ಪ್ರಧಾನ ಮಂತ್ರಿಯವರ ಕಛೇರಿ
ಟೇಬಲ್ ಟೆನಿಸ್ ನಲ್ಲಿ ಪ್ರತಿಷ್ಠಿತ ಚಿನ್ನದ ಪದಕ ಜಯಿಸಿದ ಭವಿನಾ ಪಟೇಲ್ ಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
07 AUG 2022 8:32AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022 ನ ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಪ್ರತಿಷ್ಠಿತ ಚಿನ್ನದ ಪದಕವನ್ನು ಜಯಿಸಿದ್ದಕ್ಕಾಗಿ ಭವಿನಾ ಪಟೇಲ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಗಮನಾರ್ಹ ಸಾಧನೆ ಮಾಡಿದ ಭವಿನಾ ಪಟೇಲ್ ನಮಗೆ ಹೆಮ್ಮೆ ಪಡಲು ಮತ್ತೊಂದು ಅವಕಾಶ ಒದಗಿಸಿದ್ದಾರೆ. ಅವರು ತನ್ನ ಚೊಚ್ಚಲ ಸಿಡಬ್ಲೂಜಿಯಲ್ಲೇ ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಪ್ರತಿಷ್ಠಿತ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರ ಸಾಧನೆ ಟೇಬಲ್ ಟೆನಿಸ್ ನಲ್ಲಿ ಮುಂದುವರಿಯಲು ಬಯಸುವ ಯುವ ಭಾರತೀಯರಿಗೆ ಉತ್ತೇಜನ ನೀಡುತ್ತದೆ ಎಂಬ ಭರವಸೆ ನನಗಿದೆ. ಭವಿನಾ ಅವರಿಗೆ ಮುಂದಿನ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಎಂದು ಶುಭ ಕೋರುತ್ತೇನೆ."
********
(Release ID: 1849467)
Visitor Counter : 131
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam