ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎನ್‌ಇಸಿ ಕಾರ್ಪೊರೇಶನ್‌ನ ಅಧ್ಯಕ್ಷರಾದ ಡಾ. ನೊಬುಹಿರೊ ಎಂಡೊ ಅವರೊಂದಿಗೆ ಪ್ರಧಾನ ಮಂತ್ರಿಯವರ ಮಾತುಕತೆ

प्रविष्टि तिथि: 23 MAY 2022 12:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2022 ರಂದು ಟೋಕಿಯೊದಲ್ಲಿ ಎನ್‌ಇಸಿ ಕಾರ್ಪೊರೇಶನ್‌ನ ಅಧ್ಯಕ್ಷ ಡಾ. ನೊಬುಹಿರೊ ಎಂಡೊ ಅವರನ್ನು ಭೇಟಿಯಾದರು. ಭಾರತದ ದೂರಸಂಪರ್ಕ ವಲಯದಲ್ಲಿ, ವಿಶೇಷವಾಗಿ ಚೆನ್ನೈ-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಸಿಎಎನ್‌ಐ) ಮತ್ತು ಕೊಚ್ಚಿ-ಲಕ್ಷದ್ವೀಪ ದ್ವೀಪಗಳು (ಕೆಎಲ್‌ಐ) ಒಎಫ್‌ಸಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಎನ್‌ಇಸಿ  ಸಂಸ್ಥೆಯ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಇರುವ ಹೂಡಿಕೆ ಅವಕಾಶಗಳನ್ನು ಅವರು ಎತ್ತಿ ತೋರಿಸಿದರು.

ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಸಾಧ್ಯವಾಗುವಂತೆ ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಕುರಿತು ಅವರು ಚರ್ಚಿಸಿದರು. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದಲ್ಲಿ ಇರುವ ಅವಕಾಶಗಳ ಕುರಿತು ಅವರು ಚರ್ಚಿಸಿದರು.

***


(रिलीज़ आईडी: 1827593) आगंतुक पटल : 213
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam