ಪ್ರಧಾನ ಮಂತ್ರಿಯವರ ಕಛೇರಿ
ಜಾಗತಿಕ ಪಾಟಿದಾರ್ ವ್ಯಾಪಾರ ಶೃಂಗಸಭೆಯನ್ನು ಏಪ್ರಿಲ್ 29, 2022 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ
Posted On:
28 APR 2022 6:13PM by PIB Bengaluru
ಸರ್ದಾರ್ಧಾಮ್ ಆಯೋಜಿಸುತ್ತಿರುವ ಜಾಗತಿಕ ಪಾಟಿದಾರ್ ವ್ಯಾಪಾರ ಶೃಂಗಸಭೆಯನ್ನು (ಜಿ.ಪಿ.ಬಿ.ಎಸ್.) 29 ಏಪ್ರಿಲ್, 2022 ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಸಮಾವೇಶ ಮೂಲಕ ಉದ್ಘಾಟಿಸಲಿದ್ದಾರೆ.
ಪಾಟಿದಾರ್ ಸಮುದಾಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹ, ಸಹಕಾರ ಮತ್ತು ಬೆಂಬಲವನ್ನು ಒದಗಿಸಲು ಸರ್ದಾರ್ಧಾಮ್ 'ಮಿಷನ್ 2026' ಅಡಿಯಲ್ಲಿ ಜಿ.ಪಿ.ಬಿ.ಎಸ್. ಶೃಂಗಸಭೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಮೊದಲ ಎರಡು ಶೃಂಗಸಭೆಗಳು 2018 ಮತ್ತು 2020 ರಲ್ಲಿ ಗಾಂಧಿನಗರದಲ್ಲಿ ನಡೆದವು ಮತ್ತು ಈಗ ಪ್ರಸ್ತುತ ಶೃಂಗಸಭೆಯು ಸೂರತ್ ನಲ್ಲಿ ನಡೆಯುತ್ತಿದೆ. ಜಿ.ಪಿ.ಬಿ.ಎಸ್. ಶೃಂಗಸಭೆ 2022 ರ ಮುಖ್ಯ ವಿಷಯವೆಂದರೆ "ಆತ್ಮನಿರ್ಭರ್ ಸಮುದಾಯದಿಂದ ಆತ್ಮನಿರ್ಭರ್ ಗುಜರಾತ್ ಮತ್ತು ಭಾರತ". ಸಮುದಾಯದೊಳಗೆ ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳನ್ನು ಒಟ್ಟುಗೂಡಿಸುವ ಗುರಿಯನ್ನು ಈ ವರ್ಷದ ಶೃಂಗಸಭೆ ಹೊಂದಿದೆ; ಹೊಸ ಉದ್ಯಮಿಗಳನ್ನು ಪೋಷಿಸುವುದು ಮತ್ತು ಬೆಂಬಲಿಸುವುದು ಮತ್ತು ವಿದ್ಯಾವಂತ ಯುವಕರಿಗೆ ತರಬೇತಿ ಮತ್ತು ಉದ್ಯೋಗದ ಸಹಾಯವನ್ನು ಒದಗಿಸುವುದು. ಸರ್ಕಾರದ ಕೈಗಾರಿಕಾ ನೀತಿ, ಎಂ.ಎಸ್.ಎಂ.ಇ.ಗಳು, ಸ್ಟಾರ್ಟ್-ಅಪ್‌ಗಳು, ನಾವೀನ್ಯತೆಗಳ ವಿವಿಧ ಅಂಶಗಳನ್ನು ಒಳಗೊಂಡಿರುವ ಮೂರು ದಿನಗಳ ಶೃಂಗಸಭೆಯನ್ನು ಏಪ್ರಿಲ್ 29 ರಿಂದ ಮೇ 1, 2022 ರವರೆಗೆ ಸಂಘಟಕರು ಆಯೋಜಿಸಿದ್ದಾರೆ.
****
(Release ID: 1821104)
Visitor Counter : 156
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam