ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ರೇಡಿಯೋ ದಿನದಂದು ಬಾನುಲಿಯ ಶ್ರೋತೃಗಳಿಗೆ ಮತ್ತು ಈ ಅದ್ಭುತ ಮಾಧ್ಯಮವನ್ನು ಶ್ರೀಮಂತಗೊಳಿಸಿದವರಿಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
13 FEB 2022 3:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಬಾನುಲಿಯ ಶ್ರೋತೃಗಳು ಮತ್ತು ಆ ಅದ್ಭುತ ಮಾಧ್ಯಮವನ್ನು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದವರಿಗೆ ಶುಭ ಕೋರಿದ್ದಾರೆ.
ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಎಲ್ಲ ರೇಡಿಯೋ ಶ್ರೋತೃಗಳಿಗೆ ಮತ್ತು ಈ ಅದ್ಭುತ ಮಾಧ್ಯಮವನ್ನು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ ಎಲ್ಲರಿಗೂ ವಿಶ್ವ ರೇಡಿಯೋ ದಿನದ ಶುಭಾಶಯಗಳು. ಅದು ಮನೆಯೇ ಆಗಿರಲಿ, ಪ್ರಯಾಣವೇ ಆಗಿರಲಿ ಅಥವಾ ಇನ್ನಾವುದೇ ಸಂದರ್ಭವಿರಲಿ, ರೇಡಿಯೋ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಜನರನ್ನು ಬೆಸೆಯುವ ಅದ್ಭುತ ಮಾಧ್ಯಮವಾಗಿದೆ."
" #ಮನ್ ಕಿ ಬಾತ್ ನಿಂದಾಗಿ, ಸಕಾರಾತ್ಮಕತೆಯನ್ನು ಹಂಚಿಕೊಳ್ಳಲು ಮತ್ತು ಇತರರ ಜೀವನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವಲ್ಲಿ ಮುಂಚೂಣಿಯಲ್ಲಿರುವವರನ್ನು ಗುರುತಿಸಲು ರೇಡಿಯೋ ಹೇಗೆ ಉತ್ತಮ ಮಾಧ್ಯಮವಾಗಿದೆ ಎಂಬುದನ್ನು ನಾನು ಪದೇ ಪದೇ ನೋಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ." ಎಂದು ತಿಳಿಸಿದ್ದಾರೆ.
****
(Release ID: 1798154)
Visitor Counter : 196
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam