ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಮತ್ತು ಜಪಾನ್ ಸ್ಪಂದನಾಶೀಲ ಸಂಬಂಧಗಳ ಬಗ್ಗೆ ಒಪೆಡ್ ಪುಟದಲ್ಲಿ (ಸಂಪಾದಕೀಯ ಪುಟದೆದುರು) ಲೇಖನ ಬರೆದ ಪ್ರಧಾನಮಂತ್ರಿ

Posted On: 23 MAY 2022 9:07AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯ ಜಪಾನಿ ಪತ್ರಿಕೆಯಲ್ಲಿ ಒಪೆಡ್ ಪುಟ (ಸಂಪಾದಕೀಯ ಪುಟದ ಎದುರು) ದಲ್ಲಿ ಲೇಖನ ಬರೆದಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಅಧಿಕೃತ ಜಪಾನ್ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ.

“ಭಾರತ ಮತ್ತು ಜಪಾನ್ ನಡುವಿನ ಸ್ಪಂದನಾಶೀಲ ಸಂಬಂಧಗಳ ಕುರಿತು ಒಪೆಡ್ ಪುಟದಲ್ಲಿ  ಒಂದು ಲೇಖನವನ್ನು ಬರೆಯಲಾಗಿದೆ. ನಮ್ಮದು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಪಾಲುದಾರಿಕೆಯಾಗಿದೆ. 70 ವೈಭವಯುತ ವರ್ಷಗಳನ್ನು ಪೂರೈಸಿದ ನಮ್ಮ ವಿಶೇಷ ಸ್ನೇಹದ ಪ್ರಯಾಣವನ್ನು ನಾನು ಗುರುತಿಸುತ್ತಿದ್ದೇನೆ. @Yomiuri_Online’’ 

“ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ-ಜಪಾನ್ ನಡುವಿನ ನಿಟಕ ಸಹಕಾರವು ಅತ್ಯಗತ್ಯವಾಗಿದೆ. ನಮ್ಮ ರಾಷ್ಟ್ರಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ದೃಢ ಬದ್ಧತೆಯನ್ನು ಹೊಂದಿವೆ. ಒಟ್ಟಾರೆ, ನಾವು ಸ್ಥಿರ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ಪ್ರದೇಶದ ಪ್ರಮುಖ ಆಧಾರ ಸ್ತಂಭಗಳು. ನಾನಾ ಬಹುಪಕ್ಷೀಯ ವೇದಿಕೆಗಳಲ್ಲಿ ನಾವು ನಿಕಟವಾಗಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಅಷ್ಟೇ ಹರ್ಷವಾಗುತ್ತಿದೆ’’ 
“ನಾನು ಗುಜರಾತ್ ಸಿಎಂ ಆಗಿದ್ದಾಗಿನಿಂದ ಜಪಾನಿನ ಜನರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವ ಅವಕಾಶ ಪಡೆದಿದ್ದೆನೆ. ಜಪಾನ್‌ನ ಅಭಿವೃದ್ಧಿಯ ದಾಪುಗಾಲು ಸದಾ ಪ್ರಶಂಸನೀಯ. ಮೂಲಸೌಕರ್ಯ, ತಂತ್ರಜ್ಞಾನ, ನಾವೀನ್ಯತೆ, ನವೋದ್ಯಮಗಳು ಮತ್ತು ಸೇರಿದಂತೆ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ಜಪಾನ್- ಭಾರತದ ಜೊತೆ ಪಾಲುದಾರಿಕೆ ಹೊಂದಿದೆ’’

***

 


(Release ID: 1827534) Visitor Counter : 188