ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀಮಂತ್ ಛತ್ರಪತಿ ಶಿವಾಜಿರಾಜೆ ಭೋಸಲೆ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 14 SEP 2022 10:48AM by PIB Bengaluru

ಶ್ರೀಮಂತ್ ಛತ್ರಪತಿ ಶಿವಾಜಿರಾಜೆ ಭೋಸಲೆ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಕ್ರಿಯಾತ್ಮಕ ಮತ್ತು ಬಹುಮುಖಿ ವ್ಯಕ್ತಿತ್ವದವರಾಗಿದ್ದು, ಜನರ ನಡುವೆ ಬಹಳ ವ್ಯಾಪಕವಾಗಿ ಕೆಲಸ ಮಾಡಿದವರು ಎಂದು ಪ್ರಧಾನಿ ಶ್ರೀ ಮೋದಿ ಬಣ್ಣಿಸಿದ್ದಾರೆ.

ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು ಅದರಲ್ಲಿ;

"ಶ್ರೀಮಂತ್ ಛತ್ರಪತಿ ಶಿವಾಜಿರಾಜೆ ಭೋಸಲೆ ಜೀ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಕ್ರಿಯಾತ್ಮಕ ಮತ್ತು ಬಹುಮುಖ ವ್ಯಕ್ತಿತ್ವದವರಾಗಿದ್ದು, ಜನರ ನಡುವೆ ವ್ಯಾಪಕವಾಗಿ ಕೆಲಸ ಮಾಡಿದ್ದರು. ಅವರು ಸತಾರಾದ ಪ್ರಗತಿಗೆ ಬಹಳಷ್ಟು ಕೊಡುಗೆ ನೀಡಿದರು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ." ಎಂದು ಹೇಳಿದ್ದಾರೆ.

 

*****

 


(रिलीज़ आईडी: 1859192) आगंतुक पटल : 198
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam