ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಾಲಯೋಗಿ ಸಭಾಂಗಣದಲ್ಲಿನಡೆದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


‘‘ವೆಂಕಯ್ಯನಾಯ್ಡು ಅವರ  ಸದಾ ಕ್ರೀಯಾಶೀಲರಾಗಿರುವ ಮತ್ತು ತೊಡಗಿಸಿಕೊಂಡಿರುವ ಗುಣವು ಅವರನ್ನು ಸಾರ್ವಜನಿಕ ಜೀವನದೊಂದಿಗೆ ದೀರ್ಘಕಾಲದವರೆಗೆ ಸಂಪರ್ಕದಲ್ಲಿರಿಸುತ್ತದೆ’’

‘‘ಎಲ್ಲಾ ಸಂಸದರಿಂದ ಅವರು ಹೊಂದಿರುವ ನಿರೀಕ್ಷೆಗಳನ್ನು ಪೂರೈಸಲು ನಾವು ಯಾವಾಗಲೂ ಪ್ರಯತ್ನಿಸಬೇಕು’’

‘ಭಾಶಿನಿ’ ಮತ್ತು ಸಂಸದೀಯ ಚರ್ಚೆಗಳಿಂದ ಹೊರಹೊಮ್ಮುವ ಹೊಸ ಪದಗಳ ವಾರ್ಷಿಕ ಸಂಗ್ರಹದಂತಹ ಉಪಕ್ರಮಗಳು ವೆಂಕಯ್ಯನಾಯ್ಡು ಅವರ ಮಾತೃಭಾಷೆಯ ಮೇಲಿನ ಪ್ರೀತಿಯ ಪರಂಪರೆಯನ್ನು ಮುಂದುವರಿಸುತ್ತವೆ.

Posted On: 08 AUG 2022 8:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಲ್ಲಿನ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಶ್ರೀ ವೆಂಕಯ್ಯನಾಯ್ಡು ಅವರು ಯಾವಾಗಲೂ ಕ್ರಿಯಾಶೀಲರಾಗಿ ಮತ್ತು ತೊಡಗಿಸಿಕೊಂಡಿರುವ ಗುಣದ ಬಗ್ಗೆ ಬೆಳಕು ಚೆಲ್ಲಿದರು, ಈ ಗುಣವು ಅವರನ್ನು ಯಾವಾಗಲೂ ಸಾರ್ವಜನಿಕ ಜೀವನದ ಚಟುವಟಿಕೆಗಳೊಂದಿಗೆ ಸಂಪರ್ಕದಲ್ಲಿರಿಸುತ್ತದೆ ಎಂದರು. ಶ್ರೀ ವೆಂಕಯ್ಯನಾಯ್ಡು ಅವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಶ್ರೀ ನರೇಂದ್ರ ಮೋದಿ ಅವರು, ವಾಜಪೇಯಿ ಸರ್ಕಾರದಲ್ಲಿ ತಮ್ಮನ್ನು ಸಚಿವರನ್ನಾಗಿ ಆಯ್ಕೆ ಮಾಡಿದಾಗ ಶ್ರೀ ವೆಂಕಯ್ಯ ನಾಯ್ಡು ಅವರು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದ್ದನ್ನು ಸ್ಮರಿಸಿದರು. ಜತೆಗೆ ಅವರು ಭಿನ್ನವಾಗಿ ಸೇವೆ ಸಲ್ಲಿಸಿದ ಒಂದು ಖಾತೆ ಇದಾಗಿತ್ತು. ಶ್ರೀ ವೆಂಕಯ್ಯ ನಾಯ್ಡು ಅವರು, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಎರಡೂ ಖಾತೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಉಪರಾಷ್ಟ್ರಪತಿಯವರು ರಾಜ್ಯಸಭೆಯ ಅಧ್ಯಕ್ಷ  ಮತ್ತು ಉಪರಾಷ್ಟ್ರಪತಿಯಾದ ಮೊದಲ ಸದಸ್ಯ ಎಂಬ ಅಪರೂಪದ ಗೌರವವನ್ನೂ ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅನುಭವವು ಸದನವನ್ನು ಅತ್ಯಂತ ಸುಲಭವಾಗಿ ಮತ್ತು ಸುಲಭವಾಗಿ ನಡೆಸಲು ಸಹಾಯ ಮಾಡಿತು ಎಂದು ಪ್ರಧಾನಮಂತ್ರಿ ಅವರು ನುಡಿದರು.

ಸದನ, ಸದಸ್ಯರು ಮತ್ತು ಸಮಿತಿಗಳ ಸಾಮರ್ಥ್ಯ‌ವನ್ನು ಸಶಕ್ತಗೊಳಿಸುವ ಮತ್ತು ಹೆಚ್ಚಿಸುವ ಶ್ರೀ ವೆಂಕಯ್ಯ ನಾಯ್ಡು ಅವರ ಅನ್ವೇಷಣೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಎಲ್ಲಾ ಸಂಸದರಿಂದ ಅವರು ಹೊಂದಿರುವ ನಿರೀಕ್ಷೆಗಳನ್ನು ಪೂರೈಸಲು ನಾವು ಸದಾ ಪ್ರಯತ್ನಿಸುವುದು ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು.

ಶ್ರೀ ವೆಂಕಯ್ಯ ನಾಯ್ಡು ಅವರ ಸಮಯ ನಿರ್ವಹಣೆಯ ಶಿಸ್ತನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಕೊರೊನಾ ನಿರ್ಬಂಧಗಳ ಸಮಯದಲ್ಲಿ, ಉಪರಾಷ್ಟ್ರಪತಿಗಳು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿದೂರವಾಣಿ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುತ್ತಿರುವ ‘ಟೆಲಿ-ಯಾತ್ರಾ’ಗಳನ್ನು ಹೇಗೆ ಮಾಡಿದರು ಎಂಬುದನ್ನು ಸ್ಮರಿಸಿದರು. ಇದು ಕಷ್ಟದ ಸಮಯದಲ್ಲಿಸಾಂತ್ವನ ಮತ್ತು ಪ್ರೋತ್ಸಾಹವನ್ನು ನೀಡಿತು. ಅಂತೆಯೇ ಅವರು ಸಾಂಕ್ರಾಮಿಕ ರೋಗದ ಸಮಯದಲ್ಲಿಎಲ್ಲಾ ಸಂಸದರೊಂದಿಗೆ ಸಂಪರ್ಕದಲ್ಲಿದ್ದರು. ಬಿಹಾರ್‌ಗೆ ಭೇಟಿ ನೀಡಿದಾಗ, ಶ್ರೀ ವೆಂಕಯ್ಯ ನಾಯ್ಡು ಅವರ ಹೆಲಿಕಾಪ್ಟರ್‌ಅನ್ನು ಬಲವಂತವಾಗಿ ಲ್ಯಾಂಡ್‌ ಮಾಡಬೇಕಾಯಿತು ಮತ್ತು ಒಬ್ಬ ರೈತ ಅವರಿಗೆ ಸಹಾಯ ಮಾಡಿದ ಘಟನೆಯನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು. ಶ್ರೀ ವೆಂಕಯ್ಯ ನಾಯ್ಡು ಅವರು ಇಂದಿನವರೆಗೂ ರೈತ ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕವನ್ನು ಕಾಯ್ದುಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಜನರಿಗೆ ಅದೇ ಸಮರ್ಪಣಾ ಭಾವ ಮತ್ತು ವಿವೇಕದಿಂದ ಮುಂದಿನ ಬಹಳ ಕಾಲದವರೆಗೆ ಮಾರ್ಗದರ್ಶನ ನೀಡುವುದನ್ನು ತಾವು ಮುಂದುವರಿಸುತ್ತೀರಿ ಎಂಬ ಭರವಸೆಯನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು.

ಮಾತೃಭಾಷೆಯ ಬಗ್ಗೆ ಶ್ರೀ ವೆಂಕಯ್ಯ ನಾಯ್ಡು ಅವರಿಗಿರುವ ಗೌರವವನ್ನು ಮಾನ್ಯ ಮಾಡಿದ ಪ್ರಧಾನಮಂತ್ರಿ ಅವರು, ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಾಗರಿಕರಿಗೆ ಸೇವೆಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಭಾಷೆಗಳಿಗಾಗಿ ಭಾಶಿನಿ - ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್‌ ವೇದಿಕೆಯನ್ನು ಉಲ್ಲೇಖಿಸಿದರು. ಅವರು ಎರಡೂ ಸದನಗಳ ಸದಸ್ಯರನ್ನು ಒಮ್ಮೆ ನೋಡುವಂತೆ ಕೇಳಿದರು. ಮಾತೃಭಾಷೆಯಲ್ಲಿ ಚರ್ಚೆಗಳಿಂದಾಗಿ ಹೊರಹೊಮ್ಮಿದ ಉತ್ತಮ ಹೊಸ ಪದಗಳನ್ನು ಸಂಗ್ರಹಿಸಿ ದೇಶದ ಭಾಷೆಗಳನ್ನು ಶ್ರೀಮಂತಗೊಳಿಸಲು ಅವುಗಳನ್ನು ಸೇರಿಸುವಂತೆ ಅವರು, ಸ್ಪೀಕರ್‌ ಮತ್ತು ರಾಜ್ಯಸಭೆಯ ಸಭಾಪತಿ ಅವರನ್ನು ಕೋರಿದರು. ಉತ್ತಮ ಪದಗಳ ಸಂಗ್ರಹವನ್ನು ಬಿಡುಗಡೆ ಮಾಡುವ ವಾರ್ಷಿಕ ಸಂಪ್ರದಾಯವನ್ನು ಪ್ರಾರಂಭಿಸುವ ಮೂಲಕ, ನಾವು ವೆಂಕಯ್ಯ ನಾಯ್ಡು ಅವರ ಮಾತೃಭಾಷೆಯ ಮೇಲಿನ ಪ್ರೀತಿಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಅವರು ಹೇಳಿದರು.

 

**********


(Release ID: 1850428) Visitor Counter : 149