Assamese
,
Bengali
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Malayalam