ಪ್ರಧಾನ ಮಂತ್ರಿಯವರ ಕಛೇರಿ
ಸಿಡಬ್ಲೂಜಿ 2022ರಲ್ಲಿ ಪುರುಷರ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ಎಂ.ಶ್ರೀಶಂಕರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
प्रविष्टि तिथि:
05 AUG 2022 9:40AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ-2022ರಲ್ಲಿ ಪುರುಷರ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದ ಎಂ.ಶ್ರೀಶಂಕರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಸಿಡಬ್ಲ್ಯೂಜಿಯಲ್ಲಿ ಎಂ. ಶ್ರೀಶಂಕರ್ ಬೆಳ್ಳಿ ಪದಕ ಗೆದ್ದಿರುವುದು ವಿಶೇಷವಾಗಿದೆ. ದಶಕಗಳ ನಂತರ ಭಾರತ ಸಿಡಬ್ಲ್ಯೂಜಿಯಲ್ಲಿ ಪುರುಷರ ಉದ್ದ ಜಿಗಿತದಲ್ಲಿ ಪದಕ ಗೆದ್ದುಕೊಂಡಿದೆ. ಅವರ ಸಾಧನೆ ಭವಿಷ್ಯದಲ್ಲಿ ಭಾರತೀಯ ಅಥ್ಲೆಟಿಕ್ಸ್‌ನ ಸಾಧನೆ ಉತ್ತಮಗೊಳಿಸಲಿದೆ. ಅವರಿಗೆ ಅಭಿನಂದನೆಗಳು.ಅವರು ಮುಂಬರುವ ದಿನಗಳಲ್ಲಿ ಉತ್ತಮ ಸಾಧನೆ ಮಾಡುವುದನ್ನು ಮುಂದುವರಿಸಲಿ’’ ಎಂದು ಹೇಳಿದ್ದಾರೆ.
******
(रिलीज़ आईडी: 1848806)
आगंतुक पटल : 190
इस विज्ञप्ति को इन भाषाओं में पढ़ें:
Bengali
,
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam