ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೋ ಆ್ಯಪ್ ಮೂಲಕ 2022ರ ಜೂನ್ 26ರ ಮನ್ ಕಿ ಬಾತ್ ಆಧರಿಸಿದ ಕ್ವಿಜ್ ನಲ್ಲಿ ಭಾಗವಹಿಸಲು ಜನತೆಗೆ ಪ್ರಧಾನಮಂತ್ರಿ ಕರೆ.

प्रविष्टि तिथि: 29 JUN 2022 9:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮೋ ಆ್ಯಪ್ ಮೂಲಕ 2022ರ ಜೂನ್ 26ರ ‘ಮನ್ ಕಿ ಬಾತ್’ ಆಧರಿಸಿದ ಕ್ವಿಜ್ ನಲ್ಲಿ ಭಾಗವಹಿಸುವಂತೆ ಜನತೆಗೆ ಕರೆ ನೀಡಿದ್ದಾರೆ. ಈ ತಿಂಗಳ ‘ಮನ್ ಕಿ ಬಾತ್’ ನಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವುದು, ‘ತ್ಯಾಜ್ಯದಿಂದ ಸಂಪತ್ತು’ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ, ನಮ್ಮ ಕ್ರೀಡಾಪಟುಗಳು ಸಾಧನೆಗಳು ಸೇರಿದಂತೆ ಹಲವು ವೈವಿಧ್ಯಮಯ ವಿಚಾರಗಳನ್ನು ಒಳಗೊಂಡಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಈ ತಿಂಗಳ ‘ಮನ್ ಕಿ ಬಾತ್’ ನಲ್ಲಿ ನಾವು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವುದು, ‘ತ್ಯಾಜ್ಯದಿಂದ ಸಂಪತ್ತು’ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳು, ನಮ್ಮ ಅಥ್ಲೀಟ್ ಗಳ ಸಾಧನೆ ಸೇರಿದಂತೆ ಹಲವು ವೈವಿಧ್ಯಮಯ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಈ ಆವೃತ್ತಿ ಆಧರಿಸಿ ನಮೋ ಆ್ಯಪ್ ಕ್ವಿಜ್ ನಡೆಸುತ್ತಿದೆ. ಅದರಲ್ಲಿ ಭಾಗವಹಿಸಿ’’

 

******


(रिलीज़ आईडी: 1838171) आगंतुक पटल : 155
इस विज्ञप्ति को इन भाषाओं में पढ़ें: Telugu , Bengali , English , Urdu , Marathi , हिन्दी , Assamese , Manipuri , Punjabi , Gujarati , Odia , Tamil , Malayalam