ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಶ್ರೀ.ಎಂ.ವೆಂಕಯ್ಯನಾಯ್ಡು ಅವರಿಗೆ ಬೀಳ್ಕೊಡುಗೆ ಸಲ್ಲಿಸಿದ ಪ್ರಧಾನಿ 



“ಈ ವರ್ಷದ ಆಗಸ್ಟ್ 15ರ ವೇಳೆಗೆ, ಸ್ವಾತಂತ್ರ್ಯಾನಂತರ ಜನಿಸಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸ್ಪೀಕರ್ ಮತ್ತು ಪ್ರಧಾನಮಂತ್ರಿ ಅವರಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಯೊಬ್ಬರೂ ಅತ್ಯಂತ ಸರಳ ಹಿನ್ನೆಲೆಯುಳ್ಳವರು’’ 

“ನಮ್ಮ ಉಪ ರಾಷ್ಟ್ರಪತಿಯಾಗಿ ನೀವು ಸಾಕಷ್ಟು ಸಮಯವನ್ನು ಯುವಜನರ ಕಲ್ಯಾಣಕ್ಕೆ ಸಮರ್ಪಿಸಿದ್ದೀರಿ’’  


“ನಿಮ್ಮ ಪ್ರತಿಯೊಂದು ಶಬ್ದವನ್ನು ಕೇಳಲಾಗುತ್ತದೆ, ಆದ್ಯತೆ ನೀಡಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ ಹಾಗೂ ಎಂದಿಗೂ ವಿರೋಧಿಸುವುದಿಲ್ಲ’’ 


ಶ್ರೀ ಎಂ.ವೆಂಕಯ್ಯನಾಯ್ಡು ಜಿ ಅವರ ಬಗೆಗಿನ ಒಂದು ವಾಕ್ಯವೆಂದರೆ ಅದು ನಿಮ್ಮ ಬುದ್ದಿ ಚಾತುರ್ಯ’ 

“ನಮಗೆ ದೇಶದ ಬಗ್ಗೆ ಭಾವನೆ ಇದ್ದರೆ, ನಮ್ಮ ಅಭಿಪ್ರಾಯಗಳನ್ನು ಮಂಡಿಸುವ ಕಲೆ, ಭಾಷಾ ವೈವಿಧ್ಯತೆಯಲ್ಲಿ ನಂಬಿಕೆ ಇದ್ದರೆ, ಭಾಷೆ ಮತ್ತು ಪ್ರದೇಶವು ಎಂದಿಗೂ ಮನಗೆ ಅಡ್ಡಿಯಾಗುವುದಿಲ್ಲ ಮತ್ತು ನೀವು ಅದನ್ನು ನಿರೂಪಿಸಿದ್ದೀರಿ’’ 

“ವೆಂಕಯ್ಯ ಜಿ ಅವರ ಬಗೆಗಿನ ಮೆಚ್ಚುಗೆಯ ವಿಷಯವೆಂದರೆ, ಭಾರತೀಯ ಭಾಷೆಗಳ ಬಗ್ಗೆ ಅವರಿಗಿರುವ ಒಲವು’’ 

“ನೀವು ಹಲವು ನಿರ್ಧಾರಗಳನ್ನು ಕೈಗೊಂಡಿದ್ದೀರಿ, ಅವು ಮೇಲ್ಮನೆಯ ಘನತೆ ಹೆಚ್ಚಳದ ವೇಳೆ ನೆನಪಾಗುತ್ತವೆ’’  

“ನಿಮ್ಮ ಮಾನದಂಡಗಳಲ್ಲಿ ಪ್ರಜಾಪ್ರಭುತ್ವದ ಪ್ರಬುದ್ಧತೆಯನ್ನು ನಾನು ಕಾಣುತ್ತೇನೆ’’

Posted On: 08 AUG 2022 1:08PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿಂದು ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದರು. ಮೇಲ್ಮನೆಯ ಪದನಿಮಿತ್ತ ಅಧ್ಯಕ್ಷರಾಗಿರುವ ಉಪರಾಷ್ಟ್ರಪತಿಯವರಿಗೆ ಪ್ರಧಾನಮಂತ್ರಿ ಅವರು ಗೌರವ ಸಲ್ಲಿಸಿದರು.
ಶ್ರೀ ನಾಯ್ಡು ಅವರ ಬುದ್ಧಿವಂತಿಕೆ ಮತ್ತು ಹಾಸ್ಯ ಚಟಾಕಿಯಿಂದ ಗುರುತಿಸಲ್ಪಟ್ಟ ಅನೇಕ ಕ್ಷಣಗಳನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ನವ ಭಾರತದಲ್ಲಿ ನಾಯಕತ್ವದ ಸಣ್ಣ ಬಣ್ಣ ಬದಲಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, “ನಾವು ಈ ವರ್ಷದ ಆಗಸ್ಟ್ 15 ಆಚರಿಸುವ ವೇಳೆಗೆ ಸ್ವಾತಂತ್ರ್ಯ ನಂತರ ಜನಿಸಿದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್ ಮತ್ತು ಪ್ರಧಾನಮಂತ್ರಿ ಸ್ವಾತಂತ್ರ್ಯ ಜನಸಿದವರಾಗಿರುತ್ತಾರೆ, ಅದೂ ಸಹ, ಪ್ರತಿಯೊಬ್ಬರೂ ಅತ್ಯಂತ ಸರಳ ಹಿನ್ನೆಲೆಯುಳ್ಳವರು.  ಇದು ದೊಡ್ಡ ಸಾಂಕೇತಿಕ ಮೌಲ್ಯವನ್ನು ಹೊಂದಿದೆ ಮತ್ತು ಇದು ಹೊಸ ಯುಗದ ಒಂದು ನೋಟವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಅವರು ನಿರ್ವಹಿಸಿದ ಎಲ್ಲಾ ಪಾತ್ರಗಳಲ್ಲಿ ದೇಶದ ಯುವಜನತೆಗೆ ಉಪರಾಷ್ಟ್ರಪತಿ ನಿರಂತರ ಪ್ರೋತ್ಸಾಹ ನೀಡಿದರು ಎಂದು ಪ್ರಧಾನಿ ನೆನಪಿಸಿಕೊಂಡರು. ಅವರು ಯಾವಾಗಲೂ ಸದನದಲ್ಲಿ ಯುವ ಸದಸ್ಯರಿಗೆ ಪ್ರೋತ್ಸಾಹ, ಬಡ್ತಿ ನೀಡುತ್ತಿದ್ದರು. “ನಮ್ಮ ಉಪಾ ರಾಷ್ಟ್ರಪತಿಯಾಗಿ, ನೀವು ಯುವ ಕಲ್ಯಾಣಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದೀರಿ. ನಿಮ್ಮ ಬಹಳಷ್ಟು ಕಾರ್ಯಕ್ರಮಗಳು ಯುವ ಶಕ್ತಿಯ ಮೇಲೆ ಕೇಂದ್ರೀಕೃತವಾಗಿವೆ” ಎಂದು ಪ್ರಧಾನಮಂತ್ರಿ ಹೇಳಿದರು. ಉಪರಾಷ್ಟ್ರಪತಿ ಶೇ. 25ರಷ್ಟು ಭಾಷಣಗಳು ಸದನದ ಹೊರಗೆ, ಅದು ಯುವ ಭಾರತವನ್ನು ಉದ್ದೇಶಿಸಿ ಮಾಡಿದ್ದಾಗಿವೆ ಎಂದು ಪ್ರಧಾನಿ ಉಲ್ಲೇಖಿಸಿದರು.
ನಾನಾ ಹುದ್ದೆಗಳಲ್ಲಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರೊಂದಿಗಿನ ನಿಕಟ ಬಾಂಧವ್ಯವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಪಕ್ಷದ ಕಾರ್ಯಕರ್ತರಾಗಿ, ಒರ್ವ ಶಾಸಕರಾಗಿ, ಸಂಸದರಾಗಿ ಕಾರ್ಯಚಟುವಟಿಕೆ ಮಟ್ಟ, ಬಿಜೆಪಿ ಅಧ್ಯಕ್ಷರಾಗಿ ಸಂಘಟನಾ ಕೌಶಲ್ಯ, ಸೈದ್ಧಾಂತಿಕ ಬದ್ಧತೆ, ಉಪರಾಷ್ಟ್ರಪತಿಯಾಗಿ ಮತ್ತು ಮೇಲ್ಮನೆಯ ಅಧ್ಯಕ್ಷರಾಗಿ ಅವರು ತಮ್ಮ ತತ್ವಗಳಿಗೆ ಬದ್ಧರಾಗಿದ್ದರು, ಕಠಿಣ ಪರಿಶ್ರಮ ಮತ್ತು ರಾಜತಾಂತ್ರಿಕತೆ ಮತ್ತು ಅವರ ಸಮರ್ಪಣೆ ಮತ್ತು ಘನತೆಯನ್ನು ಪ್ರಧಾನಿ  ಶ್ಲಾಘಿಸಿದರು. ನಾನು ಶ್ರೀ ಎಂ. ವೆಂಕಯ್ಯ ನಾಯ್ಡು ಜಿ ಅವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿದ್ದೇನೆ. ಅವರು ನಾನಾ ಜವಾಬ್ದಾರಿಗಳನ್ನು ವಹಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣಾ ಭಾವದಿಂದ ನಿರ್ವಹಿಸಿದರು” ಎಂದು ಪ್ರಧಾನಮಂತ್ರಿ ಹೇಳಿದರು. ಸಾರ್ವಜನಿಕ ಜೀವನದಲ್ಲಿ ಜನರು ಶ್ರೀ ಎಂ. ವೆಂಕಯ್ಯ ನಾಯ್ಡು ಅವರಿಂದ ಬಹಳಷ್ಟು ಕಲಿಯಬಹುದು ಎಂದು ಪ್ರಧಾನಿ ಹೇಳಿದರು.
ಪ್ರಧಾನಮಂತ್ರಿಯವರು ಉಪರಾಷ್ಟ್ರಪತಿಯವರ ಹಾಸ್ಯ ಚಟಾಕಿ ಮತ್ತು ಪದಬಳಕೆಯ ಶಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. “ನಿಮ್ಮ ಪ್ರತಿಯೊಂದು ಪದವನ್ನು ಕೇಳಲಾಗುತ್ತದೆ, ಆದ್ಯತೆ ನೀಡಲಾಗುತ್ತದೆ, ಮತ್ತು ಗೌರವಾನ್ವಿಸಲಾಗುತ್ತದೆ... ಮತ್ತು ಎಂದಿಗೂ ವಿರೋಧಿಸುವುದಿಲ್ಲ" ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಮಾತು ಮುಂದುವರಿಸಿ “ಶ್ರೀ ಎಂ.ವೆಂಕಯ್ಯ ನಾಯ್ಡು ಜಿ ಯವರ ಹಾಸ್ಯಭರಿತ ಮಾತುಗಳು ಪ್ರಸಿದ್ಧವಾಗಿವೆ. ಅವರು ಪ್ರಾಸಬದ್ಧ ಮಾತು, ಭಾಷೆಗಳ ಮೇಲೆ ಅವರಿಗಿರುವ ಹಿಡಿತ ಯಾವಾಗಲೂ ಅದ್ಭುತವಾಗಿರುತ್ತದೆ’’ ಎಂದರು. 
ದಕ್ಷಿಣ ಭಾರತದಲ್ಲಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ವಿನಮ್ರತೆಯಿಂದ  ರಾಜಕೀಯ ವೃತ್ತಿಜೀವನ ಆರಂಭಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಅವರು ಆಯ್ಕೆ ಮಾಡಿದ ಸಿದ್ಧಾಂತಕ್ಕೆ ತಕ್ಷಣದ ಭವಿಷ್ಯವಿರಲಿಲ್ಲ, ರಾಜಕೀಯ ಕಾರ್ಯಕರ್ತನಿಂದ ತಮ್ಮ ಪಕ್ಷದ ಅಧ್ಯಕ್ಷರವರೆಗಿನ ಉಪರಾಷ್ಟ್ರಪತಿಯ ಪಯಣವು ಅವರ ಸಿದ್ಧಾಂತ ಮತ್ತು ದೃಢತೆಯಲ್ಲಿ ಅವರ ಅದಮ್ಯ ನಿಶ್ಚಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
“ನಾವು ನಮ್ಮ ದೇಶದ ಬಗ್ಗೆ ಭಾವನೆಗಳನ್ನು ಹೊಂದಿದ್ದರೆ, ನಮ್ಮಅಭಿಪ್ರಾಯಗಳನ್ನು ಮುಂದಿಡುವ ಕಲೆ, ಭಾಷಾ ವೈವಿಧ್ಯತೆಯಲ್ಲಿ ನಂಬಿಕೆ ಹೊಂದಿದ್ದರೆ, ಭಾಷೆ ಮತ್ತು ಪ್ರದೇಶವು ನಮಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಮತ್ತು ನೀವು ಅದನ್ನು ಸಾಬೀತುಪಡಿಸಿದ್ದೀರಿ’’ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಅವರು ಉಪರಾಷ್ಟ್ರಪತಿಯವರ ಮಾತೃಭಾಷೆಯ ಮೇಲಿನ ಪ್ರೀತಿಯನ್ನೂ ಪ್ರಸ್ತಾಪಿಸಿದರು. “ವೆಂಕಯ್ಯ ಜಿ ಅವರಲ್ಲಿ ಮೆಚ್ಚತಕ್ಕ ವಿಷಯವೆಂದರೆ ಭಾರತೀಯ ಭಾಷೆಗಳ ಬಗೆಗಿನ ಅವರ ಒಲವು, ಅವರು ಸದನದ ಅಧ್ಯಕ್ಷರಾಗಿ ಹೇಗೆ ಕಲಾಪ ನಡೆಸುತ್ತಿದ್ದರು ಎಂಬುದರಲ್ಲಿ ಅದು ಪ್ರತಿಫಲಿಸುತ್ತದೆ. ಅವರು ರಾಜ್ಯಸಭೆಯ ಕಲಾಪದ ಫಲವನ್ನು ಹೆಚ್ಚಿಸಲು ಕೊಡುಗೆ ನೀಡಿದರು ಎಂದರು. 
ಉಪರಾಷ್ಟ್ರಪತಿಗಳು ರಚಿಸಿದ ವ್ಯವಸ್ಥೆಗಳು, ಅವರ ನಾಯಕತ್ವವು ಸದನದ ಕಲಾಪ ಫಲಪ್ರದತೆಯನ್ನು ಹೊಸ ಎತ್ತರವನ್ನು ಕೊಂಡೊಯ್ದಿತು  ಎಂದು ಪ್ರಧಾನಿ ಉಲ್ಲೇಖಿಸಿದರು. ಉಪರಾಷ್ಟ್ರಪತಿಗಳ ನಾಯಕತ್ವದ ವರ್ಷಗಳಲ್ಲಿ, ಸದನದ ಉತ್ಪಾದಕತೆ ಶೇ.70 ರಷ್ಟು ಹೆಚ್ಚಾಯಿತು, ಸದಸ್ಯರ ಹಾಜರಾತಿ ಹೆಚ್ಚಳವಾಯಿತು ಮತ್ತು ದಾಖಲೆಯ 177 ಮಸೂದೆಗಳನ್ನು ಅಂಗೀಕರಿಸಲಾಯಿತು ಅಥವಾ ಚರ್ಚಿಸಲಾಯಿತು. ಎಂದರು. “ನೀವು ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದೀರಿ, ಅದು ಮೇಲ್ಮನೆಯ ಘನತೆಯ ಪ್ರಯಣದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು. 
ಉಪರಾಷ್ಟ್ರಪತಿ ಸದನವನ್ನು ತಮ್ಮ ವಾಕ್ ಚಾತುರ್ಯದಿಂದ, ಬುದ್ಧಿವಂತಿಕೆಯಿಂದ ಮತ್ತು ದೃಢವಾಗಿ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು ಮತ್ತು ಒಂದು ಹಂತವನ್ನು ಮೀರಿ, ಸದನದಲ್ಲಿ ಅಡ್ಡಿಪಡಿಸಿದರೆ ಸದನ ನ್ಯಾಯಾಂಗ ನಿಂದನಾ ಸದನವಾಗಿ ಪರಿವರ್ತನೆಯಾಗುತ್ತದೆ ಎಂಬ ದೃಢ ವಿಶ್ವಾಸವನ್ನು ಮೂಡಿಸಿದ್ದರು ಎಂದು ಅವರನ್ನು ಶ್ಲಾಘಿಸಿದರು. “ನಿಮ್ಮ ಕಲಾಪದ ಮಾನದಂಡಗಳಲ್ಲಿ ಪ್ರಜಾಪ್ರಭುತ್ವದ ಪರಿಪಕ್ವತೆಯನ್ನು ನಾನು ನೋಡುತ್ತೇನೆ’’ ಎಂದು ಪ್ರಧಾನಿ ಹೇಳಿದರು. ಕಷ್ಟಕರ ಸಂದರ್ಭಗಳಲ್ಲಿಯೂ ಸದನವನ್ನು ನಡೆಸಿಕೊಂಡು ಬಂದ ಬಗೆ, ಹೊಂದಾಣಿಕೆ, ಸಂವಹನ ಮತ್ತು ಸಮನ್ವಯತೆಯನ್ನು ಅವರು ಶ್ಲಾಘಿಸಿದರು. 
‘ಸರ್ಕಾರವು ಪ್ರಸ್ತಾಪಿಸಲಿ, ಪ್ರತಿಪಕ್ಷಗಳು ವಿರೋಧಿಸಲಿ ಮತ್ತು ಸದನ ವಿಲೇವಾರಿ ಮಾಡಲಿ’ ಎಂಬ  ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಈ ಸದನವು ಇತರ ಸದನದ ಪ್ರಸ್ತಾವನೆಗಳನ್ನು ಸ್ವೀಕರಿಸುವ, ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ಹೊಂದಿದೆ ಆದರೆ ನಮ್ಮ ಪ್ರಜಾಪ್ರಭುತ್ವವು ಇತರ ಸದನದಿಂದ ಸ್ವೀಕರಿಸಿದ ಪ್ರಸ್ತಾಪಗಳಿಗೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು. 
ಸದನ ಮತ್ತು ದೇಶಕ್ಕೆ ನೀಡಿದ ಮಾರ್ಗದರ್ಶನ ಮತ್ತು ಕೊಡುಗೆ ನೀಡಿರುವುದಕ್ಕಾಗಿ  ಪ್ರಧಾನಮಂತ್ರಿ ಅವರು, ಉಪರಾಷ್ಟ್ರಪತಿಗಳಿಗೆ ಧನ್ಯವಾದ ಸಮರ್ಪಿಸಿದರು. 

 

 

***********



(Release ID: 1852457) Visitor Counter : 136