ಹಣಕಾಸು ಸಚಿವಾಲಯ

ಆಜಾದಿ ಕಾ ಅಮೃತ ಮಹೋತ್ಸವ ಐಕಾನಿಕ್ ವೀಕ್ ಅಂಗವಾಗಿ ಸಿಬಿಐಸಿ ವತಿಯಿಂದ ನಾಳೆ ಮಾದಕ ವಸ್ತು ನಾಶಪಡಿಸುವ ದಿನ


ದೇಶದಾದ್ಯಂತ 14 ಸ್ಥಳಗಳಲ್ಲಿ ಸುಮಾರು 42000 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಲಾಗುವುದು

Posted On: 07 JUN 2022 7:11AM by PIB Bengaluru

ಹಣಕಾಸು ಸಚಿವಾಲಯವು ಭಾರತ ಸ್ವಾತಂತ್ರ್ಯದ 75 ನೇ ವರ್ಷವನ್ನು ಗುರುತಿಸಲು “ಆಜಾದಿ ಕಾ ಅಮೃತ್ ಮಹೋತ್ಸವ”ಅಂಗವಾಗಿ ಆಚರಿಸುತ್ತಿರುವ ಅಪ್ರತಿಮ ಸಪ್ತಾಹ (ಐಕಾನಿಕ್‌ ವೀಕ್)‌ ದ ಭಾಗವಾಗಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ನಾಳೆ (08.06.2022) ಮಾದಕ ವಸ್ತು ನಾಶಪಡಿಸುವ ದಿನವನ್ನು ನಡೆಸಲಿದೆ. ಇದರ ಅಂಗವಾಗಿ ದೇಶದಾದ್ಯಂತ 14 ಸ್ಥಳಗಳಲ್ಲಿ ಒಟ್ಟು 42000 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗುವುದು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಗುವಾಹಟಿ, ಲಕ್ನೋ, ಮುಂಬೈ, ಮುಂದ್ರಾ/ಕಾಂಡ್ಲಾ, ಪಾಟ್ನಾ ಮತ್ತು ಸಿಲಿಗುರಿಯಲ್ಲಿ ನಡೆಯಲಿರುವ ಮಾದಕ ವಸ್ತುಗಳನ್ನು ನಾಶಪಡಿಸುವ ಪ್ರಕ್ರಿಯೆಯನ್ನು ವರ್ಚುವಲ್‌ ಮಾದರಿಯಲ್ಲಿ ವೀಕ್ಷಿಸಲಿದ್ದಾರೆ ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

*****

 

 (Release ID: 1831784) Visitor Counter : 304