ಪ್ರಧಾನ ಮಂತ್ರಿಯವರ ಕಛೇರಿ
ಮಾಜಿ ಸಂಸದ ಶ್ರೀ ಸಿ ಜಂಗಾ ರೆಡ್ಡಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
05 FEB 2022 12:07PM by PIB Bengaluru
ಮಾಜಿ ಸಂಸದ ಶ್ರೀ ಸಿ ಜಂಗಾ ರೆಡ್ಡಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಧಾನಿ ಅವರು;
"ಶ್ರೀ ಸಿ ಜಂಗಾ ರೆಡ್ಡಿ ಅವರು ಸಾರ್ವಜನಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಜನಸಂಘ ಮತ್ತು ಬಿಜೆಪಿಯನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದ್ದರು. ಅವರು ಹಲವಾರು ಜನರ ಹೃದಯ ಮತ್ತು ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ಜೊತೆಗೆ ಅವರು ಪ್ರೇರೇಪಿಸಿದರು. ಅನೇಕ ಕಾರ್ಯಕರ್ತರು ಅವರ ನಿಧನದಿಂದ ದುಃಖಿತರಾಗಿದ್ದಾರೆ.
ಶ್ರೀ ಸಿ ಜಂಗಾ ರೆಡ್ಡಿಯವರು ಪಕ್ಷದ ಪಥದ ಅತ್ಯಂತ ನಿರ್ಣಾಯಕ ಹಂತದಲ್ಲಿ ಬಿಜೆಪಿಗೆ ಪರಿಣಾಮಕಾರಿ ಧ್ವನಿಯಾಗಿದ್ದರು. ಅವರ ಪುತ್ರನೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ. ಓಂ ಶಾಂತಿ." ಎಂದು ಹೇಳಿದ್ದಾರೆ.
***
(Release ID: 1795789)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam