ಪ್ರಧಾನ ಮಂತ್ರಿಯವರ ಕಛೇರಿ

ತೆಲಂಗಾಣದ ಹೈದರಾಬಾದಿನ ಐ.ಸಿ.ಆರ್.ಐ.ಎಸ್.ಎ.ಟಿ.ಯ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 05 FEB 2022 6:26PM by PIB Bengaluru

ತೆಲಂಗಾಣ ರಾಜ್ಯಪಾಲರಾದ ಡಾ. ತಮಿಳಿಸಾಯಿ ಸೌಂದರ್ಯರಾಜನ್ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ನರೇಂದ್ರ ಸಿಂಗ್ ತೋಮರ್ ಜೀ, ಮತ್ತು ಜಿ. ಕೃಷ್ಣ ರೆಡ್ಡಿ ಜೀ, .ಸಿ.ಆರ್..ಎಸ್..ಟಿ. ಮಹಾನಿರ್ದೇಶಕರೇ, ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಸೇರಿಕೊಂಡಿರುವ ದೇಶದ ಮತ್ತು ವಿದೇಶಗಳ ಅದರಲ್ಲು ವಿಶೇಷವಾಗಿ ಆಫ್ರಿಕನ್ ದೇಶಗಳ ಗಣ್ಯರೇ, ಮತ್ತು ಇಲ್ಲಿರುವ ಮಹಿಳೆಯರೇ ಹಾಗು ಮಹನೀಯರೇ!.

ಇಂದು ಬಸಂತ ಪಂಚಮಿಯ ಪವಿತ್ರ ಹಬ್ಬ. ಇಂದು ನಾವು ಜ್ಞಾನ ದೇವತೆಯಾದ ಸರಸ್ವತಿ ದೇವಿಯನ್ನು ಆರಾಧಿಸುತ್ತೇವೆ. ನೀವು ಜ್ಞಾನ, ವಿಜ್ಞಾನ, ಅನ್ವೇಷಣಾ ಮತ್ತು ಸಂಶೋಧನೆಯನ್ನೆ ಕೇಂದ್ರವಾಗಿರಿಸಿಕೊಂಡ  ಕ್ಷೇತ್ರಕ್ಕೆ ಸಂಬಂಧಪಟ್ಟವರಾದ ಕಾರಣ, ಕಾರ್ಯಕ್ರಮಕ್ಕೆ ಬಸಂತ ಪಂಚಮಿಯ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ. ನಿಮಗೆಲ್ಲರಿಗೂ ಸುವರ್ಣ ಮಹೋತ್ಸವ ಆಚರಣೆಯ ಶುಭಾಶಯಗಳು!.

ಸ್ನೇಹಿತರೇ,

ಐವತ್ತು ವರ್ಷಗಳೆಂದರೆ ಬಹಳ ದೀರ್ಘಾವಧಿ. ಐವತ್ತು ವರ್ಷಗಳ ಪ್ರಯಾಣದಲ್ಲಿ ತಮ್ಮ ಕೊಡುಗೆ ನೀಡಿದವರೆಲ್ಲರೂ ಅಭಿನಂದನೆಗೆ ಅರ್ಹರಾದವರು. ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನದಲ್ಲಿ ಸಹಭಾಗಿಯಾದವರಿಗೆಲ್ಲ ನನ್ನ ಅಭಿನಂದನೆಗಳು. ಭಾರತವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುತ್ತಿರುವಾಗ ನಿಮ್ಮ ಸಂಸ್ಥೆಯು 50 ವರ್ಷಗಳ ಮಹತ್ವದ ಮೈಲಿಗಲ್ಲಿನಲ್ಲಿರುವುದು ಬಹಳ ಸುಂದರ ಮತ್ತು ಅಪೂರ್ವ ಯೋಗಾಯೋಗದ ಸಂದರ್ಭ. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನಾಚರಿಸುತ್ತಿರುವಾಗ ನೀವು ಇದರ 75 ನೇ ವರ್ಷಾಚರಣೆಯಲ್ಲಿ ಇರುತ್ತೀರಿ. ಭಾರತವು ಮುಂದಿನ 25 ವರ್ಷಗಳಿಗೆ ಹೊಸ ಗುರಿಗಳನ್ನು ನಿಗದಿ ಮಾಡಿಕೊಂಡಿರುವಂತೆ ಮತ್ತು ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವಂತೆ, ಮುಂದಿನ 25 ವರ್ಷಗಳು .ಸಿ.ಆರ್..ಎಸ್..ಟಿ.ಗೂ ಕೂಡಾ ಅಷ್ಟೇ ಮಹತ್ವದವು.

ಸ್ನೇಹಿತರೇ,

ನಿಮಗೆ ಐದು ದಶಕಗಳ ಅನುಭವವಿದೆ. ಐದು ದಶಕಗಳಲ್ಲಿ ನೀವು ಭಾರತ ಸಹಿತ ಜಗತ್ತಿನ ವಿಶಾಲ ಭಾಗಗಳಲ್ಲಿ  ಕೃಷಿ ರಂಗಕ್ಕೆ ಸಹಾಯ ಮಾಡಿದ್ದೀರಿ. ನಿಮ್ಮ ಸಂಶೋಧನೆ ಮತ್ತು ತಂತ್ರಜ್ಞಾನ ಕೃಷಿಯನ್ನು ಸುಲಭ ಸಾಧ್ಯ ಮಾಡಿದೆ ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಸುಸ್ಥಿರವಾಗಿಸಿದೆ.ಇಲ್ಲಿ ಪ್ರದರ್ಶಿತವಾದ ತಂತ್ರಜ್ಞಾನ .ಸಿ.ಆರ್..ಎಸ್..ಟಿ. ಪ್ರಯತ್ನಗಳನ್ನು ಪ್ರತಿನಿಧಿಸುತ್ತದೆ. ಸಮಗ್ರ ಧೋರಣೆ, ಅದು ನೀರಿಗೆ ಸಂಬಂಧಿಸಿದ್ದಿರಲಿ ಮತ್ತು ಮಣ್ಣಿನ ನಿರ್ವಹಣೆ ಇರಲಿ, ಬೆಳೆ ವೈವಿಧ್ಯ ಸುಧಾರಣೆ ಮತ್ತು ಉತ್ಪಾದನಾ ವಿಧಾನಗಳ ಸುಧಾರಣೆ, ಕೃಷಿಯಲ್ಲಿ ವೈವಿಧ್ಯತೆಯ ಹೆಚ್ಚಳ, ಜಾನುವಾರುಗಳ ಸಮಗ್ರೀಕರಣ ಮತ್ತು ರೈತರನ್ನು ಮಾರುಕಟ್ಟೆಗೆ  ಬೆಸೆಯುವುದು ಇರಲಿ ಅದು ಖಂಡಿತವಾಗಿಯೂ ಕೃಷಿಯನ್ನು ಸಹ್ಯ ಮತ್ತು ಸುಸ್ಥಿರಗೊಳಿಸುತ್ತದೆ. ಬೇಳೆ ಕಾಳುಗಳು, ದ್ವಿದಳ ಧಾನ್ಯಗಳು, ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಬೆಳೆಯುವ ಕಡಲೆ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆ ಬಹಳ ಮಹತ್ವದ್ದು. .ಸಿ.ಆರ್..ಎಸ್..ಟಿ. ರೀತಿಯ ಸಂಯೋಜಿತ ಮತ್ತು ಸಹಯೋಗದ ಪ್ರಯತ್ನಗಳು ಹಾಗು ಧೋರಣೆಗಳು ಕೃಷಿಯನ್ನು ಬಲಪಡಿಸಿವೆ ಮತ್ತು ಶ್ರೀಮಂತಗೊಳಿಸಿವೆ. ಬೆಳೆ ರಕ್ಷಣೆ ಮತ್ತು ತ್ವರಿತ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಲಾಗಿದೆ. ಸಂಶೋಧನಾ ಸೌಲಭ್ಯಗಳು ವಾತಾವರಣ ಬದಲಾವಣೆಯ ಸವಾಲನ್ನು ಎದುರಿಸಲು ಕೃಷಿ ಜಗತ್ತಿಗೆ ಬಹಳ ದೊಡ್ಡ ಸಹಾಯವನ್ನು ಮಾಡಲಿವೆ. ವಾತಾವರಣ ಬದಲಾವಣೆಯ ಹಿನ್ನೆಲೆಯಲ್ಲಿ ನಮ್ಮ ಕೃಷಿ ಪದ್ಧತಿಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ನಿಮಗೆಲ್ಲ ತಿಳಿದಿದೆ. ಅದೇ ರೀತಿ ಭಾರತವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ವಾತಾವರಣ ಬದಲಾವಣೆಯ ಕಾರಣದಿಂದುಂಟಾಗುವ ಮಾನವ ಜೀವಹಾನಿಯ ಬಗ್ಗೆ ಕಾರ್ಯಕ್ರಮದಲ್ಲಿ ವಿಸ್ತಾರವಾಗಿ ಚರ್ಚಿಸಲ್ಪಡುವಂತೆಯೇ, ಮೂಲ ಸೌಕರ್ಯಗಳಿಗೆ ಆಗುವ ಹಾನಿ ಇಡೀ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡುತ್ತದೆ. ಆದುದರಿಂದ ಭಾರತ ಸರಕಾರವು ವಾತಾವರಣ ಬದಲಾವಣೆಯನ್ನು ಎದುರಿಸಬಲ್ಲ ಮತ್ತು ಪುನಶ್ಚೇತನಗೊಳಿಸಬಹುದಾದಂತಹ ಮೂಲಸೌಕರ್ಯಗಳ ನಿರ್ಮಾಣಕ್ಕೆ ಜಾಗತಿಕ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ. ಅದು ಪರಿಶೀಲನೆ ನಡೆಸಿ ಯೋಜನೆಗಳನ್ನು ರೂಪಿಸುತ್ತದೆ. ಇಂದು ಕೃಷಿ ವಲಯಕ್ಕೂ ಅಂತಹದೇ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ. ನೀವೆಲ್ಲರೂ ಅಭಿನಂದನೆಗೆ ಅರ್ಹರು.

ಸ್ನೇಹಿತರೇ,

ವಾತಾವರಣ ಬದಲಾವಣೆಯು ಜಗತ್ತಿನ ಪ್ರತೀಯೊಬ್ಬ ನಿವಾಸಿಯನ್ನು ಬಾಧಿಸುತ್ತದೆಯಾದರೂ, ಅದರ ಪರಿಣಾಮ  ಹೆಚ್ಚಾಗಿ ತಟ್ಟುವುದು ಸಮಾಜದ ಕೊನೆಯ ವರ್ತುಲದಲ್ಲಿರುವ ವ್ಯಕ್ತಿಗಳಿಗೆ. ಅವರಲ್ಲಿ ಸಂಪನ್ಮೂಲಗಳು ಇರುವುದಿಲ್ಲ ಮತ್ತು ಅವರು ಅಭಿವೃದ್ಧಿಯ ಏಣಿಯನ್ನು ಹತ್ತಲು ಬಹಳ ಪ್ರಯಾಸ ಪಡುತ್ತಿರುತ್ತಾರೆ. ಇಂತಹ ಬಹಳ ದೊಡ್ಡ ಸಂಖ್ಯೆಯ ಜನ ಸಮೂಹ ನಮ್ಮ ಸಣ್ಣ ರೈತರನ್ನು ಒಳಗೊಂಡಿರುತ್ತದೆ. ಮತ್ತು ಭಾರತದ 80-85% ರೈತರು ಸಣ್ಣ ರೈತರು. ವಾತಾವರಣ ಬದಲಾವಣೆ ನಮ್ಮ ಸಣ್ಣ ರೈತರಿಗೆ ಬಹಳ ದೊಡ್ಡ ಸಮಸ್ಯೆ. ಆದುದರಿಂದ ಭಾರತವು ವಾತಾವರಣ ಬದಲಾವಣೆಯನ್ನು ನಿಭಾಯಿಸಲು  ಬಗ್ಗೆ ವಿಶೇಷ ಗಮನವನ್ನು ಹರಿಸಬೇಕು ಎಂದು ವಿಶ್ವಕ್ಕೆ ಮನವಿ ಮಾಡಿದೆ. ಭಾರತವು 2070 ವೇಳೆಗೆ ಶೂನ್ಯ (ವಿಸರ್ಜನೆ) ಗುರಿಯನ್ನು ನಿಗದಿ ಮಾಡಿರುವುದಲ್ಲದೆ, ನಾವು ಲೈಫ್ ಆಂದೋಲನದ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪಿಸಿದ್ದೇವೆ, ಅಂದರೆ ಪರಿಸರಕ್ಕಾಗಿ ಜೀವನ ವಿಧಾನದ ಆವಶ್ಯಕತೆಯನ್ನು ಪ್ರತಿಪಾದಿಸಿದ್ದೇವೆ. ಅದೇ ರೀತಿ ಭೂಗ್ರಹ ಪರವಾದ ಜನರು ಎಂಬ ಆಂದೋಲನವು ಪ್ರತೀ ಸಮುದಾಯ ಮತ್ತು ಪ್ರತೀ ವ್ಯಕ್ತಿಯನ್ನು ವಾತಾವರಣ ಬದಲಾವಣೆಯ ಸವಾಲನ್ನು ನಿಭಾಯಿಸುವ ಜವಾಬ್ದಾರಿಯೊಂದಿಗೆ ಬೆಸೆಯುತ್ತದೆ. ಇದು ಬರೇ ಶಬ್ದಗಳಿಗೆ ಸೀಮಿತವಾದುದಲ್ಲ, ಇದು ಭಾರತ ಸರಕಾರದ ಕ್ರಮಗಳಲ್ಲಿ ಪ್ರತಿಫಲಿಸಿದೆ. ಕಳೆದ ಕೆಲವು ವರ್ಷಗಳ ಪ್ರಯತ್ನಗಳನ್ನು ಮುಂದುವರೆಸಿಕೊಂಡು ಹೋಗುತ್ತ ವರ್ಷದ ಬಜೆಟಿನಲ್ಲಿ ವಾತಾವರಣಕ್ಕೆ ಸಂಬಂಧಿಸಿದ ಕ್ರಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬಜೆಟ್ ಪ್ರತೀ ಹಂತದಲ್ಲಿ ಮತ್ತು ಪ್ರತೀ ವಲಯದಲ್ಲಿ ಹಸಿರು ಭವಿಷ್ಯಕ್ಕೆ ಭಾರತದ ಬದ್ಧತೆಗೆ ಉತ್ತೇಜನ ನೀಡುತ್ತದೆ.

ಸ್ನೇಹಿತರೇ,

ವಾತಾವರಣ ಮತ್ತು ಇತರ ಅಂಶಗಳಿಂದ ಎದುರಾಗುವ ಸವಾಲುಗಳನ್ನು ನಿಭಾಯಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ಎಲ್ಲಾ ತಜ್ಞರು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ತಿಳಿದೇ ಇದೆ.ಭಾರತದಲ್ಲಿ 15 ಕೃಷಿ ವಾತಾವರಣ ವಲಯಗಳಿರುವುದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ನಮ್ಮಲ್ಲಿ ಆರು ಋತುಗಳಿವೆ-ವಸಂತ, ಬೇಸಿಗೆ, ಮಾನ್ಸೂನ್, ಶರತ್ಕಾಲ, ಚಳಿಗಾಲ ಪೂರ್ವ ಮತ್ತು ಚಳಿಗಾಲ. ಕೃಷಿಗೆ ಸಂಬಂಧಿಸಿ ನಾವು ಬಹಳ ಪ್ರಾಚೀನವಾದ ಮತ್ತು ವೈವಿಧ್ಯಮಯವಾದ ಅನುಭವವನ್ನು ಹೊಂದಿದ್ದೇವೆ. .ಸಿ.ಆರ್..ಎಸ್..ಟಿ. ಯಂತಹ ಸಂಘಟನೆಗಳು ಅನುಭವ ಜಗತ್ತಿನ ಇತರ ದೇಶಗಳಿಗೂ ಲಭಿಸುವಂತೆ ಮಾಡಲು ಅವರ ಪ್ರಯತ್ನಗಳನ್ನು ವಿಸ್ತರಿಸಬೇಕು. ಇಂದು ನಾವು ದೇಶದ 170 ಜಿಲ್ಲೆಗಳಿಗೆ ಜಲ ಕ್ಷಾಮ ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ನಮ್ಮ ರೈತರನ್ನು ವಾತಾವರಣ ಬದಲಾವಣೆಯ ಸವಾಲುಗಳಿಂದ ರಕ್ಷಿಸಲುಮೂಲಕ್ಕೆ ಮರಳಿಮತ್ತುಭವಿಷ್ಯದತ್ತ ನಡೆಯಿರಿಎಂಬೆರಡರ ಸಮ್ಮಿಳನದ ಮೇಲೆ ನಮ್ಮ ಆದ್ಯತೆಯನ್ನು ಕೇಂದ್ರೀಕರಿಸಿದ್ದೇವೆ. ದೇಶದ 80 ಪ್ರತಿಶತಕ್ಕೂ ಅಧಿಕ ಸಣ್ಣ  ರೈತರಿಗೆ ನಮ್ಮ ಅವಶ್ಯಕತೆ ಹೆಚ್ಚು ಇದೆ, ಅವರ ಮೇಲೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ. ವರ್ಷದ ಬಜೆಟಿನಲ್ಲಿ ಸಹಜ ಕೃಷಿ ಮತ್ತು ಡಿಜಿಟಲ್ ಕೃಷಿಯ ಮೇಲೆ ಅಭೂತಪೂರ್ವ ಒತ್ತು ನೀಡಲಾಗಿರುವುದನ್ನು ನೀವು ಗಮನಿಸಿರಬಹುದು. ಒಂದೆಡೆ ನಾವು ಸಿರಿ.ಧಾನ್ಯಗಳ ವ್ಯಾಪ್ತಿಯನ್ನು ವಿಸ್ತರಿಸಲು, ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡುತ್ತಿದ್ದರೆ, ಇನ್ನೊಂದೆಡೆ ನಾವು ಕೃಷಿಯಲ್ಲಿ ಸೌರ ಪಂಪ್ ಗಳಿಂದ ಹಿಡಿದು ರೈತರ ಡ್ರೋನ್ ಗಳವರೆಗೆ ಆಧುನಿಕ ತಂತ್ರಜ್ಞಾನವನ್ನು ಪ್ರೋತ್ಸಾಹಿಸುತ್ತಿದ್ದೇವೆಸ್ವಾತಂತ್ರ್ಯದ ಮುಂದಿನ 25 ವರ್ಷಗಳ ಪುಣ್ಯಕರ ಅವಧಿಯಲ್ಲಿ ಕೃಷಿ ಅಭಿವೃದ್ಧಿಯಲ್ಲಿ ನಮ್ಮ ದೂರದೃಷ್ಟಿ  ಮತ್ತು ಚಿಂತನೆಯ ಬಹು ಮುಖ್ಯವಾದ ಭಾಗ ಇದಾಗಿದೆ.

ಸ್ನೇಹಿತರೇ,

ಪರಿವರ್ತನೆಯಾಗುತ್ತಿರುವ ಭಾರತದ ಒಂದು ಪ್ರಮುಖ ಸಂಗತಿ ಎಂದರೆ ಡಿಜಿಟಲ್ ಕೃಷಿ. ಇದು ನಮ್ಮ ಭವಿಷ್ಯ ಮತ್ತು ಭಾರತದ ಪ್ರತಿಭಾಶಾಲಿ ಯುವ ಜನತೆ ನಿಟ್ಟಿನಲ್ಲಿ ಬಹಳ ದೊಡ್ಡ ಕಾಣಿಕೆ ನೀಡಬಲ್ಲರು. ಭಾರತದ ರೈತರನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಶಕ್ತೀಕರಣಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಬೆಳೆ ಮೌಲ್ಯಮಾಪನದಲ್ಲಿ ಕೃತಕ ಬುದ್ಧಿಮತ್ತೆ, ಭೂದಾಖಲೆಗಳ ಡಿಜಿಟಲೀಕರಣ, ಡ್ರೋನ್ ಗಳ ಮೂಲಕ ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪರಣೆ ಸಹಿತ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ಕೃಷಿ ಸಂಶೋಧನೆಗೆ ಸಂಬಂಧಿಸಿದ ಪರಿಸರ ವ್ಯವಸ್ಥೆ, ಮತ್ತು ಖಾಸಗಿ ಕೃಷಿ ತಂತ್ರಜ್ಞಾನ ಕಂಪೆನಿಗಳು ಒಗ್ಗೂಡಿ ರೈತರಿಗೆ ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನ ಸೇವೆಯನ್ನು ಒದಗಿಸಲು ಕಾರ್ಯನಿರತವಾಗಿವೆ. .ಸಿ..ಆರ್ ಮತ್ತು .ಸಿ.ಆರ್..ಎಸ್..ಟಿ. ಗಳ ಸಹಭಾಗಿತ್ವ ಉತ್ತಮ ಬೀಜಗಳು, ಹೆಚ್ಚಿನ ಇಳುವರಿಯನ್ನು ಖಾತ್ರಿಪಡಿಸುವಲ್ಲಿ ಸಹಕಾರಿಯಾಗಿರುವುದಲ್ಲದೆ ರೈತರಿಗೆ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ನೀರಿನ ನಿರ್ವಹಣೆ ಮಾಡುವುದಕ್ಕೂ ಸಹಾಯ ಮಾಡಿದೆ. ಯಶಸ್ಸನ್ನು ಡಿಜಿಟಲ್ ಕೃಷಿಗೂ ವಿಸ್ತರಿಸಬಹುದಾಗಿದೆ.

ಸ್ನೇಹಿತರೇ

ಸ್ವಾತಂತ್ರ್ಯದ ಪುಣ್ಯಕರ ಕಾಲಘಟ್ಟದಲ್ಲಿ ನಾವು ಹೆಚ್ಚಿನ ಕೃಷಿ ಬೆಳವಣಿಗೆಯ ಜೊತೆಗೆ ಎಲ್ಲರನ್ನೂ ಒಳಗೊಳ್ಳುವಂತಹ ಬೆಳವಣಿಗೆಗೆ ಆದ್ಯತೆಯನ್ನು ಕೊಡುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಬಹಳ ಪ್ರಮುಖವಾದುದು ಎಂಬುದು ನಿಮಗೆ ತಿಳಿದಿದೆ. ಸ್ವ ಸಹಾಯ ಗುಂಪುಗಳ ಮೂಲಕ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೃಹತ್ ಸಂಖ್ಯೆಯ ಬಡವರನ್ನು ಬಡತನದಿಂದ ಹೊರಗೆ ತರುವ ಮತ್ತು ಉತ್ತಮ ಜೀವನ ವಿಧಾನದತ್ತ ಕೊಂಡೊಯ್ಯುವ ಶಕ್ತಿ ಸಾಮರ್ಥ್ಯ ಕೃಷಿ ಕ್ಷೇತ್ರಕ್ಕೆ ಇದೆ. ಪುಣ್ಯಕರ ಕಾಲಘಟ್ಟವು ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಕೃಷಿಯಲ್ಲಿರುವ ಕಠಿಣ ಪರಿಸ್ಥಿತಿಗಳನ್ನು ನಿವಾರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹೊಸ ಸಾಧ್ಯತೆಗಳನ್ನು ಕಂಡು ಹಿಡಿಯಲಿದೆ. ದೇಶದ ಬಹು ದೊಡ್ಡ ಭಾಗ ನೀರಾವರಿಯ ಕೊರತೆಯಿಂದಾಗಿ ಹಸಿರು ಕ್ರಾಂತಿಯ ಭಾಗವಾಗದೇ ಇರುವುದನ್ನು ನಾವೆಲ್ಲ ನೋಡಿದ್ದೇವೆ. ನಾವೀಗ ದ್ವಿಮುಖ ತಂತ್ರದಲ್ಲಿ ಕಾರ್ಯಾಚರಿಸುತ್ತಿದ್ದೇವೆ. ಒಂದೆಡೆ ನದಿಗಳನ್ನು ಜೋಡಿಸುವ ಮೂಲಕ ಜಲ ಸಂರಕ್ಷಣೆ ಮಾಡಿ ವಿಸ್ತಾರವಾದ ಪ್ರದೇಶವನ್ನು ನೀರಾವರಿ ಅಡಿಯಲ್ಲಿ ತರಲಿದ್ದೇವೆ, ಇನ್ನೊಂದೆಡೆ ಕಡಿಮೆ ನೀರಾವರಿ ಸೌಲಭ್ಯ ಇರುವಲ್ಲಿ ಕಿರು ನೀರಾವರಿಯ ಮೂಲಕ ಜಲ ಬಳಕೆಯಲ್ಲಿ ದಕ್ಷತೆಯನ್ನು ತರಲು ನಾವು ಒತ್ತು ನೀಡುತ್ತಿದ್ದೇವೆ. ನಾನು ಇಲ್ಲಿಯ ಎಲ್ಲಾ ಸಾಧನೆಗಳನ್ನು ಅವಲೋಕಿಸುತಿರುವಾಗ ವಿಜ್ಞಾನಿಗಳು ನೀರಿನ ನಿರ್ವಹಣೆ ಯಶಸ್ಸಿನ ಬಗ್ಗೆ ಮತ್ತು ಬುಂದೇಲ್ಕಂಡದಲ್ಲಿಯಒಂದು ಹನಿ, ಹೆಚ್ಚು ಬೆಳೆಆಂದೋಲನದ ಬಗ್ಗೆ ವಿವರವಾಗಿ ತಿಳಿಸುತ್ತಿದ್ದರು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳು ಮತ್ತು ನೀರಿನ ಕೊರತೆಯಲ್ಲಿಯೂ ಅದರ ಪರಿಣಾಮಗಳನ್ನು ಎದುರಿಸಿ ಬೆಳೆಯುವ ಬೆಳೆಗಳನ್ನು ಆಧುನಿಕ ತಳಿಯ ಬೀಜಗಳ ಮೂಲಕ ಉತ್ತೇಜಿಸಲಾಗುತ್ತಿದೆ. ಖಾದ್ಯ ತೈಲದಲ್ಲಿ ಸ್ವಾವಲಂಬನೆಗಾಗಿ ನಾವು ಆರಂಭಿಸಿರುವ ರಾಷ್ಟ್ರೀಯ ಮಿಷನ್ ನಮ್ಮ ಹೊಸ ಧೋರಣೆಯನ್ನು ತೋರಿಸುತ್ತದೆ. ನಾವು ತಾಳೆ ಎಣ್ಣೆ ಪ್ರದೇಶವನ್ನು ಮುಂದಿನ ಐದು ವರ್ಷಗಳಲ್ಲಿ 6.50 ಲಕ್ಷ ಹೆಕ್ಟೇರಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಭಾರತ ಸರಕಾರವು ನಿಟ್ಟಿನಲ್ಲಿ ರೈತರಿಗೆ ಪ್ರತೀ ಹಂತದಲ್ಲಿಯೂ ನೆರವು ನೀಡುತ್ತಿದೆ. ಮಿಷನ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರಿಗೆ ಬಹಳ ಪ್ರಯೋಜನಕಾರಿಯಾಗಿದೆ. ತೆಲಂಗಾಣದ ರೈತರು ತಾಳೆ ಎಣ್ಣೆ ಪ್ಲಾಂಟೇಶನ್ ಗಳಿಗೆ ಸಂಬಂಧಿಸಿ ಬಹಳ ದೊಡ್ಡ ಗುರಿಗಳನ್ನು ಹಾಕಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಅವರಿಗೆ ಕೇಂದ್ರ ಸರಕಾರವು ಸಾಧ್ಯ ಇರುವ ಎಲ್ಲಾ ಸಹಾಯ  ನೀಡಲಿದೆ.

ಸ್ನೇಹಿತರೇ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೊಯಿಲೋತ್ತರ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ 35 ಮಿಲಿಯನ್ ಟನ್ನಿನಷ್ಟು ಶೀತಲೀಕೃತ ದಾಸ್ತಾನು ಸಾಮರ್ಥ್ಯವನ್ನು ರೂಪಿಸಲಾಗಿದೆ. ಸರಕಾರದ 1 ಲಕ್ಷ ಕೋ.ರೂ.ಗಳ ಕೃಷಿ ಮೂಲಸೌಕರ್ಯ ನಿಧಿ ತ್ವರಿತವಾಗಿ ಕೊಯಿಲೋತ್ತರ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇಂದು ನಾವು ಎಫ್.ಪಿ..ಗಳು ಮತ್ತು ಕೃಷಿ ಮೌಲ್ಯ ಸರಪಳಿಯನ್ನು ರೂಪಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ದೇಶದ ಸಣ್ಣ ರೈತರನ್ನು ಸಾವಿರಾರು ಎಫ್.ಪಿ..ಗಳಾಗಿ ಸಂಘಟಿಸುವ ಮೂಲಕ ನಾವು ಬೃಹತ್ ಮಾರುಕಟ್ಟೆ ಶಕ್ತಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಿದ್ದೇವೆ.

ಸ್ನೇಹಿತರೇ

ಭಾರತದ ಅರೆ ಶುಷ್ಕ ಪ್ರದೇಶಗಳಲ್ಲಿ ಕೆಲಸ ಮಾಡಿದ ಶ್ರೀಮಂತ ಅನುಭವ .ಸಿ.ಆರ್..ಎಸ್..ಟಿ.ಗೆ ಇದೆ. ಆದುದರಿಂದ ನಾವು ಅರೆ ಶುಷ್ಕ ಪ್ರದೇಶಗಳ ರೈತರನ್ನು ಬೆಸೆಯುವ ಮೂಲಕ ಸುಸ್ಥಿರ ಮತ್ತು ವೈವಿಧ್ಯಮಯ ಉತ್ಪಾದನಾ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಬೇಕಾಗಿದೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಜೊತೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ವಿನಿಮಯ ಕಾರ್ಯಕ್ರಮಗಳನ್ನು ಆರಂಭಿಸಬಹುದಾಗಿದೆ. ನಮ್ಮ ಗುರಿ ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವುದು ಮಾತ್ರವಲ್ಲ. ಇಂದು ಭಾರತ ಹೆಚ್ಚುವರಿ ಆಹಾರ ಧಾನ್ಯಗಳನ್ನು ಹೊಂದಿದೆ. ಅದರ ಆಧಾರದ ಮೇಲೆ ನಾವು ವಿಶ್ವದಲ್ಲಿಯೇ ಅತ್ಯಂತ ಬೃಹತ್ ಆಹಾರ ಭದ್ರತಾ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈಗ ನಾವು ಆಹಾರ ಭದ್ರತೆಯ ಜೊತೆಗೆ ಪೋಷಕಾಂಶ ಭದ್ರತೆಯತ್ತಲೂ ಗಮನ ಹರಿಸಿದ್ದೇವೆ. ಚಿಂತನೆಯೊಂದಿಗೆ  ನಾವು ಅನೇಕ ಜೈವಿಕವಾಗಿ ಭದ್ರಪಡಿಸಿದ  ತಳಿಗಳನ್ನು ಕಳೆದ ಏಳು ವರ್ಷಗಳಲ್ಲಿ ಅಭಿವೃದ್ಧಿ ಮಾಡಿದ್ದೇವೆ. ನಮ್ಮ ಕೃಷಿಯನ್ನು ಹೆಚ್ಚು ಹೆಚ್ಚು ವೈವಿಧ್ಯಮಯಗೊಳಿಸಲು, ನಮ್ಮ ಬರಪೀಡಿತ ಪ್ರದೇಶಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಮತ್ತು ರೋಗಗಳಿಂದ ಹಾಗು ಕೀಟಗಳಿಂದ ರಕ್ಷಣೆ ನೀಡುವಂತಹ ಪುನಶ್ಚೇತನಗೊಳಿಸುವ ತಳಿಗಳನ್ನು ರೂಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ.

ಸ್ನೇಹಿತರೇ

.ಸಿ.ಆರ್..ಎಸ್..ಟಿ.ಯು ಇನ್ನೊಂದು ಉಪಕ್ರಮವಾಗಿ ಜೈವಿಕ ಇಂಧನ ಕ್ಷೇತ್ರದಲ್ಲಿ .ಸಿ..ಆರ್. ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ಜೊತೆಗೂಡಿ ಕೆಲಸ ಮಾಡಬಹುದು. ನೀವು ಸಿಹಿ ಬೇಳೆಯ ಮೇಲೆ ಕೆಲಸ ಮಾಡುತ್ತಿರುವಿರಿ. ನೀವು ಬರ ಪೀಡಿತ ಪ್ರದೇಶಗಳ ರೈತರಿಗಾಗಿ ಅಥವಾ ಕಡಿಮೆ ಭೂಮಿ ಇರುವ ರೈತರಿಗಾಗಿ ಉತ್ತಮ ಬೆಳೆ ಬೆಳೆಯುವ ಮತ್ತು ಹೆಚ್ಚು ಜೈವಿಕ ಇಂಧನ ತಯಾರಿಸುವ  ಬೀಜಗಳನ್ನು ಅಭಿವೃದ್ಧಿ ಮಾಡಬಹುದು. ಅವರಿಗೆ ಹೇಗೆ ಸಮರ್ಪಕವಾಗಿ ಬೀಜಗಳನ್ನು ಪೂರೈಸಬಹುದು ಮತ್ತು ಅವರಲ್ಲಿ ಹೇಗೆ ನಂಬಿಕೆಯನ್ನು ಬೆಳೆಸಬಹುದು ಎಂಬ ದಿಕ್ಕಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ.

ಸ್ನೇಹಿತರೇ

ನಿಮ್ಮಂತಹ ಅನ್ವೇಷಣಾಶೀಲ ಮನಸ್ಸುಗಳ ಸಹಾಯದಿಂದ, ಜನತೆಯ ಸಹಭಾಗಿತ್ವದಿಂದ ಮತ್ತು ಸಮಾಜಕ್ಕೆ ಬದ್ಧತೆಯಿಂದ ಇರುವ ಮೂಲಕ ಕೃಷಿಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ. ಇನ್ನಷ್ಟು ಉತ್ತಮ ತಾಂತ್ರಿಕ ಪರಿಹಾರಗಳನ್ನು ಒದಗಿಸುವ ಮೂಲಕ ಭಾರತದ ಮತ್ತು ಜಗತ್ತಿನ  ರೈತರ ಬದುಕನ್ನು ಇನ್ನಷ್ಟು ಸುಧಾರಿಸಲು ನಿಮಗೆ ಸಾಧ್ಯವಾಗಲಿ!. ಹಾರೈಕೆಯೊಂದಿಗೆ, ನಾನು .ಸಿ.ಆರ್..ಎಸ್..ಟಿ.ಯನ್ನು ಪ್ರಮುಖವಾದ ಸಂದರ್ಭದಲ್ಲಿ ಮತ್ತು ಅದರ ಭವ್ಯ ಚರಿತ್ರೆಯ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ದೇಶದ ರೈತರ ಹೆಮ್ಮೆ ಮತ್ತು ಗೌರವಕ್ಕೆ ಅರ್ಹವಾದ ಪ್ರಯತ್ನಗಳನ್ನು ಮಾಡುವಲ್ಲಿ ಅದಕ್ಕೆ ಭವ್ಯ ಭವಿಷ್ಯವಿರಲಿ ಎಂದೂ ನಾನು ಹಾರೈಸುತ್ತೇನೆ. ಶುಭಾಶಯಗಳು ಮತ್ತು ಅಭಿನಂದನೆಗಳು!

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1796125) Visitor Counter : 174