ಪ್ರಧಾನ ಮಂತ್ರಿಯವರ ಕಛೇರಿ

ಭಾರತವು 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿರುವುದಕ್ಕೆ ರೈತರು, ನೇಕಾರರು, MSME(ಸಣ್ಣ ಅತಿ ಸಣ್ಣ ಮಧ್ಯಮ ಉದ್ಯಮಗಳು) ಗಳು, ತಯಾರಕರು, ರಫ್ತುದಾರರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

Posted On: 23 MAR 2022 9:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು, ರಫ್ತುದಾರರನ್ನು ಶ್ಲಾಘಿಸಿದ್ದಾರೆ. ಏಕೆಂದರೆ ಭಾರತವು ನಿಗದಿತ ಸಮಯಕ್ಕಿಂತ 9 ದಿನಗಳ ಮುಂಚಿತವಾಗಿ 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ ;

" ಭಾರತವು 400 ಶತಕೋಟಿ  ರೂಪಾಯಿ ಮೌಲ್ಯದ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು ಮತ್ತು ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ. ಈ ಯಶಸ್ಸಿಗಾಗಿ ನಾನು ನಮ್ಮ ರೈತರು, ನೇಕಾರರು, MSMEಗಳು, ತಯಾರಕರು, ರಫ್ತುದಾರರನ್ನು ಅಭಿನಂದಿಸುತ್ತೇನೆ.

ಇದು ನಮ್ಮ ಆತ್ಮನಿರ್ಭರ ಭಾರತ ಪಯಣದಲ್ಲಿ ಪ್ರಮುಖ ಮೈಲಿಗಲ್ಲು. #ಲೋಕಲ್ ಗೋಸ್ ಗ್ಲೋಬಲ್" ಎಂದಿದ್ದಾರೆ.

****



(Release ID: 1808545) Visitor Counter : 186