ಪ್ರಧಾನ ಮಂತ್ರಿಯವರ ಕಛೇರಿ

ರೈತರ ಆದಾಯವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಅನ್ನದಾತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯ ಬಗ್ಗೆ ಮೈಗೌ ಟ್ವೀಟ್ ಥ್ರೆಡ್ ಅನ್ನೂ ಹಂಚಿಕೊಂಡ ಪ್ರಧಾನಮಂತ್ರಿ

Posted On: 03 JUN 2022 5:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಮಾಹಿತಿಯನ್ನು ಹೊಂದಿರುವ narendramodi.in   ಅಂತರ್ಜಾಲ ತಾಣದ ಲೇಖನವನ್ನು ಹಂಚಿಕೊಂಡಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಪಶುಸಂಗೋಪನೆಯಿಂದ ಹಿಡಿದು ಮೀನುಗಾರಿಕೆವರೆಗೆ, ಅರಣ್ಯೀಕರಣದಿಂದ ಹಿಡಿದು ಸಿಹಿ ಕ್ರಾಂತಿಯವರೆಗೆ, ನಮ್ಮ ಸರ್ಕಾರವು ಪೂರಕ ಚಟುವಟಿಕೆಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ. #8yearsOfKisanKalyan"

ಅನ್ನದಾತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುವ ಮೈಗೌ ಟ್ವೀಟ್ ಥ್ರೆಡ್ ಅನ್ನೂ ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

"देश के अन्नदाताओं के सशक्तिकरण से न्यू इंडिया को मजबूत आधार मिल रहा है। बीज से बाजार तक हर क्षेत्र में उनके चौतरफा विकास पर ध्यान केंद्रित किया है। ये हमारे किसान भाई-बहनों की संकल्प-शक्ति का ही परिणाम है कि भारत कृषि क्षेत्र में एक नई मिसाल पेश कर रहा है। #8YearsOfKisanKalyan"

"ದೇಶದ ಅನ್ನದಾತರ ಸಬಲೀಕರಣವು ನವ ಭಾರತಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ. ಬೀಜಗಳಿಂದ ಹಿಡಿದು ಮಾರುಕಟ್ಟೆಗಳವರೆಗೆ, ಪ್ರತಿಯೊಂದು ವಲಯವೂ ಅದರ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ. ನಮ್ಮ ರೈತ ಸಹೋದರ ಸಹೋದರಿಯರ ಸಂಕಲ್ಪಶಕ್ತಿಯ ಫಲವಾಗಿ ಭಾರತವು ಕೃಷಿ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಸ್ಥಾಪಿಸುತ್ತಿದೆ. #8YearsOfKisanKalyan" ಎಂದು ತಿಳಿಸಿದ್ದಾರೆ.
ಹಲವಾರು ಯೋಜನೆಗಳ ಶೇ.100ರಷ್ಟು ಪ್ರಯೋಜನಗಳನ್ನು ರೈತ ಸಹೋದರ ಸಹೋದರಿಯರಿಗೆ ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ನಮ್ಮ ಸರ್ಕಾರವು ಯೋಜನೆಯ ಶೇಕಡಾ 100ರಷ್ಟು ಪ್ರಯೋಜನಗಳನ್ನು ರೈತ ಸಹೋದರ ಮತ್ತು ಸಹೋದರಿಯರಿಗೆ ತಲುಪಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಪಿಎಂ-ಕಿಸಾನ್ ಯೋಜನೆಯಿಂದ ಹಿಡಿದು ದಾಖಲೆಯ ಬಜೆಟ್ ಹಂಚಿಕೆವರೆಗೆ ಅಥವಾ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಎಂ.ಎಸ್.ಪಿ.ವರೆಗೆ, ಮಣ್ಣಿನ ಆರೋಗ್ಯ ಕಾರ್ಡ್ ನಿಂದ  ಇ-ನ್ಯಾವ್ ವರೆಗೆ,  ಅನ್ನದಾತರಿಗೆ ಹೊಸ ಶಕ್ತಿಯನ್ನು ನೀಡಿದ ಅನೇಕ ಯೋಜನೆಗಳಿವೆ. " ಎಂದು ತಿಳಿಸಿದ್ದಾರೆ.

"किसान भाई-बहनों तक योजनाओं का शत-प्रतिशत लाभ पहुंचाने के लिए हमारी सरकार पूरी तरह से प्रतिबद्ध है। पीएम-किसान योजना से लेकर रिकॉर्ड बजट आवंटन हो या उत्पादन लागत का डेढ़ गुना एमएसपी, सॉयल हेल्थ कार्ड से लेकर e-NAM तक ऐसी अनेक योजनाएं हैं, जिनसे अन्नदाताओं को नई ताकत मिली है।"

*****



(Release ID: 1830986) Visitor Counter : 150