ಪ್ರಧಾನ ಮಂತ್ರಿಯವರ ಕಛೇರಿ
ಮ್ವಾಲಿಮು ನೈರೆರೆ ಅವರ 100ನೇ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
13 APR 2022 1:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೇಷ್ಠ ನಾಯಕ ಮತ್ತು ಭಾರತದ ಮಿತ್ರ ಮ್ವಾಲಿಮು ನೈರೆರೆ ಅವರ 100ನೇ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ್ದಾರೆ. ಮ್ವಾಲಿಮು ನೈರೆರೆ ಅವರ ಏಕತೆ ಮತ್ತು ಸಮಾನತೆಯ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರ ಜೀವನ ಮತ್ತು ಕಾರ್ಯವು ನಮಗೆಲ್ಲರಿಗೂ ನಿರಂತರ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ.
“ಮ್ವಾಲಿಮು ನೈರೆರೆ ಅವರ ಜೀವನ ಮತ್ತು ಅವರ ಕಾರ್ಯವು ನಮಗೆಲ್ಲರಿಗೂ ನಿರಂತರ ಸ್ಫೂರ್ತಿಯಾಗಿದೆ. ಅವರು ಪ್ರತಿಪಾದಿಸಿದ ಏಕತೆ ಮತ್ತು ಸಮಾನತೆಯ ತತ್ವಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಅವರ 100 ನೇ ಜಯಂತಿಯಂದು ಶ್ರೇಷ್ಠ ನಾಯಕ ಮತ್ತು ಭಾರತದ ಮಿತ್ರನಿಗೆ ನನ್ನ ನಮನಗಳು’’
*****
(ಪ್ರಕಟಣೆ ಐ.ಡಿ.: 1816355)
ವಿಸಿಟರ್ ಕೌಂಟರ್ : 197
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam