ಹಣಕಾಸು ಸಚಿವಾಲಯ
ಮೇ , 2022 ರಲ್ಲಿ 1,40,885 ಕೋಟಿ ರೂ. ಒಟ್ಟು ಜಿ ಎಸ್ ಟಿ ಆದಾಯ ಸಂಗ್ರಹ; ವರ್ಷದಿಂದ ವರ್ಷಕ್ಕೆ ಶೇ.44 ರಷ್ಟು ಹೆಚ್ಚಳ
ಜಿ ಎಸ್ ಟಿ ಪ್ರಾರಂಭವಾದಾಗಿನಿಂದ 4 ನೇ ಬಾರಿಗೆ ಅದರ ಸಂಗ್ರಹವು 1.40 ಲಕ್ಷ ಕೋಟಿ ರೂ. ಗಡಿ ದಾಟಿದೆ; ಮಾರ್ಚ್ 2022 ರಿಂದ ಸತತವಾಗಿ 3 ನೇ ತಿಂಗಳು
Posted On:
01 JUN 2022 1:28PM by PIB Bengaluru
ಮೇ 2022 ರಲ್ಲಿ 1,40,885 ಕೋಟಿ ರೂ. ಒಟ್ಟು ಜಿ ಎಸ್ ಟಿ ಆದಾಯವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಸಿಜಿಎಸ್‌ಟಿ 25,036 ಕೋಟಿ ರೂ., ಎಸ್‌ಜಿಎಸ್‌ಟಿ 32,001 ಕೋಟಿರೂ., ಐಜಿಎಸ್‌ಟಿ 73,345 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 37469 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 10,502 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 931 ಕೋಟಿ ರೂ.ಸೇರಿ).
ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 27,924 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 23,123 ಕೋಟಿ ರೂ. ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಮೇ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿ 52,960 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿ 55,124 ಕೋಟಿ ರೂ. ಆಗಿದೆ. ಹೆಚ್ಚುವರಿಯಾಗಿ, ಕೇಂದ್ರವು 31.05.2022 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 86912 ಕೋಟಿ ರೂ. ಜಿ ಎಸ್ ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.
ಮೇ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ 97,821 ಕೋಟಿ ರೂ.ಗಳ ಜಿ ಎಸ್ ಟಿ ಆದಾಯಕ್ಕಿಂತ ಶೇ.44 ರಷ್ಟು ಹೆಚ್ಚಾಗಿದೆ. ಈ ತಿಂಗಳ ಅವಧಿಯಲ್ಲಿ, ಸರಕುಗಳ ಆಮದು ಆದಾಯವು ಶೇ.43 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನ ಆದಾಯಕ್ಕಿಂತ ಶೇ.44 ರಷ್ಟು ಹೆಚ್ಚಾಗಿದೆ.
ಜಿ ಎಸ್ ಟಿ ಪ್ರಾರಂಭವಾದಾಗಿನಿಂದ ನಾಲ್ಕನೇ ಬಾರಿಗೆ ಮಾಸಿಕ ಜಿ ಎಸ್ ಟಿ ಸಂಗ್ರಹವು 1.40 ಲಕ್ಷ ಕೋಟಿ ರೂ. ಗಡಿ ದಾಟಿದೆ ಮತ್ತು ಮಾರ್ಚ್ 2022 ರಿಂದ ಸತತವಾಗಿ ಮೂರನೇ ತಿಂಗಳಲ್ಲಿ ಇದು ಮುಂದುವರೆದಿದೆ. ಮೇ ತಿಂಗಳ ಸಂಗ್ರಹಣೆಯು ಹಣಕಾಸು ವರ್ಷವು ಆರಂಭದ ಏಪ್ರಿಲ್ ತಿಂಗಳ ಆದಾಯಕ್ಕೆ ಸಂಬಂಧಿಸಿದೆ. ಹಣಕಾಸು ವರ್ಷವು ಆರಂಭದ ತಿಂಗಳು ಯಾವಾಗಲೂ ಏಪ್ರಿಲ್‌ಗಿಂತ ಕಡಿಮೆಯಿರುತ್ತದೆ, ಇದು ಆರ್ಥಿಕ ವರ್ಷದ ಮುಕ್ತಾಯದ ಮಾರ್ಚ್‌ನ ಆದಾಯಕ್ಕೆ ಸಂಬಂಧಿಸಿದೆ. ಆದಾಗ್ಯೂ, 2022ರ ಮೇ ತಿಂಗಳಿನಲ್ಲಿಯೂ ಸಹ ಒಟ್ಟು ಜಿಎಸ್‌ಟಿ ಆದಾಯವು 1.40 ಲಕ್ಷ ಕೋಟಿ ರೂ. ಗಡಿಯನ್ನು ದಾಟಿರುವುದು ಉತ್ತೇಜನಕಾರಿಯಾಗಿದೆ. ಏಪ್ರಿಲ್ 2022 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 7.4 ಕೋಟಿಯಾಗಿದೆ, ಇದು ಮಾರ್ಚ್ 2022 ರಲ್ಲಿ ಸೃಷ್ಟಿಯಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇ.4 ರಷ್ಟು ಕಡಿಮೆಯಾಗಿದೆ.
ಕೆಳಗಿನ ಕೋಷ್ಠಕವು ಪ್ರಸ್ತುತ ವರ್ಷದಲ್ಲಿ ಮಾಸಿಕ ಒಟ್ಟು ಜಿ ಎಸ್ ಟಿ ಆದಾಯದಲ್ಲಿನ ಪ್ರವೃತ್ತಿಗಳನ್ನು ತೋರಿಸುತ್ತದೆ. ಮೇ 2021 ಕ್ಕೆ ಹೋಲಿಸಿದರೆ ಮೇ 2022 ರಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿ ಎಸ್ ಟಿ ಯ ರಾಜ್ಯವಾರು ಅಂಕಿಅಂಶಗಳನ್ನು ಇದು ತೋರಿಸುತ್ತದೆ.
State-wise growth of GST Revenues during May 2022[1]
State
|
May-21
|
May-22
|
Growth
|
Jammu and Kashmir
|
232
|
372
|
60%
|
Himachal Pradesh
|
540
|
741
|
37%
|
Punjab
|
1,266
|
1,833
|
45%
|
Chandigarh
|
130
|
167
|
29%
|
Uttarakhand
|
893
|
1,309
|
46%
|
Haryana
|
4,663
|
6,663
|
43%
|
Delhi
|
2,771
|
4,113
|
48%
|
Rajasthan
|
2,464
|
3,789
|
54%
|
Uttar Pradesh
|
4,710
|
6,670
|
42%
|
Bihar
|
849
|
1,178
|
39%
|
Sikkim
|
250
|
279
|
12%
|
Arunachal Pradesh
|
36
|
82
|
124%
|
Nagaland
|
29
|
49
|
67%
|
Manipur
|
22
|
47
|
120%
|
Mizoram
|
15
|
25
|
70%
|
Tripura
|
39
|
65
|
67%
|
Meghalaya
|
124
|
174
|
40%
|
Assam
|
770
|
1,062
|
38%
|
West Bengal
|
3,590
|
4,896
|
36%
|
Jharkhand
|
2,013
|
2,468
|
23%
|
Odisha
|
3,197
|
3,956
|
24%
|
Chattisgarh
|
2,026
|
2,627
|
30%
|
Madhya Pradesh
|
1,928
|
2,746
|
42%
|
Gujarat
|
6,382
|
9,321
|
46%
|
Daman and Diu
|
0
|
0
|
153%
|
Dadra and Nagar Haveli
|
228
|
300
|
31%
|
Maharashtra
|
13,565
|
20,313
|
50%
|
Karnataka
|
5,754
|
9,232
|
60%
|
Goa
|
229
|
461
|
101%
|
Lakshadweep
|
0
|
1
|
148%
|
Kerala
|
1,147
|
2,064
|
80%
|
Tamil Nadu
|
5,592
|
7,910
|
41%
|
Puducherry
|
123
|
181
|
47%
|
Andaman and Nicobar Islands
|
48
|
24
|
-50%
|
Telangana
|
2,984
|
3,982
|
33%
|
Andhra Pradesh
|
2,074
|
3,047
|
47%
|
Ladakh
|
5
|
12
|
134%
|
Other Territory
|
121
|
185
|
52%
|
Center Jurisdiction
|
141
|
140
|
0%
|
Grand Total
|
70,951
|
1,02,485
|
44%
|
**************
(Release ID: 1830139)
|