ಪ್ರಧಾನ ಮಂತ್ರಿಯವರ ಕಛೇರಿ

ಜಪಾನ್ ನಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

Posted On: 23 MAY 2022 6:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 23ರಂದು ಜಪಾನ್‌ನಲ್ಲಿನ 700 ಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸಂವಾದ ನಡೆಸಿದರು. 

ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಮಂತ್ರಿ ಅವರು ಭಾರತ ಮತ್ತು ಜಪಾನ್ ನಡುವೆ ಸಾಂಸ್ಕೃತಿಕ ಹಾಗು ಜನರ ನಡುವಿನ ವಿನಿಮಯ ಉತ್ತೇಜಿಸಲು ಕೊಡುಗೆ ನೀಡುತ್ತಿರುವ ಜಪಾನಿನ ಇತಿಹಾಸತಜ್ಞರು, ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಕಲಾವಿದರನ್ನು ಭೇಟಿ ಮಾಡಿದರು. ಪ್ರಧಾನಿ ಅವರು ಜಪಾನ್‌ನಲ್ಲಿನ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಿದರು. ಜಪಾನ್‌ನಲ್ಲಿ ಸುಮಾರು 40,0000 ಅನಿವಾಸಿ ಭಾರತೀಯರಿದ್ದಾರೆ. 

ಭಾರತೀಯ ಸಮುದಾಯದ ಸದಸ್ಯರ ಕೌಶಲ್ಯ, ಪ್ರತಿಭೆ ಹಾಗೂ ಉದ್ಯಮಶೀಲತೆ ಮತ್ತು ಮಾತೃಭೂಮಿಯೊಂದಿಗೆ ಅವರ ಸಂಪರ್ಕಕ್ಕಾಗಿ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾಮಿ ವಿವೇಕಾನಂದ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತ ಮತ್ತು ಜಪಾನ್ ನಡುವೆ ಇರುವ ಆಳವಾದ ಸಾಂಸ್ಕೃತಿಕ ಸಂಬಂಧವನ್ನು ಬಲವಾಗಿ ಪ್ರತಿಪಾದಿಸಿದರು.  ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿನ ನಾನಾ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳು ಮತ್ತು ಸುಧಾರಣಾ ಉಪಕ್ರಮಗಳನ್ನು ವಿಶೇಷವಾಗಿ ಮೂಲಸೌಕರ್ಯ, ಆಡಳಿತ, ಹಸಿರು ಬೆಳವಣಿಗೆ, ಡಿಜಿಟಲ್ ಕ್ರಾಂತಿಯ ಕ್ಷೇತ್ರಗಳಲ್ಲಿನ ಕ್ರಮಗಳನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ‘ಭಾರತ್ ಚಲೋ, ಭಾರತ್ ಸೆ ಜೂಡೋ’ ಅಭಿಯಾನದಲ್ಲಿ ಸೇರಲು ಮತ್ತು ಅದನ್ನು ಮುನ್ನಡೆಸಿಕೊಂಡು ಹೋಗಲು ಅವರು ಭಾರತೀಯ ಸಮುದಾಯವನ್ನು ಆಹ್ವಾನಿಸಿದರು. 


***



(Release ID: 1827851) Visitor Counter : 141