ಪ್ರಧಾನ ಮಂತ್ರಿಯವರ ಕಛೇರಿ
ಕಾಮನ್ ವೆಲ್ತ್ ಕ್ರೀಡಾಕೂಟ 2022ಯ ಟೇಬಲ್ ಟೆನಿಸ್ ನಲ್ಲಿ ಚಿನ್ನದ ಪದಕ ಗೆದ್ದ ಜಿ.ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಸನಿಲ್ ಶೆಟ್ಟಿ ಅವರನ್ನು ಅಭಿನಂದಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
02 AUG 2022 9:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022ಯ ಟೇಬಲ್ ಟೆನಿಸ್ ನಲ್ಲಿ ಚಿನ್ನದ ಪದಕ ಗೆದ್ದ ಜಿ.ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಸನಿಲ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ
“ಟೇಬಲ್ ಟೆನಿಸ್ ನಲ್ಲಿ ಶುಭ ಸುದ್ದಿ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಡೈನಾಮಿಕ್ ತಂಡದ ಜಿ.ಸತ್ಯನ್, ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಸನಿಲ್ ಶೆಟ್ಟಿಗೆ ಅಭಿನಂದನೆಗಳು. ತಂಡ ಹೊಸ ಮಾನದಂಡ ನಿಗದಿಪಡಿಸಿದೆ, ಅದು ಕೌಶಲ್ಯದಲ್ಲಾಗಿರಬಹುದು ಅಥವಾ ಬದ್ಧತೆಯಲ್ಲಾಗಿರಬಹುದು. ಭವಿಷ್ಯದ ಎಲ್ಲ ಪ್ರಯತ್ನಗಳಿಗೂ ಅವರಿಗೆ ಶುಭವಾಗಲಿ’’
*************
(ಪ್ರಕಟಣೆ ಐ.ಡಿ.: 1847845)
ವಿಸಿಟರ್ ಕೌಂಟರ್ : 161
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
हिन्दी
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam