ಪ್ರಧಾನ ಮಂತ್ರಿಯವರ ಕಛೇರಿ
ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ ಆಂದೋಲನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದರು.
ರಾಷ್ಟ್ರ ಧ್ವಜದೊಂದಿಗಿನ ಫೋಟೋವನ್ನು ಹಂಚಿಕೊಳ್ಳಲು ಅವರು ಸಾರ್ವಜನಿಕರನ್ನು ಕೋರಿದ್ದಾರೆ.
ಪ್ರಕಟಣಾ ದಿನಾಂಕ:
13 AUG 2022 8:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗ (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಆಂದೋಲನಕ್ಕೆ ದೊರೆತ ಅದ್ಭುತ ಪ್ರತಿಕ್ರಿಯೆಯ ಬಗ್ಗೆ ತಮ್ಮ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಜೀವನದ ವಿವಿಧ ಸ್ತರದ ಜನರಿಂದ ಅಭೂತಪೂರ್ವ ಭಾಗವಹಿಸುವಿಕೆಯನ್ನು ನಾವು ನೋಡುತ್ತಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ರಾಷ್ಟ್ರ ಧ್ವಜದೊಂದಿಗಿನ ಫೋಟೋವನ್ನು hargartiranga.com ನಲ್ಲಿ ಹಂಚಿಕೊಳ್ಳುವಂತೆ ಶ್ರೀ ಮೋದಿ ಅವರು ನಾಗರಿಕರನ್ನು ಕೋರಿದರು
ದೇಶದ ವಿವಿಧ ಭಾಗಗಳ ಹರ್ ಘರ್ ತಿರಂಗ (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಆಂದೋಲನದ ವಿಸ್ಮಯವಾದ ದೃಶ್ಯ ಮತ್ತು ಚಿತ್ರಗಳನ್ನು ಪ್ರಧಾನಮಂತ್ರಿಯವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
*********
(ಪ್ರಕಟಣೆ ಐ.ಡಿ.: 1851860)
ವಿಸಿಟರ್ ಕೌಂಟರ್ : 146
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam