ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟೇಬಲ್ ಟೆನಿಸ್ ನ ಮಿಶ್ರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಶರತ್ ಕಮಲ್ ಮತ್ತು ಶ್ರೀಜಾ ಅಕುಲ ಅವರ ಮಾನಸಿಕ ದೃಢನಿಶ್ಚಯ ಮತ್ತು ಸದೃಢತೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 08 AUG 2022 8:30AM by PIB Bengaluru

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022 ರ ಟೂರ್ನಿಯ ಟೇಬಲ್ ಟೆನಿಸ್ ನ ಮಿಶ್ರ ಡಬಲ್ಸ್ ನಲ್ಲಿ ಶರತ್ ಕಮಾಲ್ ಮತ್ತು ಶ್ರೀಜಾ ಅಕುಲ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

 

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ

 

“ಒಟ್ಟಿಗೆ ಆಟ ಆಡುವುದು ಮತ್ತು ಗೆಲ್ಲುವುದು ತನ್ನದೇ ಆದ ಸಂತೋಷ ಹೊಂದಿದೆ. @ಶರತ್ ಕಮಲ್ ಮತ್ತು ಶ್ರೀಜಾ ಅಕುಲ ಅತ್ಯುತ್ತಮ ತಂಡದ ಸ್ಪೂರ್ತಿಯನ್ನು ತೋರಿದ್ದಾರೆ ಮತ್ತು ಟೇಬಲ್ ಟೆನಿಸ್ ನ ಮಿಶ್ರ ಡಬಲ್ಸ್ ನಲ್ಲಿ ನಿರೀಕ್ಷೆಯ ಚಿನ್ನದ ಪದಕ ಗಳಿಸಿದ್ದಾರೆ. ಇವರ ಮಾನಸಿಕ ದೃಢನಿಶ್ಚಯ ಮತ್ತು ದೃಢತೆಯನ್ನು ಶ್ಲಾಘಿಸುತ್ತೇನೆ. ಶರತ್ ಅವರು ಸ್ಪರ್ಧಿಸಿದ ಎಲ್ಲಾ ಸಿ.ಡಬ್ಲ್ಯೂ.ಜಿ ಸ್ಪರ್ಧೆಗಳಲ್ಲಿ ಫೈನಲ್ ಹಂತ ತಲುಪಿರುವುದು ಇವರ ಅತ್ಯುತ್ತಮ ಸಾಧನೆಯಾಗಿದೆ” ಎಂದು ಹೇಳಿದ್ದಾರೆ.

*******


(Release ID: 1850058) Visitor Counter : 123