ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೇಸ್ ವಾಕಿಂಗ್ ಚಾಂಪಿಯನ್ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಂದ ಅಭಿನಂದನೆ

प्रविष्टि तिथि: 06 AUG 2022 6:18PM by PIB Bengaluru

ಬರ್ಮಿಂಗ್ಹ್ಯಾಮ್ 2022 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪ್ರತಿಷ್ಠಿತ ಬೆಳ್ಳಿ ಪದಕ ಗೆದ್ದ ರೇಸ್ ವಾಕಿಂಗ್ ಚಾಂಪಿಯನ್ ಪ್ರಿಯಾಂಕಾ ಗೋಸ್ವಾಮಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.

 

ಈ ಬಗ್ಗೆ  ಪ್ರಧಾನ ಮಂತ್ರಿ ಅವರು  ಟ್ವೀಟ್ ಮಾಡಿದ್ದಾರೆ.ಅದರಲ್ಲಿ :

"ನಮ್ಮ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್ ಪ್ರಿಯಾಂಕಾ ಗೋಸ್ವಾಮಿ ಅವರಿಗೆ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಈ ಪದಕದ ಮೂಲಕ, ಅವರು ಭಾರತದ ಅನೇಕ ಯುವಜನತೆಗೆ ಈ ಕ್ರೀಡೆಯಲ್ಲಿ  ತೊಡಗಿಕೊಳ್ಳಲು  ಪ್ರೇರೇಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಶಸ್ಸಿನ ಹೊಸ ಎತ್ತರವನ್ನು ಏರುತ್ತಲೇ ಇರಲಿ.  #Cheer4India.

ಎಂದು ಹಾರೈಸಿದ್ದಾರೆ.

 


 

*********************


(रिलीज़ आईडी: 1850942) आगंतुक पटल : 142
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam