ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜುಲೈ 18 ರಂದು ಎನ್ಐಐಒದ ‘ಸ್ವಾವಲಂಬನ್’ ವಿಚಾರಸಂಕಿರಣ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ


ಭಾರತೀಯ ನೌಕಾಪಡೆಯಲ್ಲಿ ದೇಶೀಯ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ಗುರಿ ಹೊಂದಿರುವ ‘ಸ್ಪ್ರಿಂಟ್ ಸ್ಪರ್ಧೆ’ ಗಳನ್ನು ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ

Posted On: 17 JUL 2022 10:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜುಲೈ 18ರಂದು ಸಂಜೆ 4.30ಕ್ಕೆ ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಎನ್ಐಐಒ (ನೌಕಾ ನಾವೀನ್ಯತೆ ಮತ್ತು ದೇಶೀಯತೆ ಸಂಸ್ಥೆ)ಯ ‘ಸ್ವಾವಲಂಬನ’ ವಿಚಾರ ಸಂಕಿರಣವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

 ಆತ್ಮನಿರ್ಭರ ಭಾರತದ ಪ್ರಮುಖ ಆಧಾರ ಸ್ತಂಭವೆಂದರೆ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದಾಗಿದೆ. ಈ ಪ್ರಯತ್ನವನ್ನು ಮುಂದುವರಿಸಲು, ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನ ಮಂತ್ರಿ ಭಾರತೀಯ ನೌಕಾಪಡೆಯಲ್ಲಿ ಸ್ವದೇಶಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಗುರಿ ಹೊಂದಿರುವ 'ಸ್ಪ್ರಿಂಟ್ ಸ್ಪರ್ಧೆಗಳನ್ನು' ಅನಾವರಣಗೊಳಿಸಲಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ದ ಭಾಗವಾಗಿ ಎನ್ಐಐಒ ರಕ್ಷಣಾ ನಾವೀನ್ಯತೆ ಸಂಸ್ಥೆ (ಡಿಐಒ) ಯೊಂದಿಗೆ ಭಾರತೀಯ ನೌಕಾಪಡೆಯಲ್ಲಿ ಕನಿಷ್ಠ 75 ಹೊಸ ದೇಶೀಯ ತಂತ್ರಜ್ಞಾನಗಳು / ಉತ್ಪನ್ನಗಳನ್ನು ಸೇರ್ಪಡೆಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಸಹಭಾಗಿತ್ವದ ಯೋಜನೆಯನ್ನು ಸ್ಪ್ರಿಂಟ್ (ಐಡಿಇಎಕ್ (iDEX), ಎನ್ ಐಐಒ (NIIO) ಮತ್ತು ಟಿಡಿಎಸಿ(TDAC) ಮೂಲಕ ಸಂಶೋಧನಾ ಮತ್ತು ಅಭಿವೃದ್ಧಿಯಗೆ ಬೆಂಬಲಿಸುವುದು) ಎಂದು ಹೆಸರಿಡಲಾಗಿದೆ.

 ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಭಾರತೀಯ ಕೈಗಾರಿಕೆಗಳು ಮತ್ತು ಶೈಕ್ಷಣಿಕ ನೈಪುಣ್ಯತೆಯನ್ನು ತೊಡಗಿಸಿಕೊಳ್ಳುವ ಗುರಿಯನ್ನು ವಿಚಾರಸಂಕಿರಣ ಹೊಂದಿದೆ. ಎರಡು ದಿನಗಳ ಸೆಮಿನಾರ್ (ಜುಲೈ 18-19) ಕೈಗಾರಿಕೆ, ಶೈಕ್ಷಣಿಕ ವಲಯ, ಸೇವೆಗಳು ಮತ್ತು ಸರ್ಕಾರದ ನಾಯಕರು ಒಂದೇ ವೇದಿಕೆಯಲ್ಲಿ ಸೇರಲು ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಶಿಫಾರಸು ನೀಡಲು ಇದು ವೇದಿಕೆಯಾಗಲಿದೆ. ನಾವೀನ್ಯತೆ, ಸ್ವದೇಶೀಕರಣ, ಶಸ್ತ್ರಾಸ್ತ್ರ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ಹಲವು ಗೋಷ್ಠಿಗಳು ನಡೆಯಲಿವೆ.ವಿಚಾರಸಂಕಿರಣದ ಎರಡನೇ ದಿನವು ಸರ್ಕಾರದ ಸಾಗರ್ (ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಯ ದೂರದೃಷ್ಟಿಗೆ ಅನುಗುಣವಾಗಿ ಹಿಂದೂ ಮಹಾಸಾಗರದ ಪ್ರದೇಶವನ್ನು ತಲುಪಲು ಸಾಕ್ಷಿಯಾಗಲಿದೆ.

********


(Release ID: 1842285) Visitor Counter : 179