ಪ್ರಧಾನ ಮಂತ್ರಿಯವರ ಕಛೇರಿ

ಪಿಎಸ್ಎಲ್ ವಿ ಸಿ53 ಮೂಲಕ ಬಾಹ್ಯಾಕಾಶದಲ್ಲಿ ಭಾರತೀಯ ನವೋದ್ಯಮಗಳ ಎರಡು ಪೇಲೋಡ್ ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಐಎನ್-ಸ್ಪೇಸ್ ಮತ್ತು ಇಸ್ರೋವನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು

Posted On: 01 JUL 2022 9:20AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಿಎಸ್ಎಲ್ ವಿ ಸಿ 53 ಮಿಷನ್ ಮೂಲಕ ಬಾಹ್ಯಾಕಾಶದಲ್ಲಿ ಭಾರತೀಯ ನವೋದ್ಯಮಗಳ ಎರಡು ಪೇಲೋಡ್ ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಐಎನ್-ಎಸ್ಪೇಸ್ ಮತ್ತು ಇಸ್ರೋವನ್ನು ಅಭಿನಂದಿಸಿದ್ದಾರೆ.

 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ,

 

"ಪಿಎಸ್ಎಲ್ವಿ ಸಿ53 ಮಿಷನ್ ಬಾಹ್ಯಾಕಾಶದಲ್ಲಿ ಭಾರತೀಯ ನವೋದ್ಯಮಗಳ ಎರಡು ಪೇಲೋಡ್ ಗಳನ್ನು ಪ್ರಾರಂಭಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಹಸಕ್ಕೆ ಅನುವು ಮಾಡಿಕೊಟ್ಟ @INSPACeIND ಮತ್ತು @isro ಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಭಾರತೀಯ ಕಂಪನಿಗಳು ಬಾಹ್ಯಾಕಾಶವನ್ನು ತಲುಪಲಿವೆ ಎಂಬ ವಿಶ್ವಾಸವಿದೆ." ಎಂದಿದ್ದಾರೆ.

 

******(Release ID: 1838622) Visitor Counter : 102