ಸಂಪುಟ
azadi ka amrit mahotsav

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 01.01.2022 ರಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರದ ಹೆಚ್ಚುವರಿ ಕಂತಿನ ಬಿಡುಗಡೆಗೆ ಸಂಪುಟದ ಅನುಮೋದನೆ

प्रविष्टि तिथि: 30 MAR 2022 2:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಲೆ ಏರಿಕೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿ.ಆರ್)ದ ಹೆಚ್ಚುವರಿ ಕಂತನ್ನು 01.01.2022 ರಿಂದ ಅನ್ವಯವಾಗುವಂತೆ ಹಾಲಿ ಇರುವ ಮೂಲ ವೇತನ/ಪಿಂಚಣಿಯ ಶೇ.31ರ ದರಕ್ಕೆ ಶೇ.3ರಷ್ಟು ಹೆಚ್ಚಳ ಮಾಡಿ ನೀಡಲು ತನ್ನ ಅನುಮೋದನೆ ನೀಡಿದೆ.
ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಒಪ್ಪಿತ ಸೂತ್ರಕ್ಕೆ ಅನುಗುಣವಾಗಿದೆ.
ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರಗಳೆರಡರಿಂದಲೂ ಬೊಕ್ಕಸದ ಮೇಲೆ ಉಂಟಾಗುವ ಒಟ್ಟಾರೆ ಹೊರೆ ವಾರ್ಷಿಕ 9,544.50 ಕೋಟಿ ರೂ.ಗಳಾಗಿರುತ್ತದೆ. ಇದರಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.


*****


(रिलीज़ आईडी: 1811528) आगंतुक पटल : 481
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Malayalam