ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರು ಕಚ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು


"ಮಹಿಳೆಯರು ನೈತಿಕತೆ, ನಿಷ್ಠೆ, ನಿರ್ಣಾಯಕತೆ ಮತ್ತು ನಾಯಕತ್ವದ ಪ್ರತಿಬಿಂಬ"

"ನಮ್ಮ ವೇದಗಳು ಮತ್ತು ಸಂಪ್ರದಾಯಗಳು, ಮಹಿಳೆಯರು ರಾಷ್ಟ್ರಕ್ಕೆ ನಿರ್ದೇಶನ ನೀಡಲು ಸಮರ್ಥರಾಗಿರಬೇಕು ಮತ್ತು ಸಮರ್ಥವಾಗಿರಬೇಕು ಎಂದು ಕರೆ ನೀಡಿವೆ"

"ಮಹಿಳೆಯರ ಪ್ರಗತಿಯು ಯಾವಾಗಲೂ ರಾಷ್ಟ್ರದ ಸಬಲೀಕರಣಕ್ಕೆ ಶಕ್ತಿಯನ್ನು ನೀಡುತ್ತದೆ"

"ಇಂದು ದೇಶದ ಆದ್ಯತೆಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆಯಲ್ಲಿದೆ"

"ಸ್ಟ್ಯಾಂಡಪ್ ಇಂಡಿಯಾ' ಅಡಿಯಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಸಾಲಗಳು ಮಹಿಳೆಯರ ಹೆಸರಿನಲ್ಲಿವೆ. ಮುದ್ರಾ ಯೋಜನೆ ಅಡಿಯಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸುಮಾರು ಶೇಕಡ 70 ರಷ್ಟು ಸಾಲವನ್ನು ನೀಡಲಾಗಿದೆ

Posted On: 08 MAR 2022 6:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಚ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಭೆಗೆ ಶುಭಾಶಯ ಕೋರಿದರು. ಮಾತೃಶಕ್ತಿಯ ರೂಪದಲ್ಲಿ ಮಾ ಆಶಾಪುರ ಇಲ್ಲಿ ಇರುವುದರಿಂದ ಅವರು ಶತಮಾನಗಳಿಂದಲೂ ನಾರಿ ಶಕ್ತಿಯ ಸಂಕೇತವಾಗಿ ಕಚ್ ಭೂಮಿಯ ವಿಶೇಷ ಸ್ಥಳವನ್ನು ಗುರುತಿಸಿದರು. "ಇಲ್ಲಿನ ಮಹಿಳೆಯರು ಇಡೀ ಸಮಾಜಕ್ಕೆ ಕಠಿಣ ನೈಸರ್ಗಿಕ ಸವಾಲುಗಳೊಂದಿಗೆ ಬದುಕಲು ಕಲಿಸಿದ್ದಾರೆ, ಹೋರಾಡಲು ಕಲಿಸಿದ್ದಾರೆ ಮತ್ತು ಗೆಲ್ಲಲು ಕಲಿಸಿದ್ದಾರೆ" ಎಂದು ಅವರು ಹೇಳಿದರು. ನೀರಿನ ಸಂರಕ್ಷಣೆಯ ಅನ್ವೇಷಣೆಯಲ್ಲಿ ಕಚ್‌ನ ಮಹಿಳೆಯರ ಪಾತ್ರವನ್ನು ಅವರು ಶ್ಲಾಘಿಸಿದರು. ಗಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪ್ರಧಾನಿಯವರು 1971ರ ಯುದ್ಧದಲ್ಲಿ ಪ್ರದೇಶದ ಮಹಿಳೆಯರ ಕೊಡುಗೆಯನ್ನು ಸ್ಮರಿಸಿದರು.

ಮಹಿಳೆಯರು ನೈತಿಕತೆ, ನಿಷ್ಠೆ, ನಿರ್ಣಾಯಕತೆ ಮತ್ತು ನಾಯಕತ್ವದ ಪ್ರತಿಬಿಂಬ ಎಂದು ಪ್ರಧಾನಿ ಪ್ರತಿಪಾದಿಸಿದರು. ಅದಕ್ಕಾಗಿಯೇ ನಮ್ಮ ವೇದಗಳು ಮತ್ತು ಸಂಪ್ರದಾಯಗಳು, ಮಹಿಳೆಯರು ಶಕ್ತರಾಗಿರಬೇಕು, ರಾಷ್ಟ್ರಕ್ಕೆ ನಿರ್ದೇಶನ ನೀಡಲು ಸಮರ್ಥರಾಗಿರಬೇಕು ಎಂದು ಕರೆ ನೀಡಿವೆ ಎಂದು ಅವರು ಹೇಳಿದರು.

ಉತ್ತರದ ಮೀರಾಬಾಯಿಯಿಂದ ಹಿಡಿದು ದಕ್ಷಿಣದ ಸಂತ ಅಕ್ಕ ಮಹಾದೇವಿಯವರೆಗೆ ಭಾರತದ ದೈವಿಕ ಮಹಿಳೆಯರು ಭಕ್ತಿ ಚಳವಳಿಯಿಂದ ಜ್ಞಾನ ದರ್ಶನದವರೆಗೆ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆಗೆ ಧ್ವನಿ ನೀಡಿದ್ದಾರೆ ಎಂದು ಪ್ರಧಾನಿ ಇತಿಹಾಸವನ್ನು ಮೆಲುಕು ಹಾಕಿದರು. ಅಂತೆಯೇ, ಕಚ್ ಮತ್ತು ಗುಜರಾತ್ ಭೂಮಿ ಸತಿ ತೋರಲ್, ಗಂಗಾ ಸತಿ, ಸತಿ ಲೋಯನ್, ರಾಂಬಾಯಿ ಮತ್ತು ಲಿರ್ಬಾಯಿಯಂತಹ ದೈವಿಕ ಸ್ತ್ರೀಯರಿಗೆ ಸಾಕ್ಷಿಯಾಗಿದೆ. ದೇಶದ ಅಸಂಖ್ಯಾತ ದೇವತೆಗಳ ಪ್ರತೀಕವಾದ ನಾರಿ ಪ್ರಜ್ಞೆಯು ಸ್ವಾತಂತ್ರ್ಯ ಹೋರಾಟದ ಜ್ವಾಲೆಯನ್ನು ಉರಿಯುವಂತೆ ಮಾಡಿದೆ ಎಂದು ಅವರು ಹೇಳಿದರು.

ಭೂಮಿಯನ್ನು ತಾಯಿ ಎಂದು ಪರಿಗಣಿಸುವ ರಾಷ್ಟ್ರದಲ್ಲಿ ಅಲ್ಲಿನ ಮಹಿಳೆಯರ ಪ್ರಗತಿಯು ರಾಷ್ಟ್ರದ ಸಬಲೀಕರಣಕ್ಕೆ ಸದಾ ಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. “ಇಂದು ದೇಶದ ಆದ್ಯತೆ ಮಹಿಳೆಯರ ಜೀವನವನ್ನು ಸುಧಾರಿಸುವುದು. ಇಂದು ದೇಶದ ಆದ್ಯತೆಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆಯಲ್ಲಿದೆ” ಎಂದು ಅವರು ತಿಳಿಸಿದರು. 11 ಕೋಟಿ ಶೌಚಾಲಯಗಳು, 9 ಕೋಟಿ ಉಜ್ವಲಾ ಅನಿಲ ಸಂಪರ್ಕಗಳು, 23 ಕೋಟಿ ಜನ್ ಧನ್ ಖಾತೆಗಳ ತೆರೆಯುವಿಕೆ ಮಹಿಳೆಯರಿಗೆ ಘನತೆ ಮತ್ತು ಜೀವನವನ್ನು ಸುಲಭಗೊಳಿಸುವ ಹಂತಗಳೆಂದು ಅವರು ಉಲ್ಲೇಖಿಸಿದರು.

ಮಹಿಳೆಯರು ಮುಂದೆ ಸಾಗಲು, ಅವರ ಕನಸುಗಳನ್ನು ನನಸಾಗಿಸಲು ಮತ್ತು ಸ್ವಂತ ಕೆಲಸವನ್ನು ಪ್ರಾರಂಭಿಸಲು ಸರ್ಕಾರ ಅವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. "ಸ್ಟ್ಯಾಂಡಪ್ ಇಂಡಿಯಾ' ಅಡಿಯಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಸಾಲಗಳು ಮಹಿಳೆಯರ ಹೆಸರಿನಲ್ಲಿವೆ. ಮುದ್ರಾ ಯೋಜನೆಯಡಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸುಮಾರು ಶಕಡ 70 ರಷ್ಟು ಸಾಲವನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಅದೇ ರೀತಿ, PMAY ಅಡಿಯಲ್ಲಿ ನಿರ್ಮಿಸಲಾದ 2 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ. ಇದೆಲ್ಲವೂ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ.

ಸರ್ಕಾರವು ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸುವ ಅವಕಾಶವೂ ಇದೆ. ಪುತ್ರರು ಮತ್ತು ಪುತ್ರಿಯರು ಸಮಾನರು ಎಂದು ಪರಿಗಣಿಸಿದ ಪ್ರಧಾನಿ, ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಇಂದು, ದೇಶವು ಸಶಸ್ತ್ರ ಪಡೆಗಳಲ್ಲಿ ಹುಡುಗಿಯರಿಗೆ ಹೆಚ್ಚಿನ ಪಾತ್ರಗಳನ್ನು ಉತ್ತೇಜಿಸುತ್ತಿದೆ, ಸೈನಿಕ ಶಾಲೆಗಳಲ್ಲಿ ಹುಡುಗಿಯರ ಪ್ರವೇಶ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ನಡೆಯುತ್ತಿರುವ ಅಪೌಷ್ಟಿಕತೆಯ ವಿರುದ್ಧದ ಅಭಿಯಾನಕ್ಕೆ ಜನರು ಸಹಾಯ ಮಾಡುವಂತೆ ಪ್ರಧಾನಿ ಒತ್ತಾಯಿಸಿದರು. ಬೇಟಿ ಬಚಾವೋ ಬೇಟಿ ಪಢಾವೋದಲ್ಲಿ ಮಹಿಳೆಯರ ಪಾತ್ರವನ್ನು ಅವರು ಒತ್ತಿ ಹೇಳಿದರು. ‘ಕನ್ಯಾ ಶಿಕ್ಷಾ ಪ್ರವೇಶ ಉತ್ಸವ ಅಭಿಯಾನ’ದಲ್ಲಿ ಪಾಲ್ಗೊಳ್ಳುವಂತೆಯೂ ಕೋರಿದರು.

'ಲೋಕಲ್ ಫಾರ್ ವೋಕಲ್' ಆರ್ಥಿಕತೆಗೆ ಸಂಬಂಧಿಸಿದ ದೊಡ್ಡ ವಿಷಯವಾಗಿದೆ. ಆದರೆ ಇದು ಮಹಿಳಾ ಸಬಲೀಕರಣದೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಹೆಚ್ಚಿನ ಸ್ಥಳೀಯ ಉತ್ಪನ್ನಗಳ ಶಕ್ತಿ ಮಹಿಳೆಯರ ಕೈಯಲ್ಲಿದೆ ಎಂದು ಅವರು ಹೇಳಿದರು.

ಸಮಾರೋಪದಲ್ಲಿ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂತ ಪರಂಪರೆಯ ಪಾತ್ರದ ಕುರಿತು ಮಾತನಾಡಿದರು ಮತ್ತು ಭಾಗವಹಿಸುವವರಿಗೆ ರಾನ್ ಆಫ್ ಕಚ್‌ನ ಸೌಂದರ್ಯ ಮತ್ತು ಆಧ್ಯಾತ್ಮಿಕ ವೈಭವವನ್ನು ಅನುಭವಿಸುವಂತೆ ವಿನಂತಿದರು.

***



(Release ID: 1804150) Visitor Counter : 220