ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋಪನ್ ಹ್ಯಾಗನ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು

Posted On: 03 MAY 2022 9:50PM by PIB Bengaluru

ಕೋಪನ್ ಹ್ಯಾಗನ್ ನ ಬೆಲ್ಲಾ ಕೇಂದ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಗೆ ಡೆನ್ಮಾರ್ಕ್ನ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್  ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ಉದ್ಯಮಿಗಳನ್ನು ಒಳಗೊಂಡ ಡೆನ್ಮಾರ್ಕ್ನಲ್ಲಿರುವ ಭಾರತೀಯ ಸಮುದಾಯದ 1000 ಕ್ಕೂ ಹೆಚ್ಚು ಸದಸ್ಯರು ಸಂವಾದ ಸಮಾರಂಭದಲ್ಲಿ ಭಾಗವಹಿಸಿದರು.

ಪ್ರಧಾನಮಂತ್ರಿ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್  ಅವರು ಭಾರತೀಯರ ಬಗೆಗಿನ ಆತ್ಮೀಯತೆ ಮತ್ತು ಗೌರವವನ್ನು ವಿಶೇಷವಾಗಿ ಶ್ಲಾಘಿಸಿದರು ಮತ್ತು ಹಸಿರು ಬೆಳವಣಿಗೆಗೆ ನವೀನ ಪರಿಹಾರಗಳನ್ನು ಹುಡುಕುವಲ್ಲಿ ಎರಡೂ ದೇಶಗಳು ಒಟ್ಟಾಗಿ ಬಹಳಷ್ಟು ಕೆಲಸ ಮಾಡಬಹುದು ಎಂದು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಡೆನ್ಮಾರ್ಕ್ನಲ್ಲಿ ಭಾರತೀಯ ಸಮುದಾಯದ ಸಕಾರಾತ್ಮಕ ಪಾತ್ರವನ್ನು ಅವರು ಪ್ರಶಂಸಿಸಿದರು. ಭಾರತದ ಆರ್ಥಿಕ ಸಾಮರ್ಥ್ಯವನ್ನು ವಿವರಿಸಿ ಶ್ಲಾಘಿಸಿದ ಅವರು, ಭಾರತ-ಡೆನ್ಮಾರ್ಕ್ ನಡುವಿನ ಸಹಯೋಗ ಉಪಕ್ರಮಗಳನ್ನು ಈ ಸಂದರ್ಭದಲ್ಲಿ ಆಹ್ವಾನಿಸಿದರು. 

 

***


(Release ID: 1822684) Visitor Counter : 184