ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

‘ಬೊಹಾಗ್ ಬಿಹು’ ಹೊಸ ವರ್ಷಾಚರಣೆ; ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಜನತೆಗೆ ಪ್ರಧಾನ ಮಂತ್ರಿ ಶುಭಾಶಯ

Posted On: 14 APR 2022 9:12AM by PIB Bengaluru

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹೊಸ ವರ್ಷ ಆಚರಿಸುವ ಸಾಂಪ್ರದಾಯಿಕ ಜನಾಂಗೀಯ ಹಬ್ಬ ‘ಬೊಹಾಗ್ ಬಿಹು’ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಶುಭಶಯ ಕೋರಿದ್ದಾರೆ. ಈ ವಿಶೇಷ ಹಬ್ಬವು ಅಸ್ಸಾಂ ಜನರ ರೋಮಾಂಚಕ  ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಆನಂದ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಅವರು ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಅವರು; 
 
ಬೊಹಾಗ್ ಬಿಹು ಹಬ್ಬ ಸಂತಸ ತರಲಿ!
ಈ ಹಬ್ಬವು ಅಸ್ಸಾಂ ಜನತೆಯ ರೋಮಾಂಚಕ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ.
ಪ್ರತಿಯೊಬ್ಬರಿಗೂ ಸಂತಸ, ಆನಂದ ಮತ್ತು ಉತ್ತಮ ಆರೋಗ್ಯ ತರಲಿ ಎಂದು ಪ್ರಧಾನಿ ಅವರು ಹಾರೈಸಿದ್ದಾರೆ.

*****


(Release ID: 1816727) Visitor Counter : 214