ಪ್ರಧಾನ ಮಂತ್ರಿಯವರ ಕಛೇರಿ
ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್ ಸಬ್ಲೆ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
ಪ್ರಕಟಣಾ ದಿನಾಂಕ:
06 AUG 2022 6:20PM by PIB Bengaluru
ಬರ್ಮಿಂಗ್ಹ್ಯಾಮ್ 2022 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್ ಸಬ್ಲೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ. ಶ್ರೀ ಮೋದಿ ಅವರು ಸಬ್ಲೆ ಜೊತೆಗಿನ ತಮ್ಮ ಇತ್ತೀಚಿನ ಸಂವಾದವನ್ನು ಸಹ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಸೇನೆಯೊಂದಿಗೆ ಅವಿನಾಶ್ ಸಬ್ಲೆ ಅವರ ಸಂಬಂಧದ ಬಗ್ಗೆ ಮಾತನಾಡಿದ್ದರು.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.ಅದರಲ್ಲಿ:
"ಅವಿನಾಶ್ ಸಬ್ಲೆ ಒಬ್ಬ ಅಸಾಧಾರಣ ಯುವಕ. ಅವರು ಪುರುಷರ 30 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವುದು ನನಗೆ ಸಂತೋಷವಾಗಿದೆ. ಸೇನೆಯೊಂದಿಗಿನ ತಮ್ಮ ಒಡನಾಟದ ಬಗ್ಗೆ ಮತ್ತು ಅವರು ಅನೇಕ ಅಡೆತಡೆಗಳನ್ನು ಹೇಗೆ ಜಯಿಸಿದರು ಎಂಬುದರ ಬಗ್ಗೆ ಸಂವಾದಿಸಿದ ನಮ್ಮ ಇತ್ತೀಚಿನ ಸಂವಾದವನ್ನು ಹಂಚಿಕೊಂಡಿರುವೆ. ಅವರ ಜೀವನ ಪ್ರಯಾಣವು ತುಂಬಾ ಪ್ರೇರಣಾದಾಯಕವಾಗಿದೆ" ಎಂದು ಹೇಳಿದ್ದಾರೆ.
***************
(ಪ್ರಕಟಣೆ ಐ.ಡಿ.: 1850936)
ವಿಸಿಟರ್ ಕೌಂಟರ್ : 144
ಪ್ರಕಟಣೆಯನ್ನು ಇದರಲ್ಲಿ ಓದಿ:
Telugu
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam