ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಬ್ರೆಜಿಲ್ ನಲ್ಲಿ ಬಿಎಂ-ಸೀಲ್-11 ಯೋಜನೆಯ ಅಭಿವೃದ್ಧಿಗಾಗಿ ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತದ ಸಂಪೂರ್ಣ ಸ್ವಾಮ್ಯಕ್ಕೊಳಪಟ್ಟ ಅಂಗಸಂಸ್ಥೆಯಾದ ಭಾರತ್ ಪೆಟ್ರೋ ಸಂಪನ್ಮೂಲ ನಿಯಮಿತದಿಂದ ಹೆಚ್ಚುವರಿ ಹೂಡಿಕೆಗೆ ಸಂಪುಟದ ಅನುಮೋದನೆ

Posted On: 27 JUL 2022 5:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು, ಬ್ರೆಜಿಲ್ ನಲ್ಲಿ ಬಿಎಂ-ಸೀಲ್-11 ರಿಯಾಯಿತಿ ಯೋಜನೆಯ ಅಭಿವೃದ್ಧಿಗಾಗಿ ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ (ಬಿಪಿಸಿಎಲ್)ನ ಸಂಪೂರ್ಣ ಸ್ವಾಮ್ಯಕ್ಕೊಳಪಟ್ಟ ಅಂಗಸಂಸ್ಥೆಯಾದ ಭಾರತ್ ಪೆಟ್ರೋ ಸಂಪನ್ಮೂಲ ನಿಯಮಿತ (ಬಿಪಿಆರ್.ಎಲ್) ನಿಂದ 1,600 ದಶಲಕ್ಷ ಅಮೆರಿಕನ್ ಡಾಲರ್ (ಸುಮಾರು 12,000 ಕೋಟಿ ರೂ.) ಹೆಚ್ಚುವರಿ ಹೂಡಿಕೆಗೆ ತನ್ನ ಅನುಮೋದನೆ ನೀಡಿದೆ.

ಸಿಸಿಇಎ ಈ ಕೆಳಗಿನವುಗಳನ್ನು ಅನುಮೋದಿಸಿದೆ:

i. ಬಿಪಿಆರ್.ಎಲ್ ನಲ್ಲಿ ಬಿಪಿಸಿಎಲ್ ಈಕ್ವಿಟಿ ಹೂಡಿಕೆಯ ಮಿತಿ ಮತ್ತು ಕಂಪನಿಯ ಅಧಿಕೃತ ಶೇರು ಬಂಡವಾಳವನ್ನು 15,000 ಕೋಟಿ ರೂ.ಗಳಿಂದ 20,000 ಕೋಟಿ ರೂ.ಗಳಿಗೆ ಹೆಚ್ಚಿಸುವುದು (ಕಾಲಕಾಲಕ್ಕೆ ಬಿ.ಪಿ.ಸಿ.ಎಲ್. ನಿರ್ದಿಷ್ಟಪಡಿಸುವಂತೆ).

ii. ಇಂಟರ್ ಮೀಡಿಯೆಟ್ ಡಬ್ಲ್ಯೂಒಎಸ್ ಮೂಲಕ ಅಂತಾರಾಷ್ಟ್ರೀಯ ಬಿವಿ ಬ್ರೆಸಿಲ್ ಪೆಟ್ರೋಲಿಯೊ ಲಿಮಿಟೆಡ್ ನಲ್ಲಿ ಬಿಪಿಆರ್.ಎಲ್ ಇಂಟರ್ ನ್ಯಾಷನಲ್ ಬಿವಿಯಿಂದ ಈಕ್ವಿಟಿ ಹೂಡಿಕೆಯ ಮಿತಿಯನ್ನು ಪ್ರಸ್ತುತ ಇರುವ 5,000 ಕೋಟಿ ರೂ.ನಿಂದ 15,000 ಕೋಟಿ ರೂ.ಗಳಿಗೆ ಹೆಚ್ಚಿಸಲು ಅಧಿಕಾರ ನೀಡುವುದು, ಇದು 10000 ಕೋಟಿ ರೂ. ಹೆಚ್ಚಳವಾಗಿದೆ. 

2026-27ರಿಂದ ಬಿಎಂ-ಸೀಲ್-11 ಯೋಜನೆಯಿಂದ ಉತ್ಪಾದನೆ ಪ್ರಾರಂಭವಾಗುವ ನಿರೀಕ್ಷೆಯಿದೆ.

 

ಇದು ಈ ಕೆಳಗಿನವುಗಳಿಗೆ ನೆರವಾಗುತ್ತದೆ:

a. ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಈಕ್ವಿಟಿ ತೈಲದ ಲಭ್ಯತೆ.

b. ಭಾರತದ ಕಚ್ಚಾ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸಲಿದ್ದು, ಭಾರತೀಯ ತೈಲ ಕಂಪನಿಗಳು ಬ್ರೆಜಿಲ್ ನಿಂದ ಹೆಚ್ಚಿನ ಕಚ್ಚಾ ತೈಲವನ್ನು ಸಂಗ್ರಹಿಸಲು ಆಸಕ್ತಿ ವ್ಯಕ್ತಪಡಿಸಿವೆ.

c. ಬ್ರೆಜಿಲ್ ನಲ್ಲಿ ಭಾರತದ ನೆಲೆಯನ್ನು ಬಲಪಡಿಸುತ್ತದೆ, ಇದು ನೆರೆಯ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ವ್ಯಾಪಾರ ಮಾರ್ಗಗಳನ್ನು ಮತ್ತಷ್ಟು ತೆರೆಯುತ್ತದೆ.

d. ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಬಿಪಿಆರ್.ಎಲ್ ಈ ರಿಯಾಯಿತಿಯಲ್ಲಿ ಶೇ.40ರಷ್ಟು ಭಾಗವಹಿಸುವ ಹಿತಾಸಕ್ತಿಯನ್ನು (ಪಿಐ) ಹೊಂದಿದ್ದು, ಬ್ರೆಜಿಲ್ ನ ರಾಷ್ಟ್ರೀಯ ತೈಲ ಕಂಪನಿಯಾದ ಪೆಟ್ರೋಬ್ರಾಸ್ ನೊಂದಿಗೆ ಶೇ.60ರಷ್ಟು ಭಾಗವಹಿಸುವ ಹಿತಾಸಕ್ತಿಯೊಂದಿಗೆ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಿಪಿಆರ್.ಎಲ್ 2008 ರಿಂದ ಬ್ರೆಜಿಲ್ ನಲ್ಲಿ ಈ ಯೋಜನೆಯ ಪರಿಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ.

***********


(Release ID: 1845635) Visitor Counter : 167