ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಶ್ರೀ ಅನುರಾಗ್ ಠಾಕೂರ್ ಅವರು ನಾಳೆ ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ವಿಶ್ವ ಬೈಸಿಕಲ್ ದಿನದಂದು ರಾಷ್ಟ್ರವ್ಯಾಪಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು


ಕೇಂದ್ರ ಸಚಿವರು 750 ಯುವ ಸೈಕ್ಲಿಸ್ಟ್‌ಗಳೊಂದಿಗೆ 7.5 ಕಿಮೀ ದೂರವನ್ನು ಸೈಕಲ್‌ನಲ್ಲಿ ಪ್ರಯಾಣಿಸಲಿದ್ದಾರೆ.

ಎನ್‌ವೈಕೆಎಸ್‌ ನಿಂದ 35 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ ಮತ್ತು ದೇಶದಾದ್ಯಂತ 75 ಪ್ರತಿಷ್ಠಿತ ಸ್ಥಳಗಳಲ್ಲಿ ಸೈಕಲ್ ರ‍್ಯಾಲಿಗಳನ್ನು ಆಯೋಜಿಸಲಾಗುತ್ತದೆ

9.68 ಲಕ್ಷಕ್ಕೂ ಹೆಚ್ಚು ಕಿಲೋಮೀಟರ್‌ ದೂರವನ್ನು ಒಂದೇ ದಿನದಲ್ಲಿ ಉದ್ದೇಶಿತ ಬೈಸಿಕಲ್ ರ‍್ಯಾಲಿಗಳ ಮೂಲಕ 1.29 ಲಕ್ಷ ಯುವ ಸೈಕ್ಲಿಸ್ಟ್‌ಗಳು ಕ್ರಮಿಸಲಿದ್ದಾರೆ.

Posted On: 02 JUN 2022 1:11PM by PIB Bengaluru

ಸ್ವಾತಂತ್ರ್ಯದ ಅಮೃತ ಮಹೋತ್ಸವ - ಭಾರತ@75 ರಭಾಗವಾಗಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 3 ನೇ ಜೂನ್, 2022 ರಂದು ದೇಶಾದ್ಯಂತ ವಿಶ್ವ ಸೈಕಲ್ ದಿನವನ್ನು ಆಯೋಜಿಸುತ್ತಿದೆ. ಮಾರ್ಚ್ 12, 2021 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಆರಂಭದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉದ್ಘಾಟನಾ ಭಾಷಣದಿಂದ ಸ್ಫೂರ್ತಿ ಪಡೆದು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ʼಆಜಾದಿ ಕಾ ಅಮೃತ್ ಮಹೋತ್ಸವʼದ ಆಚರಣೆಯನ್ನು ಕ್ರಿಯೆಗಳು ಮತ್ತು ನಿರ್ಣಯಗಳ ಆಧಾರ ಸ್ತಂಭ @ 75 ರ ಅಡಿಯಲ್ಲಿ ಪರಿಕಲ್ಪನೆ ಮಾಡಿದೆ.

3ನೇ ಜೂನ್ 2022 ರಂದು ವಿಶ್ವ ಬೈಸಿಕಲ್ ದಿನದ ಅಂಗವಾಗಿ, ಇಲಾಖೆ. ಯುವ ವ್ಯವಹಾರಗಳ ತನ್ನ ಎರಡು ಪ್ರವರ್ತಕ ಯುವ ಸಂಘಟನೆಗಳಾದ ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್‌) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಬೆಂಬಲದೊಂದಿಗೆ ದೆಹಲಿಯಲ್ಲಿ ವಿಶ್ವ ಬೈಸಿಕಲ್ ದಿನವನ್ನು ಪ್ರಾರಂಭಿಸುವುದು,  35 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳರಾಜಧಾನಿಗಳು, ದೇಶದಾದ್ಯಂತ ಮತ್ತು ದೇಶದ ಎಲ್ಲಾ ಬ್ಲಾಕ್‌ಗಳಲ್ಲಿ 75 ಪ್ರತಿಷ್ಙಿತ ಸ್ಥಳಗಳಲ್ಲಿ ಏಕಕಾಲದಲ್ಲಿ ಬೈಸಿಕಲ್  ರ‍್ಯಾಲಿಗಳ ನಾಲ್ಕು ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. 

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು 3 ಜೂನ್ 2022 ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ, ಈ ಸಮಯದಲ್ಲಿ ಕೇಂದ್ರ ಸಚಿವರು 750 ಯುವ ಸೈಕ್ಲಿಸ್ಟ್‌ಗಳೊಂದಿಗೆ 7.5 ಕಿಮೀ ಸೈಕಲ್‌ನಲ್ಲಿ ಪಯಣಿಸಲಿದ್ದಾರೆ. ಇದಲ್ಲದೆ, ಎನ್‌ವೈಕೆಎಸ್‌ನಿಂದ 35 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ, ದೇಶದಾದ್ಯಂತ ಇರುವ 75 ಪ್ರತಿಷ್ಙಿತ ಸ್ಥಳಗಳಲ್ಲಿ 75 ಜನರು ಭಾಗವಹಿಸಿ 7.5 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇದಲ್ಲದೆ, ನೆಹರು ಯುವ ಕೇಂದ್ರ ಸಂಘಟನೆಯು ತನ್ನ ಯುವ ಸ್ವಯಂಸೇವಕರು ಮತ್ತು ಯೂತ್ ಕ್ಲಬ್‌ಗಳ ಸದಸ್ಯರ ಬೆಂಬಲ ಮತ್ತು ಕೊಡುಗೆಯೊಂದಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ದೇಶದ ಎಲ್ಲಾ ಬ್ಲಾಕ್‌ಗಳಲ್ಲಿ ಈ ಸೈಕಲ್ ರ‍್ಯಾಲಿಗಳನ್ನು ಕೈಗೊಳ್ಳುತ್ತಿದೆ.

ಹೀಗಾಗಿ, 3ನೇ ಜೂನ್ 2022 ರಂದು ವಿಶ್ವ ಬೈಸಿಕಲ್ ದಿನದ ಸಂದರ್ಭದಲ್ಲಿ, ದೇಶದಾದ್ಯಂತ ಸೈಕಲ್ ರ‍್ಯಾಲಿಗಳನ್ನು ಆಯೋಜಿಸಲಾಗುವುದು. ಈ ಉಪಕ್ರಮದ ಮೂಲಕ, 1.29 ಲಕ್ಷ ಯುವ ಸೈಕ್ಲಿಸ್ಟ್‌ಗಳು ಉದ್ದೇಶಿತ ಬೈಸಿಕಲ್ ರ‍್ಯಾಲಿಗಳ  ಮೂಲಕ ಒಂದೇ ದಿನದಲ್ಲಿ ಅಂದರೆ 3ನೇ ಜೂನ್ 2022 ರಂದು  9.68 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.

ಬೊಜ್ಜು, ಆಲಸ್ಯ, ಒತ್ತಡ, ಆತಂಕ, ರೋಗಗಳು ಇತ್ಯಾದಿಗಳಿಂದ ಮುಕ್ತಿ ಪಡೆಯುವುದು ಮತ್ತು ದೈಹಿಕ ಸಾಮರ್ಥ್ಯದ ಚಟುವಟಿಕೆಗಳಿಗಾಗಿ ಜನರು ತಮ್ಮ ದೈನಂದಿನ ಜೀವನದಲ್ಲಿ ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಪ್ರೇರೇಪಿಸುವುದು ಗುರಿಯಾಗಿದೆ.  ಸಾಮಾನ್ಯ ನಾಗರಿಕರು ಸೈಕ್ಲಿಂಗ್ ಅನ್ನು ಅಳವಡಿಸಿಕೊಳ್ಳುವುದರಿಂದ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ. . ವಿಶ್ವ ಬೈಸಿಕಲ್ ದಿನದ ಆಚರಣೆಯ ಮೂಲಕ, ನಾಗರಿಕರಿಗೆ ತಮ್ಮ ಜೀವನದಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಸೇರಿಸಲು ಸಂಕಲ್ಪ ಮಾಡಲು ಕರೆ ನೀಡಲಾಗುವುದು  “ಫಿಟ್ನೆಸ್ ಕಿ ಡೋಸ್ ಆಧಾ ಘಂಟಾ ರೋಜ್”- “ಫಿಟ್ನೆಸ್‌ ನ ಡೋಸ್‌ ಅರ್ಧ ಗಂಟೆ ಪ್ರತಿದಿನ”.

ವಿಶ್ವ ಬೈಸಿಕಲ್ ದಿನದ ಆಚರಣೆಯ ಪ್ರಮುಖ ಚಟುವಟಿಕೆಗಳಲ್ಲಿ ಬಜ್ ರಚನೆ ಮತ್ತು ಸಂದೇಶ ವರ್ಧನೆ, ಫಿಟ್‌ನೆಸ್ ಕುರಿತು ಜಾಗೃತಿ ಮತ್ತು ಫ್ಲಾಗ್-ಆಫ್ ಬೈಸಿಕಲ್ ರ‍್ಯಾಲಿಗಳು ಸೇರಿವೆ. ಯುವ ಸ್ವಯಂಸೇವಕರು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ಇದೇ ರೀತಿಯ ಸೈಕಲ್  ರ‍್ಯಾಲಿಗಳಲ್ಲಿ ಭಾಗವಹಿಸಲು ಮತ್ತು ಆಯೋಜಿಸಲು ಪ್ರೇರೇಪಿಸುತ್ತಿದ್ದಾರೆ. ಸಾಮಾನ್ಯವಾಗಿ ಜನರು ಮತ್ತು ವಿಶೇಷವಾಗಿ ಯುವಕರು ತಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ #Cycling4India ಮತ್ತು #worldbicycleday2022 ನೊಂದಿಗೆ ಬೈಸಿಕಲ್ ರ‍್ಯಾಲಿಗಳನ್ನು ಪ್ರಚಾರ ಮಾಡಬಹುದು.

ಗಣ್ಯವ್ಯಕ್ತಿಗಳು, ಸಾರ್ವಜನಿಕ ಪ್ರತಿನಿಧಿಗಳು, ಪಿಆರ್‌ಐ ಮುಖಂಡರು, ಸಮಾಜ ಸೇವಕರು, ಕ್ರೀಡಾಪಟುಗಳು ಮತ್ತು ಇತರ ಗಣ್ಯರು ಭಾಗವಹಿಸಲು, ವಿವಿಧ ಹಂತಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಕೋರಲಾಗಿದೆ.

ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಬೈಸಿಕಲ್ ರ‍್ಯಾಲಿಗಳಲ್ಲಿ ಭಾಗವಹಿಸಲು ವಿನಂತಿಸಲಾಗುತ್ತಿದೆ. ವಿಶ್ವ ಬೈಸಿಕಲ್ ದಿನದ ಆಚರಣೆಯನ್ನು ಜನರು ನಡೆಸುವಂತೆ ಮಾಡಲು, ಸ್ನೇಹಿತರು, ಕುಟುಂಬಗಳು ಮತ್ತು ಗೆಳೆಯರ ಗುಂಪುಗಳು ಇತ್ಯಾದಿಗಳನ್ನು ಕಾರ್ಯಕ್ರಮದಲ್ಲಿ  ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

*****



(Release ID: 1830526) Visitor Counter : 144