ಪ್ರಧಾನ ಮಂತ್ರಿಯವರ ಕಛೇರಿ

ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಬಿ ತಂಡ (ಪುರುಷರು) ಮತ್ತು ಭಾರತ ಎ ತಂಡ (ಮಹಿಳಾ) ವನ್ನು  ಅಭಿನಂದಿಸಿದ ಪ್ರಧಾನಮಂತ್ರಿ


44ನೇ ಚೆಸ್ ಒಲಿಂಪಿಯಾಡ್ ಆತಿಥ್ಯ ವಹಿಸಿದ್ದಕ್ಕಾಗಿ ತಮಿಳುನಾಡು ಜನತೆ ಮತ್ತು ತಮಿಳುನಾಡು ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 10 AUG 2022 8:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ 'ಬಿ' ತಂಡ (ಪುರುಷರು) ಮತ್ತು ಭಾರತ 'ಎ' ತಂಡ (ಮಹಿಳಾ) ವನ್ನು ಅಭಿನಂದಿಸಿದ್ದಾರೆ. 44ನೇ ಚೆಸ್ ಒಲಿಂಪಿಯಾಡ್ ಆತಿಥ್ಯ ವಹಿಸಿ ವಿಶ್ವವನ್ನು ಸ್ವಾಗತಿಸಿ, ನಮ್ಮ ಅತ್ಯುತ್ತಮ ಸಂಸ್ಕೃತಿ ಪ್ರದರ್ಶಿಸಿ ಆತಿಥ್ಯ ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ತಮಿಳುನಾಡು ಜನರು ಮತ್ತು ತಮಿಳುನಾಡು ಸರ್ಕಾರವನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು;
“ಚೆನ್ನೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 44ನೇ ಚೆಸ್ ಒಲಿಂಪಿಯಾಡ್ ಭಾರತೀಯ ತಂಡದ ಪ್ರೋತ್ಸಾಹದಾಯಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕಂಚಿನ ಪದಕ ಗೆದ್ದ ಭಾರತ 'ಬಿ' ತಂಡ (ಪುರುಷರು) ಮತ್ತು ಭಾರತ 'ಎ' ತಂಡ (ಮಹಿಳಾ) ವನ್ನು ನಾನು ಅಭಿನಂದಿಸುತ್ತೇನೆ. ಇದು ಭಾರತದಲ್ಲಿ ಚೆಸ್ ನ ಭವಿಷ್ಯಕ್ಕೆ ಶುಭಸೂಚಕವಾಗಿದೆ" ಎಂದು ತಿಳಿಸಿದ್ದಾರೆ.
ಕಂಚಿನ ಪದಕಗಳನ್ನು ಗೆದ್ದ ನಮ್ಮ ತಂಡದ ಗುಕೇಶ್ ಡಿ, ನಿಹಾಲ್ ಸರಿನ್, ಅರ್ಜುನ್ ಎರಿಗೈಸಿ, ಪ್ರಜ್ಞಾನಂದ, ವೈಶಾಲಿ, ತಾನಿಯಾ ಸಚ್ದೇವ್ ಮತ್ತು ದಿವ್ಯಾ ದೇಶಮುಖ್ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಆಟಗಾರರು ಗಮನಾರ್ಹ ಧೈರ್ಯ ಮತ್ತು ದೃಢತೆಯನ್ನು ತೋರಿಸಿದ್ದಾರೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು" 
"44ನೇ ಚೆಸ್ ಒಲಿಂಪಿಯಾಡ್ ನಲ್ಲಿ ತಮಿಳುನಾಡು ಜನತೆ ಮತ್ತು ಸರ್ಕಾರ ಅತ್ಯುತ್ತಮ ಆತಿಥ್ಯ ವಹಿಸಿತ್ತು. ಜಗತ್ತನ್ನು ಸ್ವಾಗತಿಸಿದ್ದಕ್ಕಾಗಿ ಮತ್ತು ನಮ್ಮ ಅತ್ಯುತ್ತಮ ಸಂಸ್ಕೃತಿ ಮತ್ತು ಆತಿಥ್ಯವನ್ನು ನೀಡಿದ್ದಕ್ಕಾಗಿ ನಾನು ಅವರನ್ನು ಶ್ಲಾಘಿಸಲು ಬಯಸುತ್ತೇನೆ..” ಎಂದು ತಿಳಿಸಿದ್ದಾರೆ.

 

 

***



(Release ID: 1850809) Visitor Counter : 110