ಪ್ರಧಾನ ಮಂತ್ರಿಯವರ ಕಛೇರಿ

ಆಷಾಢ ಏಕಾದಶಿ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

Posted On: 10 JUL 2022 9:01AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಷಾಢ ಏಕಾದಶಿ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಹಿಂದಿನ ಮನ್ ಕಿ ಬಾತ್ ನಲ್ಲಿ ತಾವು ವಾರ್ಕರಿ ಸಂಪ್ರದಾಯ ಮತ್ತು ಪಂಢರಾಪುರದ ದೈವತ್ವದ ಕುರಿತು ಮಾತನಾಡಿದ್ದ ತುಣುಕನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಆಷಾಢ ಏಕಾದಶಿಯ ಶುಭ ಸಂದರ್ಭದಲ್ಲಿ ಶುಭಾಶಯಗಳು. ಭಗವಾನ್ ವಿಠಲರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಮತ್ತು ಸಮಾಜದಲ್ಲಿ ಸಂತೋಷದ ಚೈತನ್ಯ ಮತ್ತಷ್ಟು ಹೆಚ್ಚಾಗಲಿ. ಹಿಂದಿನ ಮನ್ ಕಿ ಬಾತ್ ನಲ್ಲಿ ನಾವು ವಾರ್ಕರಿ ಸಂಪ್ರದಾಯ ಮತ್ತು ಪಂಢರಾಪುರದ ದೈವತ್ವದ ಬಗ್ಗೆ ಮಾತನಾಡಿದ್ದ ತುಣಕನ್ನು ಹಂಚಿಕೊಂಡಿದ್ದೇನೆ’’. 

ಪ್ರಧಾನಮಂತ್ರಿ ಅವರು ಕೆಲವು ವಾರಗಳ ಹಿಂದೆ ದೇಹುವಿನಲ್ಲಿ ಸಂತ ತುಕಾರಾಂಗೆ ಮೀಸಲಾದ ದೇವಾಲಯವನ್ನು ಉದ್ಘಾಟಿಸಿದಾಗ ಮಾಡಿದ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅವರು ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಕೆಲವು ವಾರಗಳ ಹಿಂದೆ ದೇಹುವಿನಲ್ಲಿ ಸಂತ ತುಕಾರಾಂಗೆ ಮೀಸಲಾದ ದೇವಾಲಯ ಉದ್ಘಾಟಿಸಿದೆ. ನನ್ನ ಭಾಷಣದಲ್ಲಿ ಅವರ ಉದಾತ್ತ ಬೋಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದೆ ಮತ್ತು ವಾರ್ಕರಿ ಸಂತರು ಮತ್ತು ಶ್ರೀಗಳಿಂದ ನಾವೆಲ್ಲರೂ ಏನು ಕಲಿಯಬೇಕಾಗಿದೆ ಎಂಬ ಬಗ್ಗೆ ಮಾತನಾಡಿದ್ದೆನು’’ 

ಅಲ್ಲದೆ ಪ್ರಧಾನಮಂತ್ರಿ ಅವರು,ಕಳೆದ ನವೆಂಬರ್ ನಲ್ಲಿ ವಾರ್ಕರಿ ಸಂಪ್ರದಾಯದ ಬಗ್ಗೆ ನೀಡಿದ ಭಾಷಣವನ್ನು ಹಂಚಿಕೊಂಡಿದ್ದಾರೆ.

ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಕಳೆದ ನವೆಂಬರ್ ನಲ್ಲಿ ಫಂಡರಾಪುರದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಗೌರವ ನನಗೆ ದೊರತಿತ್ತು. ಇದು ಭಾರತದ ಯುವಜನತೆಯಲ್ಲಿ ವಾರ್ಕರಿ ಸಂಪ್ರದಾಯವನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ’’ 

**********



(Release ID: 1840604) Visitor Counter : 136