ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಟ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಬಗ್ಗೆ ಹೆಮ್ಮೆಯಾಗುತ್ತಿದೆ: ಪ್ರಧಾನಮಂತ್ರಿ

प्रविष्टि तिथि: 08 AUG 2022 8:10AM by PIB Bengaluru

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿ.ಡಬ್ಲ್ಯೂ.ಜಿ 2022 ನ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು,

" ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಬಗ್ಗೆ ಹೆಮ್ಮೆಯಾಗುತ್ತಿದೆ. ಸಿ.ಡಬ್ಲ್ಯೂ.ಜಿಗೆ ತೆರಳುವ ಮುನ್ನ ಟ್ರೀಸಾ ಅವರು ಗಾಯತ್ರಿ ಅವರೊಂದಿಗೆ ಹೊಂದಿರುವ ಸ್ನೇಹದ ಬಗ್ಗೆ ತಮಗೆ ತಿಳಿಸಿದ್ದರು. ಆದರೆ  ಗೆದ್ದರೆ ಹೇಗೆ ಸಂಭ್ರಮಿಸಬೇಕು ಎಂಬ ಬಗ್ಗೆ ಆಕೆಗೆ ಖಚಿತತೆ ಇರಲಿಲ್ಲ. ಈಗ ತಮ್ಮ ಯೋಜನೆಗಳನ್ನು ಅವರು ರೂಪಿಸಿರಬಹುದು” ಎಂದು ಹೇಳಿದ್ದಾರೆ.   
 

********


(रिलीज़ आईडी: 1850481) आगंतुक पटल : 159
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam