ಸಂಪುಟ

ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ ಮತ್ತು ಕೆನಡಾದ ಮ್ಯಾನಿಟೋಬಾ ಭದ್ರತಾ ಆಯೋಗದ ನಡುವಿನ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದವನ್ನು ಸಂಪುಟ ಅನುಮೋದಿಸಿದೆ

Posted On: 13 APR 2022 3:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ, ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ ಮತ್ತು ಕೆನಡಾದ ಮ್ಯಾನಿಟೋಬಾ ಭದ್ರತಾ ಆಯೋಗ ನಡುವಿನ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ.

ಪ್ರಯೋಜನಗಳು:

* ಎಂಒಯು, ಭದ್ರತಾ ನಿಯಮಗಳ ಪ್ರದೇಶದಲ್ಲಿ ಗಡಿಯಾಚೆಗಿನ ಸಹಕಾರಕ್ಕಾಗಿ ಔಪಚಾರಿಕ ಆಧಾರವನ್ನು ಬಯಸುತ್ತದೆ. ಪರಸ್ಪರ ಸಹಾಯವನ್ನು ಸುಗಮಗೊಳಿಸುತ್ತದೆ. ಮೇಲ್ವಿಚಾರಣಾ ಕಾರ್ಯಗಳ ಸಮರ್ಥ ಕಾರ್ಯಕ್ಷಮತೆಗೆ ಕೊಡುಗೆ ನೀಡುತ್ತದೆ. ತಾಂತ್ರಿಕ ಕಾರ್ಯಕ್ಷೇತ್ರದ ಜ್ಞಾನವನ್ನು ನೀಡಲು ಸಹಾಯ ಮಾಡುತ್ತದೆ ಮತ್ತು ಭದ್ರತಾ ಮಾರುಕಟ್ಟೆಗಳನ್ನು ನಿಯಂತ್ರಿಸುವ ಕಾನೂನುಗಳು ಮತ್ತು ನಿಬಂಧನೆಗಳ ಪರಿಣಾಮಕಾರಿ ಜಾರಿಯನ್ನು ಸಕ್ರಿಯಗೊಳಿಸುತ್ತದೆ.

* ಎಂಒಯು ಮ್ಯಾನಿಟೋಬಾದ ಹೂಡಿಕೆದಾರರನ್ನು ಸೆಬಿಯೊಂದಿಗೆ ಎಫ್‌ಪಿಐ ಆಗಿ ನೋಂದಣಿಗೆ ಅರ್ಹರನ್ನಾಗಿ ಮಾಡುತ್ತದೆ.

ಪರಿಣಾಮ:

ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದಲ್ಲಿರುವ ಘಟಕಗಳು ಸೆಬಿಯೊಂದಿಗೆ ವಿದೇಶಿ ಬಂಡವಾಳ ಹೂಡಿಕೆದಾರರಾಗಿ (FPI) ನೋಂದಣಿಗೆ ಅಪೇಕ್ಷಿಸುತ್ತವೆ. ವಿದೇಶಿ ರಾಷ್ಟ್ರ / ಪ್ರಾಂತ್ಯದ ಭದ್ರತಾ ಮಾರುಕಟ್ಟೆ ನಿಯಂತ್ರಕವು ಭದ್ರತಾ ಆಯೋಗದ ಅಂತಾರಾಷ್ಟ್ರೀಯ ಸಂಸ್ಥೆಯ ಬಹುಪಕ್ಷೀಯ ತಿಳಿವಳಿಕೆಯ ಜ್ಞಾಪನ ಪತ್ರಕ್ಕೆ (IOSCO MMOU) ಸಹಿ ಮಾಡಬೇಕೆಂಬುದು ಪೂರ್ವ-ಷರತ್ತುಗಳಲ್ಲಿ ಒಂದಾಗಿದೆ. ಮ್ಯಾನಿಟೋಬಾದ ಘಟಕಗಳನ್ನು ಸೆಬಿಯೊಂದಿಗೆ ಎಫ್ ಪಿಐ ಆಗಿ ನೋಂದಾಯಿಸಲು ಅನುಮತಿ ನೀಡಲು ಸೆಬಿಯೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದು ಅತ್ಯಗತ್ಯ.

ಸುಮಾರು ಇಪ್ಪತ್ತು ಮ್ಯಾನಿಟೋಬಾ-ಸ್ಥಳೀಯ ಎಫ್‌ಪಿಐಗಳು 2,665 ಕೋಟಿ ರೂಪಾಯಿ ಕಸ್ಟಡಿ ಅಡಿಯಲ್ಲಿ ಒಟ್ಟು ಆಸ್ತಿಯನ್ನು ಹೊಂದಿರುವ ಈ ದ್ವಿಪಕ್ಷೀಯ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪ್ರಯೋಜನ ಪಡೆಯುವ  ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಹೂಡಿಕೆಯನ್ನು ಮುಂದುವರಿಸಲು ಅರ್ಹರಾಗಿರುತ್ತಾರೆ.

***



(Release ID: 1816530) Visitor Counter : 172