ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಮೆಸ್ಸರ್ಸ್. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಖಾಸಗಿ ನಿಯಮಿತ ಸಂಸ್ಥೆಯ ಮೂಲಕ 540 ಮೆಗಾವ್ಯಾಟ್ ಕ್ವಾರ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ನಿರ್ಮಾಣಕ್ಕೆ ಸಂಸತ್ ಅನುಮೋದನೆ ನೀಡಿದೆ


ಈ ಯೋಜನೆಯಿಂದ 1975 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ

ಕ್ವಾರ್ ಯೋಜನೆಯು 54 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ

ಈ ಯೋಜನೆಯ ನಿರ್ಮಾಣ ಚಟುವಟಿಕೆಗಳು 2500 ಜನರಿಗೆ ಉದ್ಯೋಗವನ್ನು ಸೃಷ್ಟಿಸಲಿದೆ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ

Posted On: 27 APR 2022 5:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಇಂದು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ 540 ಮೆಗಾವ್ಯಾಟ್ ನ (ಎಂ ಡಬ್ಲ್ಯೂ) ಕ್ವಾರ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗೆ ರೂ.4526.12 ಕೋಟಿಯ ಹೂಡಿಕೆಗೆ ಅನುಮೋದನೆ ನೀಡಿದೆ. ಕ್ರಮವಾಗಿ 51% ಮತ್ತು 49% ಈಕ್ವಿಟಿ ಕೊಡುಗೆಯೊಂದಿಗೆ, ಎನ್ ಹೆಚ್ ಪಿ ಸಿ ಮತ್ತು ಜೆ ಕೆ ಎಸ್ ಪಿ ಡಿಸಿ ನಡುವಿನ ಜಂಟಿ ಉದ್ಯಮ ಕಂಪನಿಯಾದ, ಮೆಸ್ಸರ್ಸ್. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಖಾಸಗಿ ನಿಯಮಿತ (ಮೆಸ್ಸರ್ಸ್. ಸಿವಿಪಿಪಿಪಿಎಲ್), ಸಂಸ್ಥೆಯ ಮೂಲಕ 27.04.2022 ರಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು .


90% ರಷ್ಟು ವಿಶ್ವಾಸಾರ್ಹ ವರ್ಷದಲ್ಲಿ ಈ ಯೋಜನೆಯು 1975.54 ದಶಲಕ್ಷ ಯೂನಿಟ್ ಗಳನ್ನು ಉತ್ಪಾದಿಸುತ್ತದೆ.


ಮೂಲಸೌಕರ್ಯಗಳನ್ನು ಸಕ್ರಿಯಗೊಳಿಸುವ ವೆಚ್ಚಕ್ಕಾಗಿ ಭಾರತ ಸರ್ಕಾರವು ರೂ.69.80 ಕೋಟಿಯ ಅನುದಾನವನ್ನು ವಿಸ್ತರಿಸುತ್ತಿದೆ ಮತ್ತು ಮೆಸ್ಸರ್ಸ್. ಸಿವಿಪಿಪಿಪಿಎಲ್ ನಲ್ಲಿ ಜೆ ಕೆ ಎಸ್ ಪಿ ಡಿ ಸಿ (49%) ರಷ್ಟು ಇಕ್ವಿಟಿ ಕೊಡುಗೆ ನೀಡಲು, 
ರೂ. 655.08 ಕೋಟಿಯ ಅನುದಾನವನ್ನು ಒದಗಿಸುವ ಮೂಲಕ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಬೆಂಬಲ ನೀಡುತ್ತಿದೆ. ತನ್ನ ಆಂತರಿಕ ಸಂಪನ್ಮೂಲಗಳಿಂದ ಎನ್ ಹೆಚ್ ಪಿ ಸಿ ರೂ. 681.82 ಕೋಟಿಯ ತನ್ನ ಪಾಲನ್ನು (51%) ಹೂಡಿಕೆ ಮಾಡುತ್ತದೆ. 54 ತಿಂಗಳ ಅವಧಿಯೊಂದಿಗೆ ಕ್ವಾರ್ ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾರ್ಯಾರಂಭ ಮಾಡಲಿದೆ. ಈ ಯೋಜನೆಯಿಂದ ಉತ್ಪತ್ತಿಯಾಗುವ ಶಕ್ತಿಯು ಗ್ರಿಡ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ವಿದ್ಯುತ್ ಸರಬರಾಜು ಸ್ಥಿತಿಯನ್ನು ಸುಧಾರಿಸುತ್ತದೆ.


ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ಈ ಯೋಜನೆಯನ್ನು ಕಾರ್ಯಸಾಧ್ಯವಾಗುವಂತೆ ಮಾಡಲು, ಯೋಜನೆಯ ಕಾರ್ಯಾರಂಭದ ನಂತರ 10 ವರ್ಷಗಳವರೆಗೆ ನೀರಿನ ಬಳಕೆಯ ಮೇಲೆ ವಿಧಿಸಲಾಗುವ ಶುಲ್ಕಗಳ ವಿನಾಯಿತಿಯನ್ನು, ಜಿ ಎಸ್ ಟಿ ಯ ರಾಜ್ಯದ ಪಾಲಿನ ಮರುಪಾವತಿ (ಅಂದರೆ ಎಸ್ ಜಿ ಎಸ್ ಟಿ) ಮತ್ತು ಕ್ರಮೇಣ ಕಡಿಮೆಯಾಗುವ ರೀತಿಯಲ್ಲಿ ವರ್ಷಕ್ಕೆ @2% ರಷ್ಟು ಉಚಿತ ವಿದ್ಯುತ್ ಮನ್ನಾವನ್ನು ವಿಸ್ತರಿಸಿದೆ, ಅಂದರೆ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡುವ ಉಚಿತ ವಿದ್ಯುತ್ ಮೊದಲನೇ ವರ್ಷದಲ್ಲಿ 2% ರಷ್ಟು ಆಗಿರುತ್ತದೆ ಮತ್ತು ನಂತರ ವರ್ಷಕ್ಕೆ @2% ರಂತೆ ಹೆಚ್ಚಾಗುತ್ತದೆ ಮತ್ತು 6ನೇ ವರ್ಷದಿಂದ 12% ರಷ್ಟು ಆಗಿರುತ್ತದೆ.
 

ಈ ಯೋಜನೆಯ ನಿರ್ಮಾಣ ಚಟುವಟಿಕೆಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 2500ರಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಇದಲ್ಲದೇ, ಈ ಯೋಜನೆಯ 40 ವರ್ಷಗಳ ಜೀವಿತಾವಧಿಯಲ್ಲಿ , ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು, ಜಮ್ಮು ಮತ್ತು ಕಾಶ್ಮೀರದ ಸುಮಾರು ರೂ. 4,548.59 ಕೋಟಿಯ ಉಚಿತ ವಿದ್ಯುತ್ ಮತ್ತು ರೂ. 4,941.46 ಕೋಟಿಯ ಕ್ವಾರ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ ನಿಂದ ನೀರಿನ ಬಳಕೆಯ ಶುಲ್ಕದ ವಿನಾಯಿತಿಯ ಪ್ರಯೋಜನ ಪಡೆಯುತ್ತದೆ.

 

*****(Release ID: 1820734) Visitor Counter : 179